ರಮ್ಯಾ ಇಲ್ಲ ಅನ್ನೋ ಬೇಜಾರಿದೆ, ಅವ್ರು ರಾಜಕೀಯದಲ್ಲಿ ಬೆಳೆಯಲಿ: ನಿರ್ದೇಶಕ ನಾಗಶೇಖರ್

Published : Jul 25, 2023, 02:48 PM ISTUpdated : Jul 25, 2023, 03:00 PM IST
ರಮ್ಯಾ ಇಲ್ಲ ಅನ್ನೋ ಬೇಜಾರಿದೆ, ಅವ್ರು ರಾಜಕೀಯದಲ್ಲಿ ಬೆಳೆಯಲಿ: ನಿರ್ದೇಶಕ ನಾಗಶೇಖರ್

ಸಾರಾಂಶ

ರಮ್ಯಾ ಔಟ್ ಆಗಿ ರಚಿತಾ ರಾಮ್ ಎಂಟ್ರಿ ಕೊಡಲು ಕಾರಣವೇನು? ಸಂಜು ವೆಡ್ಸ್ ಗೀತಾ ಸಿನಿಮಾ ಬಗ್ಗೆ ನಿರ್ದೇಶಕ ನಾಗಶೇಖರ್ ಮಾತು... 

2011ರ ರೊಮ್ಯಾಂಟಿಕ್ ಸಿನಿಮಾ ಸಂಜು ವೆಡ್ಸ್‌ ಗೀತಾ  ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ ನಾಯಕಿಯಾಗಿ ಮಿಂಚಿದ್ದರು. ಈಗ ಭಾಗ ಎರಡು ಮಾಡಲು ನಿರ್ದೇಶಕ ನಾಗಶೇಕರ್ ಮುಂದಾಗಿದ್ದಾರೆ. ಸಿನಿಮಾ ಬರುತ್ತಿದೆ ಅನ್ನೋ ಖುಷಿಗಿಂತ ರಮ್ಯಾ ಇರಲ್ಲ ಅನ್ನೋ ಬೇಸರವೇ ಜಾಸ್ತಿ. ಯಾಕೆ ರಮ್ಯಾ ಇರಲ್ಲ ರಚಿತಾ ರಾಮ್ ಇದ್ದಾರೆ ಅನ್ನೋ ಪ್ರಶ್ನೆಗೆ ನಾಗಶೇಖರ್ ಉತ್ತರ ಕೊಟ್ಟಿದ್ದಾರೆ.

'ಬಹಳ ಹಿಂದೆ ಸಂಜು ವೆಡ್ಸ್ ಗೀತಾ ಸಿನಿಮಾ ಪ್ಲ್ಯಾನ್ ಮಾಡಿದ್ದೆ ಆದರೆ ಸಾಂಗ್ ಆಗಬೇಕಿತ್ತು ಏಕೆಂದರೆ ಸಾಂಗ್ಸ್ ಆಗಿಲ್ಲ ಅಂದ್ರೆ ಸಿನಿಮಾ ಕೂರುವುದಿಲ್ಲ. ಸಾಂಗ್ ಬಂದ್ಮೇಲೆ ಕಥೆ ಬಿಲ್ಡ್ ಮಾಡಿದ್ದು. ರಮ್ಯಾ ಅವರೇ ನಾಯಕಿ ಆಗಬೇಕು ಅನ್ನೋ ಆಸೆ ತುಂಬಾನೇ ಇತ್ತು ನನಗೆ ಆದರೆ ಇಲ್ಲ. ರಮ್ಯಾ ಇಲ್ಲ ಅನ್ನೋದೆ ನನಗೆ ನೋವು ಏಕೆಂದರೆ ಸಂಜು ವೆಡ್ಸ್ ಗೀತಾ ಅವರ ಲೇಬಲ್, ಸಂಪರ್ಕ ಮಾಡಬೇಕು ಅನ್ಕೊಂಡೆ ಆದರೆ ಅವರು ರಾಜಕೀಯದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ ರಾಜಕೀಯದಲ್ಲಿ ಅವರು ಮೇಲೆ ಬರಬೇಕು ಅನ್ನೋ ಆಸೆ ಅವರ ಟೈಂ ವೇಸ್ಟ್ ಮಾಡುವುದು ಬೇಡ. ರಮ್ಯಾ ಇಲ್ಲ ಅಂದ್ರೆ ಯಾರು ಅನ್ನೋ ಯೋಚನೆ ಬಂದಿತ್ತು ಆಗ ತ್ರಿಷಾ ಅವರನ್ನು ಸಂಪರ್ಕ ಮಾಡಿದೆ ರಚಿತಾ ಕೂಡ ಕಥೆ ಕೇಳಿ ತುಂಬಾ ಎಕ್ಸೈಟ್ ಆಗಿಬಿಟ್ಟರು..ಕಲಾವಿದರಲ್ಲಿ ಆ ಎಕ್ಸೈಟ್ಮೆಂಟ್ ಬೇಕು ..ಸಿನಿಮಾ ಕಮರ್ಷಿಯಲ್ ಆದ್ರೆ ಮಾತ್ರ ಸಾಲದು ಪಾತ್ರ ಪೋಷಣೆ ಮಾಡಬೇಕು. ನಮ್ಮ ಅನುಕೂಲಕ್ಕೆ ತಕ್ಕಂತೆ ರಚಿತಾ ರಾಮ್ ಡೇಟ್ ಫಿಕ್ಸ್ ಮಾಡಿಕೊಟ್ಟಿದ್ದಾರೆ ಆಕೆ ಒಳ್ಳೆ ಕಲಾವಿದೆ ಖಂಡಿತಾ ಚೆನ್ನಾಗಿ ಅಭಿನಯಿಸುತ್ತಾರೆ' ಎಂದು ಖಾಸಗಿ ಟಿವಿ ಯುಟ್ಯೂಬ್ ಚಾನೆಲ್‌ನಲ್ಲಿ ನಾಗಶೇಖರ್ ಮಾತನಾಡಿದ್ದಾರೆ.

ಸಂಜು ವೆಡ್ಸ್ ಗೀತಾ-2 ಚಿತ್ರದಿಂದ ರಮ್ಯಾ ಔಟ್; ರಚಿತಾ ರಾಮ್ ನಾಯಕಿ?

'ರಮ್ಯಾ ಆಪ್ತ ಬಳಗದಲ್ಲಿ ಸಂಪರ್ಕ ಮಾಡಲು ಪ್ರಯತ್ನ ಮಾಡಿದೆ ಆಗ ಫಾರಿನ್‌ನಲ್ಲಿದ್ದರು. ಈ ಸಿನಿಮಾವನ್ನು ಮಳೆಗಾಲದಲ್ಲಿ ಚಿತ್ರೀಕರಣ ಮಾಡುವ ಪರಿಸ್ಥಿತಿ ಎದುರಾಗಿತ್ತು ಆಗ ಡೇಟ್ಸ್‌ ಸಿಗದೇ ಹೋದರೆ ಅನ್ನೋ ಯೋಚನೆ ಶುರುವಾಗಿತ್ತು ಅಲ್ಲದೆ ನನ್ನ ಕನಸನ್ನು ಹಾಳು ಮಾಡಿಕೊಳ್ಳಲು ಆಗಲ್ಲ ಹೀಗಾಗಿ ಪ್ರೆಸೆಂಟ್ಸ್‌ನಲ್ಲಿ ರಮ್ಯಾ ಹೆಸರು ಇಡಬೇಕು ಎಂದು ಪ್ಲ್ಯಾನ್ ಮಾಡಿದೆ. ಸಂಜು ವೆಡ್ಸ್‌ ಗೀತಾ ಸಿನಿಮಾ ಇಷ್ಟು ವರ್ಷ ಉಳಿದುಕೊಂಡಿದೆ ಅಂದ್ರೆ ಅದಕ್ಕೆ ರಮ್ಯಾ ಮತ್ತು ಅವರ ತಂದೆ ಕಾರಣ ಹೀಗಾಗಿ ಖಂಡಿತಾ ಪ್ರೆಸೆಂಟ್ಸ್‌ನಲ್ಲಿರುತ್ತಾರೆ' ಎಂದು ನಾಗಶೇಖರ್ ಹೇಳಿದ್ದಾರೆ.

ರಮ್ಯಾ ಲೇಡಿ ಸೂಪರ್‌ಸ್ಟಾರ್, ಅವರ ಮೇಲೆ ಬೇಜಾರಿಲ್ಲ: 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ನಿರ್ದೇಶಕ ನಿತಿನ್

'ಮ್ಯೂಸಿಕ್‌ ತುಂಬಾ ಮುಖ್ಯವಾಗಿರುವ ಕಾರಣ ವಿ. ಶ್ರೀಧರ್‌ ಅವರನ್ನು ತಂಡಕ್ಕೆ ಬರ ಮಾಡಿಕೊಳ್ಳುತ್ತಿರುವೆ ಜೆಸ್ಸಿ ಗಿಫ್ಟ್‌ ಇರುವುದಿಲ್ಲ. ಮರೆಯಾಗಿರುವವರಿಗೆ ಅವಕಾಶ ಕೊಟ್ಟು ಕರೆ ತರುವುದು ನಿರ್ದೇಶಕರಾಗಿ ನನ್ನ ಕರ್ತವ್ಯ. ಕಿಟ್ಟಗೆ ಸಿನಿಮಾ ಎಕ್ಸೈಟ್ ಆಗಿದ್ದಾರೆ ಏಕೆಂದರೆ ಇದು ಹಿಸ್ಟರ್ ಕ್ರಿಯೇಟ್ ಮಾಡಿರುವ ಸಿನಿಮಾ ಈ ಕಥೆಗೆ ಹೊಸತನ ಹೇಳಬೇಕು ಅಂದ್ರೆ ಕಷ್ಟ. ಶ್ರೀನಗರ ಕಿಟ್ಟ ಒಂದೇ ಹೇಳಿದ್ದರು ಮ್ಯೂಸಿಕ್ ಚೆನ್ನಾಗಿರಬೇಕು ಎಂದು. ಮ್ಯೂಸಿಕ್ ಕಂಪೋಸ್ ಮಾಡುವಾಗಲೇ ಸಿನಿಮಾ ತೂಕ ಹೆಚ್ಚಾಗಿದೆ. ರಚಿತಾ ರಾಮ್ ಕೂಡ ಸಂಗೀತ ಬಗ್ಗೆ ಕೇಳಿದರು... ಅವರಿಗೆ ಕಥೆ ಹೇಳಿದ ಮೇಲೆ ಮ್ಯೂಸಿಕ್ ತೋರಿಸಿದೆ ಇಷ್ಟ ಪಟ್ಟರು' ಎಂದಿದ್ದಾರೆ ನಾಗಶೇಕರ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!