ಆತ್ಮಹತ್ಯೆ ಯತ್ನ ಮಾಡಿದ ನಿರ್ದೇಶಕ ನಂದ ಕಿಶೋರ್; ಹಳೆ ವಿಡಿಯೋ ವೈರಲ್!

Published : Jun 16, 2023, 03:11 PM ISTUpdated : Jun 16, 2023, 03:12 PM IST
ಆತ್ಮಹತ್ಯೆ ಯತ್ನ ಮಾಡಿದ ನಿರ್ದೇಶಕ ನಂದ ಕಿಶೋರ್; ಹಳೆ ವಿಡಿಯೋ ವೈರಲ್!

ಸಾರಾಂಶ

ಸಿನಿಮಾ ಇಲ್ಲ ಕೆಲಸ ಇಲ್ಲ ದೇಹ ದಪ್ಪಗಾಗುತ್ತಿದ್ದಂತೆ ಮನುಷ್ಯನ ಮನಸ್ಥಿತಿ ಬದಲಾಗುತ್ತದೆ. ನಂದ ಕಿಶೋರ್ ಹಳೆ ವಿಡಿಯೋ ಈಗ ವೈರಲ್ ಆಗುತ್ತಿದೆ. 

2013ರಲ್ಲಿ ವಿಕ್ಟರಿ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿ ಸ್ಟಾರ್ ನಿರ್ದೇಶಕ ಎನ್ನುವ ಪಟ್ಟ ಪಡೆದಿರುವ ನಂದ ಕಿಶೋರ್ ಒಂದು ಸಮಯದಲ್ಲಿ ತುಂಬಾನೇ ಕಷ್ಟ ಪಟ್ಟಿದ್ದಾರೆ. ಕೆಲಸ ಪಡೆಯುವುದಕ್ಕೆ, ತಂಡ ಕಟ್ಟಿಕೊಳ್ಳುವುದಕ್ಕೆ ಹಾಗೂ ನಿರ್ಮಾಪಕರನ್ನು ಹುಡುಕುವುದಕ್ಕೆ. ಈ ಜರ್ನಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕೂಡ ಮಾಡಿದ್ದರು ಎಂದು ದೊಡ್ಡ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರದ ಬಗ್ಗೆ ಕ್ಲಾರಿಟಿ ಕೊಟ್ಟಿರುವ ಹಳೆ ವಿಡಿಯೋ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

'ನಾನು ಬಗ್ಗೆ ಹರಿದಾಡುತ್ತಿದ್ದ ಗಾಳಿ ಮಾತುಗಳು ಸತ್ಯವಾಗಿತ್ತು. ಒಂದಲ್ಲ ಎರಡು ಮಾತುಗಳು ಸತ್ಯವಾಗಿದೆ. ನನ್ನ ತಂದೆ ತೀರಿ ಹೋದಾಗ ನನ್ನ ತೂಕ 250 ಕೆಜಿ ಆಗಿತ್ತು ಮನೆಯಲ್ಲಿ ತುಂಬಾ ಕಷ್ಟ ಅನ್ನೋದು ಇತ್ತು. ಎಲ್ಲೇ ಕೆಲಸಕ್ಕೆ ಹೋದರು ನೀನೆ ಹೀಗಿರುವೆ ನಿನಗೆ ಹೇಗೆ ಕೆಲಸ ಕೊಡುವುದು ಎನ್ನುತ್ತಿದ್ದರು ಏನೇ ಕೆಲಸ ಮಾಡಬೇಕು ಅಂದ್ರು ರೆಕಮೆಂಡ್ ಮಾಡಿಸಿಕೊಂಡು ಅಣ್ಣ ಒಂದು ಚೂರು ಹೇಳಿ ಅಣ್ಣ ಅಂತ ಹೇಳಿಸಬೇಕಿತ್ತು. ಪರ್ವಾಗಿಲ್ಲ ಕಣೋ ದಪ್ಪ ಇದ್ರು ಕೆಲಸ ಮಾಡ್ತಾರೆ ಅಂತ ಹೇಳದ್ರಿ ಕೆಲಸ ಸಿಗುತ್ತಿತ್ತು. ಈ ವಿಚಾರ ನನ್ನ ಮನಸ್ಸಿನಲ್ಲಿ ತುಂಬಾ ಕಾಡುತ್ತಿತ್ತು ಏನೆಂದರೆ ನನ್ನ ಯೋಗ್ಯತೆ ಮೇಲೆ ನನ್ನ ಅರ್ಹತೆ ಮೇಲೆ ನನಗೆ ಕೆಲಸ  ಕೊಡದೆ ಯಾರೋ ಹೇಳ್ತಾರೆ ಅಂತ ಪ್ರತಿ ಸಲ ಭಿಕ್ಷೆ ಬೇಡಬೇಕು ಅನ್ನೋ ಬೇಸರ ಮನಸ್ಸಿನಲ್ಲಿ ಕುಳಿತುಬಿಟ್ಟಿತ್ತು' ಎಂದು ಖಾಸಗಿ ಕನ್ನಡ ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ ನಂದ.

ಕಿಚ್ಚ ಸುದೀಪ್ 46ನೇ ಚಿತ್ರ ಹೊಂಬಾಳೆ ಫಿಲ್ಮ ಜೊತೆ; ಏನಿದು ವೈರಲ್ ಫೋಟೋ?

'ಅದಲ್ಲ ತುಂಬಾ ಪ್ರಯತ್ನ ಪಟ್ಟು ಜರ್ನಿಯಲ್ಲಿರುವ ನಿರ್ಮಾಪಕರನ್ನು ಅನ್‌ಲೈನ್‌ನಲ್ಲಿ ಸಂಪರ್ಕ ಮಾಡಿದೆ ಅವರಿ ಕಥೆ ಹೇಳಿ ಕಥೆ ಒಪ್ಪಿಸಿದೆ ಅವರು ಲಂಬೋದರಿ ಅಂತ ಹೃದಯ ತಜ್ಞ ಒಪ್ಪಿಕೊಂಡು ಸಿನಿಮಾ ಮಾಡಲು ಮುಂದಾದರು.  ನಾಲ್ಕು ಜನ ಸ್ನೇಹಿತರು ಸೇರಿಕೊಂಡು ಪಾರ್ಕ್‌ನಲ್ಲಿ ಕುಳಿತುಕೊಂಡು ಸಿನಿಮಾ ಕಥೆ ರೆಡಿ ಮಾಡುವುದು ಮನೆಯಲ್ಲಿ ಕಾಫಿ ಟೀ ಕೇಳುವವರು ಇರಲಿಲ್ಲ ಹೋಟೆಲ್‌ನಲ್ಲಿ ಕುಳಿತುಕೊಳ್ಳುವಷ್ಟು ದುಡ್ಡಿಲ್ಲ. ಒಂದು ದಿನ ಅವರು ನನ್ನ ಮಗ ಬರ್ತಿದ್ದಾನೆ ಅವನು ನಿಮಗೆ ಅಡ್ವಾನ್ಸ್ ಕೊಡ್ತಾನೆ ಅಂತ ಹೇಳಿದ್ರು ಅವರ ಮಗ ದುಬೈ ವಿಮಾನದಲ್ಲಿ ಬರಬೇಕು ನಾವೆಲ್ಲಾ ಏರ್ಪೋರ್ಟ್‌ಗೆ 7.30 ತಲುಪಿದ್ದೆವು ಯಾರೂ ಬರ್ತಾನೆ ಇಲ್ಲ ಫಸ್ಟ್‌ ಫ್ಲೈ ಬಂತು ಎರಡನೇ ಫ್ಲೈ ಬಂತು ಯಾರೂ ಇಲ್ಲ ಕಾಲ್ ಮಾಡಿದರೆ ಫಿಕ್ ಮಾಡುತ್ತಿಲ್ಲ. ಅಡ್ವಾನ್ಸ್ ಕೊಡ್ತೀನಿ ಅಂತ ಹೇಳಿ ಏನಪ್ಪಾ ಹೀಗೆ ಆಯ್ತು ಅಂತ ಯೋಚನೆ ಶುರುವಾಯ್ತು ಆಗ ನನ್ನ ಸ್ನೇಹಿತರು ಕರೆ ಮಾಡಿ ನಿರ್ಮಾಪಕರು ಕರೆ ಮಾಡಿದ್ದಾರೆ ಮನೆ ಬಳಿ ಬಾ ಎಂದ' ಎಂದು ನಂದ ಹೇಳಿದ್ದಾರೆ.

ಸುದೀಪ್ ಬಗ್ಗೆ ಅವಹೇಳನಕಾರಿ ವಿಡಿಯೋ; ನಿರ್ದೇಶಕ ನಂದ ಕಿಶೋರ್ ಆಕ್ರೋಶ

'ಏನು ಅಂತ ಹೋಗಿ ನೋಡಿದರೆ ನಿರ್ಮಾಪಕರ ಮಗ ಮತ್ತು ಮಗಳು ದುಬೈಯಿಂದ ಹೊರಟಿದ್ದಾರೆ, ಮಗಳ ಜೊತೆ ಇಡೀ ಫ್ಯಾಮಿಲಿ ಇದೆ. ಮಗ ಬೆಂಗಳೂರಿಗೆ ಬರುತ್ತಿದ್ದಾನೆ ಇಡೀ ಫ್ಯಾಮಿಲಿ ಮಂಗಳೂರಿಗೆ ಪ್ರಯಾಣ ಮಾಡಿದೆ. ಮಂಗಳೂರಿಗೆ ಹೋಗುವಾಗ ಅಪಘಾತವಾಗಿ ಇಡೀ ಕುಟುಂಬ ಅಗಲಿದರು. ಇದಕ್ಕಿಂತ ದುರಂತ ಮತ್ತೊಬ್ಬರ ಜೀವನದಲ್ಲಿ ಆಗಲು ಸಾಧ್ಯವೆ? ಒಂದು ಕಡೆ ನನಗೆ ಕೆಲಸ ಇಲ್ಲ ಕನಸು ಈಡೇರುತ್ತಿಲ್ಲ ಮತ್ತೊಂದು ಕಡೆ ಕಷ್ಟ ಪಟ್ಟು ಸಂಪರ್ಕ ಮಾಡುತ್ತಿದ್ದರೂ ಇಷ್ಟೊಂದು ಬ್ಯಾಡ್ ಲಕ್. ಇಷ್ಟೆಲ್ಲಾ ಆದ್ಮೇಲೆ ಮನುಷ್ಯ ಬದುಕಿ ಏನು ಮಾಡಬೇಕು' ಎಂದು ಹೇಳುವ ಮೂಲಕ ಕ್ಲಾರಿಟಿ ನೀಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್