ಭಾವ ತೀರ ಯಾನಕ್ಕೆ ಕೃಷ್ಣ ರಾಧೆಯರ ಪ್ರೇಮಕಥೆ ಸ್ಫೂರ್ತಿ: ನಿರ್ದೇಶಕ ಮಯೂರ್‌ ಅಂಬೆಕಲ್ಲು

Published : Feb 20, 2025, 04:54 PM ISTUpdated : Feb 20, 2025, 05:15 PM IST
ಭಾವ ತೀರ ಯಾನಕ್ಕೆ ಕೃಷ್ಣ ರಾಧೆಯರ ಪ್ರೇಮಕಥೆ ಸ್ಫೂರ್ತಿ: ನಿರ್ದೇಶಕ ಮಯೂರ್‌ ಅಂಬೆಕಲ್ಲು

ಸಾರಾಂಶ

‘ಭಾವ ತೀರ ಯಾನ ಪ್ರೇಮದ ಹೊಸ ಆಯಾಮದ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ. ಇಲ್ಲೊಂದು ಪರಿಶುದ್ಧ ಪ್ರೇಮವಿದೆ. ಇದಕ್ಕೆ ಕೃಷ್ಣ ರಾಧೆಯರೇ ಸ್ಫೂರ್ತಿ’ ಎಂದು ನಿರ್ದೇಶಕ ಮಯೂರ್‌ ಅಂಬೆಕಲ್ಲು ಹೇಳಿದ್ದಾರೆ. 

‘ಭಾವ ತೀರ ಯಾನ ಪ್ರೇಮದ ಹೊಸ ಆಯಾಮದ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ. ಇಲ್ಲೊಂದು ಪರಿಶುದ್ಧ ಪ್ರೇಮವಿದೆ. ಇದಕ್ಕೆ ಕೃಷ್ಣ ರಾಧೆಯರೇ ಸ್ಫೂರ್ತಿ’ ಎಂದು ನಿರ್ದೇಶಕ ಮಯೂರ್‌ ಅಂಬೆಕಲ್ಲು ಹೇಳಿದ್ದಾರೆ. ಮಯೂರ್‌ ಹಾಗೂ ತೇಜಸ್‌ ಕಿರಣ್‌ ನಿರ್ದೇಶನದ ‘ಭಾವ ತೀರ ಯಾನ’ ಸಿನಿಮಾ ಫೆ.21ಕ್ಕೆ ಬಿಡುಗಡೆಯಾಗಲಿದೆ. ‘ತೇಜಸ್‌ ಹಾಗೂ ನಾನು ಕಾಲೇಜು ಸ್ನೇಹಿತರು. ಕಾಲೇಜು ದಿನದಿಂದಲೇ ಸಿನಿಮಾ ಬಗ್ಗೆ ಚರ್ಚಿಸುತ್ತ ಶಾರ್ಟ್‌ ಮೂವಿ ಮಾಡಿಕೊಂಡು ಬೆಳೆದವರು. ಈ ಹಿಂದೆ ಶಾಖಾಹಾರಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾಗ, ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸಿನಿಮಾ ಮಾಡುವ ಹುಮ್ಮಸ್ಸು ಬಂತು. 

ಮೂರು ವರ್ಷಗಳ ಶ್ರಮ ಭಾವ ತೀರ ಯಾನ ಸಿನಿಮಾದ ಹಿಂದಿದೆ. ನಿಜವಾದ ಪ್ರೀತಿ, ಟ್ರಯಾಂಗಲ್‌ ಲವ್‌ಸ್ಟೋರಿ, ಊಹಿಸಲಸಾಧ್ಯ ಕ್ಲೈಮ್ಯಾಕ್ಸ್‌, ಹೊಸ ಸಾಧ್ಯತೆಗಳು ಸಿನಿಮಾ ಹೈಲೈಟ್‌’ ಎಂದೂ ಮಯೂರ್‌ ಹೇಳಿದ್ದಾರೆ. ಮತ್ತೋರ್ವ ನಿರ್ದೇಶಕ, ನಾಯಕ ತೇಜಸ್‌ ಕಿರಣ್‌, ‘ಹೊಸ ವಿಚಾರವೊಂದರ ಭಾವಪೂರ್ಣ ಪ್ರಸ್ತುತಿ ನಮ್ಮ ಸಿನಿಮಾದ ವಿಶೇಷತೆ’ ಎಂದರು. ಶೈಲೇಶ್‌, ಲಕ್ಷ್ಮಣ ಬಿಕೆ ನಿರ್ಮಾಪಕರು. ಫೆ.21ಕ್ಕೆ ಸಿನಿಮಾ ತೆರೆಗೆ ಬರಲಿದೆ. ಆರೋಹಿ ನೈನಾ, ಚಂದನಾ ಅನಂತಕೃಷ್ಣ ಹಾಗೂ ಅನೂಷಾ ಕೃಷ್ಣ ಈ ಸಿನಿಮಾದ ನಾಯಕಿಯರು.

ಈ ಚಿತ್ರವು ಪ್ರೇಮದ ಸುತ್ತ ಆಪ್ತ ರೀತಿಯಲ್ಲಿ ಮೂಡಿ ಬಂದಿದೆ. 5 ಹಾಡುಗಳಿದ್ದು, ಇದರ ಸಂಗೀತದ ಹೊಣೆಯನ್ನು ಮಯೂರ್ ಅಂಬೇಕಲ್ ಹೊತ್ತಿದ್ದಾರೆ. ವಾಸುಕಿ ವೈಭವ್, ಇನ್ನಿತರರು ಹಾಡಿದ್ದಾರೆ. ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡುಗಳು ಅಪಾರ ಜನಮನ್ನಣೆ ಗಳಿಸಿವೆ ಎಂದರು. ನಟಿ ಅನುಷಾ ಕೃಷ್ಣ ಮಾತನಾಡಿ, ನಾನು ಶಿವಮೊಗ್ಗದ ಮಗಳು. ಇದು ನನಗೆ ಹೆಮ್ಮೆ ಇದೆ. ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರವಿದ್ದು, ಸ್ನೇಹದ ಮಹತ್ವವನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ. ಮಲೆನಾಡಿನ ನಂಟು ನನಗಿದ್ದು, ಸಾಗರ, ಕಾರ್ಗಲ್‌ನಲ್ಲಿ ನನ್ನು ಬಾಲ್ಯದ ದಿನ ಕಳೆದಿದ್ದೇನೆ. ಈ ಚಿತ್ರವು ಪ್ರೀತಿ ಪ್ರೇಮದ ಸುತ್ತವಿದ್ದರೂ ಕೂಡ ಇದಕ್ಕೊಂದು ವಿಶೇಷತೆ ಇದೆ. ಒಳ್ಳೆಯ ಸಂದೇಶ ಕೂಡ ಸಿನಿಮಾದಲ್ಲಿದೆ ಎಂದು ಹೇಳಿದರು.

ನಮ್ಮ ಸಿನಿಮಾ ನಾಯಕ ರೀಲ್ಸ್‌ ಮಾಡೋ ಹುಡುಗರ ಪ್ರತಿನಿಧಿ: ನಿರ್ದೇಶಕ ಹಯವದನ

ನಿರ್ದೇಶಕ ಮಯೂರ್ ಅಂಬೇಕಲ್ ಮಾತನಾಡಿ, ಪ್ರೀತಿ, ಪ್ರೇಮ, ಭಾವನೆ, ಲವಲವಿಕೆ, ಇಂಪಾದ ಹಾಡುಗಳು, ಪ್ರೇಮದ ಉನ್ನತೀಕರಣ, ಮನರಂಜನೆ, ಒಂದಿಷ್ಟು ಕಾಮಿಡಿ ಇವೆಲ್ಲವೂ ಹಿತಮಿತವಾಗಿ ಚಿತ್ರದಲ್ಲಿವೆ. ಇಂದು ಕುಟುಂಬಸಮೇತ ನೋಡುವ ಚಿತ್ರಗಳು ತುಂಬಾ ಕಡಿಮೆ. ಆದರೆ ನಮ್ಮ ಭಾವತೀರ ಯಾನ ಕುಟುಂಬಸಮೇತ ನೋಡುವ ಚಿತ್ರವಾಗಿದೆ ಎಂದರು. ನಟ ತೇಜಸ್ ಕಿರಣ್, ನಟಿ ಆರೋಹಿ ನೈನಾ ಮಾತನಾಡಿ, ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ಕನ್ನಡ ಚಿತ್ರರಸಿಕರು ಫೆ.21ರಂದು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!