ಧ್ರುವ ಸರ್ಜಾ ಇನ್ನೂ ಎಳಸು ಅಷ್ಟು ಶಕ್ತಿ ಇಲ್ಲ, ರಾಯನ್‌ಗೂ ಅವನಿಗೂ ವ್ಯತ್ಯಾಸವಿಲ್ಲ: ಮೇಘನಾ ರಾಜ್

By Vaishnavi ChandrashekarFirst Published Jul 24, 2023, 3:42 PM IST
Highlights

ಅಣ್ಣನ ಮೇಲೆ ತುಂಬಾ ಪ್ರೀತಿ ಇದೆ ಆದರೆ ಶಿವಣ್ಣ ಅವರಷ್ಟು ಶಕ್ತಿ ಇಲ್ಲ. ಧ್ರುವ ಸೇಮ್ ರಾಯನ್ ತರನೇ ಎಂದು ಮೇಘನಾ ರಾಜ್.. 

ತತ್ಸಮ ತದ್ಭವ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಮೇಘನಾ ರಾಜ್ ಇದೀಗ ಪತಿ ಚಿರಂಜೀವಿ ಸರ್ಜಾ ಕೊನೆ ಸಿನಿಮಾ ರಾಜಮಾರ್ತಾಂಡ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ರಾಯನ್‌ ಕೂಡ ಈ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿರುವುದು. ಹೀಗೆ ಖಾಸಗಿ ಕನ್ನಡ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಧ್ರುವ ಬಗ್ಗೆ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. 

'ರಾಜ ಮಾರ್ತಾಂಡ ಸಿನಿಮಾದಲ್ಲಿ ರಾಯನ್ ರಾಜ್ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾನೆ. ಟ್ರೈಲರ್ ಮಾತ್ರವಲ್ಲ ಇಡೀ ಸಿನಿಮಾಗೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ನನ್ನ ಕಡೆಯಿಂದ ಸಿನಿಮಾಗೆ ಯಾವ ರೀತಿ ಕಾಂಟ್ರಿಬ್ಯೂಟ್ ಮಾಡುತ್ತಿರುವೆ ಅಂದ್ರೆ ಸಿನಿಮಾ ಪ್ರಚಾರದಿಂದ ಹಿಡಿದು ಸಿನಿಮಾ ರಿಲೀಸ್‌ವರೆಗೂ ನನ್ನ ಸಂಪೂರ್ಣ ಬೆಂಬಲ ಸಿಗುತ್ತದೆ. ಹೀಗಾಗಿ ರಾಜ ಮಾರ್ತಾಂಡ ನನ್ನ ಸಿನಿಮಾ ಅಂತ ಹೇಳುವುದರಲ್ಲಿ ತಪ್ಪಿಲ್ಲ' ಎಂದು ಮೇಘನಾ ರಾಜ್ ಮಾತನಾಡಿದ್ದಾರೆ. 

Latest Videos

ಎರಡನೇ ಮದ್ವೆ ಬಗ್ಗೆ ಯಾರೂ ಬಂದು ಕೇಳಿಲ್ಲ; ತುಂಬಾ ಕ್ಲಿಯರ್ ಉತ್ತರ ಕೊಟ್ಟ ಮೇಘನಾ ರಾಜ್!

ಚಿರಂಜೀವಿ ಸರ್ಜಾ 3ನೇ ಪುಣ್ಯಸ್ಮರಣೆ ಸಮಯದಲ್ಲಿ ನಾನು ಶಿವಣ್ಣ ಅವರಷ್ಟು ಸ್ಟ್ರಾಂಗ್ ಆಗಲ್ಲಿ ಏಕೆಂದರೆ ನಾನು ರಾಜಾ ಮಾರ್ತಾಂಡ ಸಿನಿಮಾ ಡಬ್ಬಿಂಗ್ ಮಾಡುವಾಗ ಸ್ಕ್ರೀನ್‌ನಲ್ಲಿ ನನ್ನ ಅಣ್ಣನೇ ಕಾಣಿಸುವುದು ಎಂದು. ಈ ವಿಚಾರದ ಬಗ್ಗೆ ನಿರೂಪಕ ಪ್ರಶ್ನೆ ಮಾಡಿದಾಗ 'ರಾಜಾ ಮಾರ್ತಾಂಡ ಸಿನಿಮಾ ಡಬ್ಬಿಂಗ್ ಮಾಡುವುದಕ್ಕೆ ಧ್ರುವ ಸರ್ಜಾ ತುಂಬಾನೇ ಕಷ್ಟ ಪಡುತ್ತಿದ್ದ ಅವನಿಗೆ ಆಗುತ್ತಿರಲಿಲ್ಲ ಡಬ್ಬಿಂಗ್ ಮಾಡಲು. ಚಿರು ಮತ್ತು ಧ್ರುವ ಬಾಂಡ್ ತುಂಬಾನೇ ಸ್ಟ್ರಾಂಗ್ ಆಗಿತ್ತು. ತಂದೆ ತಾಯಿಗಿಂತ ಜಾಸ್ತಿ ಪ್ರೀತಿಕೊಟ್ಟು ಧ್ರುವ ಸರ್ಜಾನ ನೋಡಿಕೊಳ್ಳುತ್ತಿದ್ದರು ಹೀಗಾಗಿ ಅಣ್ಣ ಅಂದ್ರೆ ಅಷ್ಟು ಪ್ರೀತಿ ಧ್ರುವಗೆ. ನೀನು ಹೋಗು ಡಬ್ಬಿಂಗ್ ಮಾಡು ಅಂತ ಧ್ರುವಗೆ ಹೇಳಲು ಆಗುತ್ತಿರಲಿಲ್ಲ ನನಗೆ ಅರ್ಥ ಆಗುತ್ತಿತ್ತು ಯಾಕೆ ಧ್ರುವ ತಡ ಮಾಡುತ್ತಿದ್ದಾರೆ ಅಂತ ಆದರೆ ಅದನ್ನು ಒಬ್ಬರಿಗೆ ಹೇಗೆ ಹೇಳುತ್ತೀರಾ? ಫಿಸಿಕಲಿ ಅಣ್ಣನ ವಿಡಿಯೋ ಎದುರು ನಿಂತುಕೊಂಡು ಎಬ್ಬಿಂಗ್ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಮನೆಯಲ್ಲಿ ನಮಗೆ ಧ್ರುವ ಸಿನಿಮಾ ನೋಡುವಷ್ಟು ಶಕ್ತಿ ಇರಲಿಲ್ಲ ಹೀಗಿರುವಾಗ ಡಬ್ಬಿಂಗ್ ಕಷ್ಟ. ಧ್ರುವ ಹೇಳಿರುವುದು ನಿಜವೇ ಶಿವಣ್ಣ ಅವರಿಗೆ ಜೀವನ ಎಕ್ಸಪೀರಿಯನ್ಸ್ ಇದೆ ಧ್ರುವ ಸರ್ಜಾಗಿಂತ ತುಂಬಾ ಸೀನಿಯರ್, ವರ್ಷ ಕಳೆಯುತ್ತಿದ್ದಂತೆ ಆ ಒಂದು ಶಕ್ತಿನ ಪಡೆದುಕೊಂಡು ಬಂದಿದ್ದಾರೆ ಆದರೆ ಧ್ರುವ ಇನ್ನು ಎಳಸು ಅಷ್ಟು ಶಕ್ತಿ ಇನ್ನು ಬಂದಿಲ್ಲ ನೋಡಲು ಕಟ್ಟುಮಸ್ತು ರಫ್‌ ಆಗಿರಬಹುದು ಆದರೆ ಇಲ್ಲ. ಪಾಪಾ ರಾಯನ್ ಮತ್ತು ಧ್ರುವನಿಗೂ ವ್ಯತ್ಯಾಸವೇ ಇಲ್ಲ. ಎಂದು ಮೇಘನಾ ರಾಜ್ ಹೇಳಿದ್ದಾರೆ. ಯಾಕೆ ಇಲ್ಲಿ ಶಿವಣ್ಣ ಹೆಸರು ಬಂದಿದೆ ಅಂದ್ರೆ ಶಂಕರ್ ನಾಗ್ ಅಗಲಿದಾಗ ಅನಂತ್‌ ನಾಗ್‌ ಕೂಡ ಇದೇ ಪರಿಸ್ಥಿತಿ ಎದುರಿಸಿದರು, ಪುನೀತ್ ರಾಜ್‌ಕುಮಾರ್ ಅಗಲಿದಾಗ ಶಿವಣ್ಣ ಕೂಡ ಇದೇ ಸ್ಥಾನದಲ್ಲಿದ್ದರು.

ನಮಸ್ತೆ ಅಪ್ಪ ನಮಸ್ತೆ ಅಪ್ಪ ಎಂದು ಚಿರು ಸಮಾಧಿ ಮುಂದೆ ಕಣ್ಣೀರಿಟ್ಟ ರಾಯನ್!

'ಮೊದಲು ನಾವೆಲ್ಲಾ ಸೇರಿಕೊಂಡು ಎಂಜಾಯ್ ಮಾಡುವ ಬಾಂಡ್ ಇತ್ತು ಆದರೆ ಮಕ್ಕಳು ಹುಟ್ಟಿದ ಮೇಲೆ ಮಾತುಕತೆ ಅವರ ಬಾಂಡ್ ಅವರಿಬ್ಬರ ನಡುವೆ ಇರುವ ತುಂಟಾಟ ಎಂಜಾಯ್ ಮಾಡುತ್ತೀದ್ದೀವಿ. ಮಕ್ಕಳು ಬಂದ್ಮೇಲೆ ನಾವು ದೊಡ್ಡವಾಗಿದ್ದಾರೆ. ಪುಟ್ಟ ಮಕ್ಕಳು ಮನೆಯಲ್ಲಿದ್ದಾಗ ನಮ್ಮ ಗಮನ ಅವರ ಮೇಲಿರುತ್ತದೆ' ಎಂದು ಫ್ಯಾಮಿಲಿ ಟೈಂ ಬಗ್ಗೆ ಹೇಳಿದ್ದಾರೆ. 

click me!