
‘ನಮ್ಮ ಸಿನಿಮಾದಲ್ಲಿ ಬೆಂಗಳೂರಿಂದ ಹಿಮಾಚಲದ ಸ್ಪಿಟಿ ವ್ಯಾಲಿ ತನಕದ ಜರ್ನಿ ಇದೆ. ಅಪ್ಪ ಮಗನ ನಡುವಿನ ಸಂಘರ್ಷ ಇದೆ. ರೀಲ್ಸ್ ಮಾಡೋ ಹುಡುಗ್ರಿಗೆಲ್ಲ ಪ್ರತಿನಿಧಿಯಂತೆ ನಮ್ಮ ಸಿನಿಮಾದ ನಾಯಕ ಇರುತ್ತಾನೆ’ ಎಂದು ನಿರ್ದೇಶಕ ಹಯವದನ ಹೇಳಿದ್ದಾರೆ. ಇವರ ನಿರ್ದೇಶನದ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸಿನಿಮಾ ಫೆ.21ಕ್ಕೆ ಬಿಡುಗಡೆಯಾಗಲಿದೆ.
ಎಲ್ಲೋ ಜೋಗಪ್ಪ ನಿನ್ನರಮನೆ ಹುಡುಕಾಟದ ಕಥೆ. ಟ್ರೇಲರ್ ನಲ್ಲಿ ಒಂದು ಡೈಲಾಗ್ ಬರುತ್ತದೆ. ಎಲ್ಲರೂ ದುಡ್ಡಿಗೋಸ್ಕರ ಏನೂ ಮಾಡ್ತಿದ್ದೀಯಾ ಅಂತಾ ಕೇಳ್ತಾರೆ. ನಿನ್ನ ಖುಷಿಗೋಸ್ಕರ ಏನೂ ಮಾಡ್ತಿದ್ದೀಯಾ ಎಂದು ಕೇಳಲ್ಲ. ಈ ಸಂದರ್ಭದಲ್ಲಿ ಈ ಡೈಲಾಗ್ ನ್ನು ನನ್ನ ಜೀವನಕ್ಕೆ ಕನೆಕ್ಟ್ ಮಾಡಿಕೊಳ್ಳುತ್ತೇನೆ. ನನ್ನ ಖುಷಿ, ಫ್ಯಾಷನ್ ಗೋಸ್ಕರ ಸಿನಿಮಾಕ್ಕೆ ಬಂದಿದ್ದೇನೆ. ಇಷ್ಟು ವರ್ಷಗಳ ಟಿವಿ ಜರ್ನಿ ನಂತರ. ಒಬ್ಬ ನಿರ್ದೇಶಕನಾಗಿ ಸಿನಿಮಾ ನಮಗೆಲ್ಲಾ ಕನಸಾಗಿ ಉಳಿದಿರುತ್ತದೆ. ಮನೆಯಿಂದ ಬ್ಯಾಗ್ ಹಿಡಿದು ಹೊರಟಾಗ ಸಿನಿಮಾ ಮಾಡಲು ಹೊರಟಿರುತ್ತೇವೆ. ಟಿವಿ ಅವಕಾಶ, ಅನ್ನ ನೆಲೆ ಕೀರ್ತಿ ಎಲ್ಲವನ್ನೂ ಕೊಡ್ತು. ಸಿನಿಮಾ ಕನಸು ಆಸೆಯಾಗಿ ಉಳಿಯುತ್ತದೆ. ಆ ನಿಟ್ಟಿನಲ್ಲಿ ಹುಟ್ಟಿಕೊಂಡ ಕಥೆ ಎಲ್ಲೋ ಜೋಗಪ್ಪ ನಿನ್ನರಮನೆ. ಜರ್ನಿ ಸಿನಿಮಾ ಗೆದ್ದಿರುವ ಉದಾಹರಣೆ. ಚಾರ್ಲಿ ಸದ್ಯದ ಉದಾಹರಣೆ. ಹೀಗಾಗಿ ಆ ಕಾನ್ಸೆಪ್ಟ್ ನಲ್ಲಿ ಚಿತ್ರ ಮಾಡಿದ್ದೇವೆ. ಎಂದು ಹಯವದನ ಹೇಳಿದ್ದಾರೆ.
ನಟ ಅಂಜನ್ ನಾಗೇಂದ್ರ ಮಾತನಾಡಿ, ಎಲ್ಲೋ ಜೋಗಪ್ಪ ನಿನ್ನರಮನೆ ನನ್ನ ಎರಡನೇ ಹೆಜ್ಜೆ. ಎಲ್ಲರೂ ಕುಳಿತು ನೋಡುವ ಸಿನಿಮಾವಾಗಬೇಕು ಎಂಬ ಉದ್ದೇಶದಿಂದ ಈ ಚಿತ್ರ ಒಪ್ಪಿಕೊಂಡಿದ್ದೇನೆ. ನಟನಾಗಿ ಬೇರೆ ಬೇರೆ ಪಾತ್ರ ಮಾಡಬೇಕು ಎಂಬ ಕನಸು ಇರುತ್ತದೆ. ಅದರಂತೆ ಎಲ್ಲೋ ಜೋಗಪ್ಪ ನಿನ್ನರಮನೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾನೆ. ದೊಡ್ಡ ದೊಡ್ಡ ತಾರಾಬಳಗದ ಜೊತೆ ಕೆಲಸ ಮಾಡಿದ್ದು ಸಾಕಷ್ಟು ಖುಷಿ ಇದೆ. ಇದೇ 21ರಂದು ಎಲ್ಲೋ ಜೋಗಪ್ಪ ನಿನ್ನರಮನೆ ತೆರೆಗೆ ಬರ್ತಿದೆ. ನಿಮ್ಮ ಬೆಂಬಲ ಇರಲಿ ಎಂದು ತಿಳಿಸಿದರು.
ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್: 'ಬಿಲ್ಲ ರಂಗ ಭಾಷ' ಶೂಟಿಂಗ್ ಕುರಿತು ಹೇಳಿದ್ದೇನು?
ನಾಯಕಿಯರಲ್ಲೊಬ್ಬರಾದ ವೆನ್ಯಾ ರೈ ಮಂಗಳೂರಿನ ಕಾಲೇಜು ಹುಡುಗಿ. ಈ ಸಿನಿಮಾದಲ್ಲಿ ಮರಾಠಿ ಸೇಲ್ಸ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಬ್ಬ ನಾಯಕಿ ಸಂಜನಾ ದಾಸ್ ಚೂಟಿ ವ್ಲಾಗರ್ ಆಗಿ ನಟಿಸಿದ್ದಾರೆ. ಇನ್ನುಳಿದಂತೆ ಶರತ್ ಲೋಹಿತಾಶ್ವ, ದಾನಪ್ಪ, ದಿನೇಶ್ ಮಂಗಳೂರು, ಸ್ವಾತಿ ಬಿರಾದಾರ್, ಲಕ್ಷ್ಮಿ, ನಾಡಗೌಡ, ರೇಖಾ ರಾವ್, ಇಳಾ ವಿಟ್ಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಗ್ನಿ ಸಾಕ್ಷಿ, ನಾಗಿಣಿಯಂಥಾ ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿರುವ ಹಯವದನ ಎಲ್ಲೋ ಜೋಗಪ್ಪ ನಿನ್ನರಮನೆ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.