
ನಟ ದರ್ಶನ್ ಪ್ರಕರಣದಲ್ಲಿ ಸಾಕ್ಷಿ ನುಡಿದ ಬಳಿಕ ನಟ ಚಿಕ್ಕಣ್ಣ ಸುದ್ದಿಯೇ ಇರಲಿಲ್ಲ. ಅವರ ಪಾಡಿಗೆ ಅವರಾಯ್ತು, ಸಿನಿಮಾ ಶೂಟಿಂಗ್ ಆಯ್ತು ಎಂಬಂತಿದ್ದ ನಟ ಚಿಕ್ಕಣ್ಣರ ಸೀಕ್ರೆಟ್ ಕೊನೆಗೂ ರಿವೀಲ್ ಆಗೋಯ್ತು.. ಉಪಾಧ್ಯಕ್ಷ ಸಿನಿಮಾ ಹಿಟ್ ಆದ ಬಳಿಕ, ನಟ ಚಿಕ್ಕಣ್ಣ ಹೆಚ್ಚೂಕಡಿಮೆ ಕಳೆದೇ ಹೋಗಿದ್ದಾರೆ ಎಂಬಂತೆ ಆಗಿತ್ತು. ಆದರೆ, ಲಕ್ಷ್ಮೀ ಪುತ್ರ ಸಿನಿಮಾ ಶೂಟಿಂಗ್ ನಡಿತಿದೆ ಎಂಬ ಸುದ್ದಿ ಬಿಟ್ಟರೆ ನಟ ಚಿಕ್ಕಣ್ಣ ಸೌಂಡ್ ಇರಲಿಲ್ಲ.
ಆದರೆ ಈಗ ನಟ ಚಿಕ್ಕಣ್ಣ ಅವರ ಸೀಕ್ರೆಟ್ ಕೊನೆಗೂ ರಿವೀಲ್ ಆಗಿದೆ.. ಅದೇನು ಅನ್ನೋ ಕುತೂಹಲ ನಿಮ್ಗೆ ಇದ್ರೆ ಖಮಡಿತ ಈ ಸ್ಟೋರಿ ನಿಮಗೇ ಅಂದ್ಕೊಂಡು ನೋಡಿ.. ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪೈಕಿ 'ಉಪಾಧ್ಯಕ್ಷ' ಕೂಡ ಒಂದು. ಚಿಕ್ಕಣ್ಣ ನಾಯಕನಟರಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಅದಾದ ಬಳಿಕ ಸಖತ್ ಚ್ಯೂಸಿಯಾಗಿರುವ ಚಿಕ್ಕಣ್ಣ, ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಕೇಳಿ ಕೆಲವೊಂದನ್ನು ಮಾತ್ರ ಫೈನಲ್ ಮಾಡಿದ್ದಾರೆ. ಅದರಲ್ಲಿ ಈಗ ಒಂದು ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ನಟ ಚಿಕ್ಕಣ್ಣ ತೀರಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸ್ಟಾರ್ ನಟರ ಕೈ ತಪ್ಪಿದ ಸಿನಿಮಾಗಳಿವು, ಅವ್ರ ಫ್ಯಾನ್ಸ್‌ಗೆ ಹೇಳ್ಬೇಡಿ.. ಜಸ್ಟ್ ನೋಡಿ..!
ಸದ್ಯ 'ಲಕ್ಷ್ಮಿ ಪುತ್ರ' ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಚಿಕ್ಕಣ್ಣ, ಅದಾದ ಬಳಿಕ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈವರೆಗೂ ಮಾಡಿರದ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ಅವರು, ವಿಭಿನ್ನ ಕಥಾಹಂದರದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಚಿತ್ರವನ್ನು ನಿರ್ಮಿಸಿದ್ದ ಸೋಮಶೇಖರ್ ಕಟ್ಟಿಗೇನಹಳ್ಳಿ ಅವರ ನಿರ್ಮಾಣದಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸುತ್ತಿದ್ದಾರೆ.
ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಸೋಮಶೇಖರ್ ಕಟ್ಟಿಗೇನಹಳ್ಳಿ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಈ ಚಿತ್ರದ ನಿರ್ದೇಶಕರು ಯಾರು, ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ. ಒಟ್ಟಿನಲ್ಲಿ, ನಟ ಚಿಕ್ಕಣ್ಣ ಅಭಿಮಾನಿಗಳಿಗೆ ಈಗ ಖುಷಿ ಸಮಾಚಾರ ಸಿಕ್ಕಿದೆ!
ಶ್ರೇಯಾ ಘೋಷಾಲ್ ಹಾರ್ಟ್ ಓಲ್ಡ್ ಅಂತೆ.. ಐಶ್ವರ್ಯಾ ರೈ ಬಗ್ಗೆ ಈ ಸಿಂಗರ್ ಹೀಗ್ ಹೇಳೋದಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.