ಅತಿದೊಡ್ಡ ಯುದ್ಧದ ಚಿತ್ರೀಕರಣ ಆರಂಭ; 50 ದಿನದ ಶೂಟಿಂಗ್‌ಗಾಗಿ 30 ದಿನ ತಯಾರಿ ನಡೆಸಿದ ಕನ್ನಡದ ನಟ

Published : Feb 20, 2025, 02:53 PM ISTUpdated : Apr 07, 2025, 12:35 PM IST
ಅತಿದೊಡ್ಡ ಯುದ್ಧದ ಚಿತ್ರೀಕರಣ ಆರಂಭ; 50 ದಿನದ ಶೂಟಿಂಗ್‌ಗಾಗಿ 30 ದಿನ ತಯಾರಿ ನಡೆಸಿದ ಕನ್ನಡದ ನಟ

ಸಾರಾಂಶ

Biggest War Scene Shooting; ಕನ್ನಡ ಸಿನಿಮಾದ ಯುದ್ಧ ಸನ್ನಿವೇಶದ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರಕ್ಕಾಗಿ 500 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದ್ದು, ಇದೇ ವರ್ಷ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ.

ಬೆಂಗಳೂರು: ಕನ್ನಡ ಸಿನಿಮಾವವೊಂದರ ಚಿತ್ರೀಕರಣ ಮಹತ್ವದ ಹಂತಕ್ಕೆ ಬಂದು ತಲುಪಿದೆ. ಇದು ಯುದ್ಧದ ಸನ್ನಿವೇಶಗಳ ಚಿತ್ರೀಕರಣವಾಗಿದ್ದು, 40 ರಿಂದ 50 ದಿನ ಶೂಟಿಂಗ್‌ ನಡೆಯಲಿದೆ. ಇದಕ್ಕಾಗಿ ಚಿತ್ರದ ನಾಯಕ ನಟ 30 ದಿನ ತಯಾರಿ ಮಾಡಿಕೊಂಡಿದ್ದು, ತಮ್ಮ ಲುಕ್‌ ರಿವೀಲ್ ಆಗದಂತೆ ರಹಸ್ಯ ಕಾಪಾಡಿಕೊಂಡು ಬಂದಿದ್ದಾರೆ. ದೇಶದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಈ ಸಿನಿಮಾ ಇದೇ ವರ್ಷ ಅಕ್ಟೋಬರ್‌ನಲ್ಲಿ  ಬಿಡುಗಡೆಯಾಗಲಿದೆ.  ಈ ಚಿತ್ರದ ನಿರ್ಮಾಣ ಸಂಸ್ಥೆಯೂ ಸಿನಿಮಾಗಾಗಿ ಬರೋಬ್ಬರಿ 500 ಕೋಟಿ ರೂಪಾಯಿ ಹೂಡಿಕೆ ಹಾಕಿದೆ. ಚಿತ್ರದ ಫಸ್ಟ್‌ ಲುಕ್ ರಿವೀಲ್ ಆಗಿದ್ದು, ನಟನ ಲುಕ್‌ಗೆ ಇಡೀ ಭಾರತವೇ ಫಿದಾ ಆಗಿದೆ. 

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಕಾಂತಾರಾ: ಚಾಪ್ಟರ್ 1 ಸಿನಿಮಾದಲ್ಲಿನ ಯುದ್ಧ ಸನ್ನಿವೇಶ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ವರದಿಯಾಗಿದೆ. ಕರ್ನಾಟಕದ ಬೆಟ್ಟಗುಡ್ಡಗಾಡಿನ ಪ್ರದೇಶದಲ್ಲಿ ಸುಮಾರು 40 ರಿಂದ 50 ದಿನ ಈ ಯುದ್ಧದ ಸನ್ನಿವೇಶ ಚಿತ್ರೀಕರಣ ನಡೆಯಲಿದೆ. ಚಿತ್ರದ ಈ ಸನ್ನಿವೇಶಕ್ಕಾಗಿ ರಿಷಬ್ ಶೆಟ್ಟಿ ವೈಯಕ್ತಿವಾಗಿ 30 ದಿನದ ತಯಾರಿ ಮಾಡಿಕೊಂಡಿದ್ದಾರೆ. 

ಕಾಂತಾರಾ: ಚಾಪ್ಟರ್ 1 ಸಿನಿಮಾದ ನಿರ್ದೇಶಕರು ಆಗಿರುವ ರಿಷಬ್ ಶೆಟ್ಟಿ, ಪ್ರತಿಯೊಂದು ಸನ್ನಿವೇಶ ತೆರೆಯ ಮೇಲೆ ಸ್ಪಷ್ಟವಾಗಿ ಕಾಣಬೇಕು ಎಂದು ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಂತಾರಾದಂತೆ ಮುಂದುವರಿದ ಭಾಗದಲ್ಲಿಯೂ ಗ್ರ್ಯಾಂಡ್ ಆಕ್ಷನ್ ಸೀನ್‌ಗಳು ಇರಲಿವೆ ಅನ್ನೋದು ಬಹುತೇಕ ಖಚಿತವಾಗಿದೆ. ಇದಕ್ಕಾಗಿ ಹೊಂಬಾಳೆ ಫಿಲಂಸ್ ಅದ್ಧೂರಿಯಾಗಿ  ಸೆಟ್  ನಿರ್ಮಿಸಿದೆ. ಚಿತ್ರ ತೆರೆ ಮೇಲೆ ಅದ್ಧೂರಿಯಾಗಿ ಕಾಣಬೇಕೆಂಬ ಉದ್ದೇಶದಿಂದ ಹೊಂಬಾಳೆ ಫಿಲಂಸ್ 500 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. 

ಕರ್ನಾಟಕದ ಪರ್ವತ  ಪ್ರದೇಶದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿರೋದರಿಂದ ಪ್ರೇಕ್ಷಕರು ಭವ್ಯವಾದ ಮತ್ತು ತಲ್ಲೀನಗೊಳಿಸುವ ಸಿನಿಮಾ ಅನುಭವವನ್ನು ಪಡೆಯುತ್ತಾರೆ ಎಂದು ಚಿತ್ರತಂಡ ಭರವಸೆಯನ್ನು ವ್ಯಕ್ತಪಡಿಸಿದೆ. ಜನ ಸಂಚಾರವಿಲ್ಲದ ದೂರದ ಪ್ರದೇಶದಲ್ಲಿ ಕಾಂತಾರಾ: ಚಾಪ್ಟರ್ 1ರ  ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣ ನಡೆಯುತ್ತಿರುವ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಸಹ ಇಲ್ಲ ಎನ್ನಲಾಗಿದೆ. ಈ ಚಿತ್ರದ ನೈಜವಾಗಿ ಮೂಡಿರಬೇಕೆಂದು ಚಿತ್ರೀಕರಣ ತಂಡದ ಸದಸ್ಯರು ತಿಂಗಳುಗಟ್ಟಲೇ ಇಲ್ಲಿಯೇ ಉಳಿದು ಕೆಲಸ ಮಾಡಿದ್ದಾರೆ. 

ಇದನ್ನೂ ಓದಿ: ಶೆಟ್ರೇ, ನೀವು ಎಷ್ಟು ಸಲ ಅಂತ ನಮ್ ಹೃದಯ ಗೆಲ್ತೀರಾ? ನಿಮ್ಮನ್ನ ನೋಡಿ ತುಂಬಾ ಕಲಿಯೋದಿದೆ ಅಂದಿದ್ಯಾರು?

ಕಾಂತಾರಾ ಮೊದಲ ಭಾಗದಲ್ಲಿಯೂ ನಿರ್ದೇಶಕ ಅರಣ್ಯ ಪ್ರದೇಶದಲ್ಲಿರುವಂತಹ ಗ್ರಾಮಗಳ ರೀತಿಯಲ್ಲಿಯೇ ಸುಂದರವಾದ ಊರು ನಿರ್ಮಿಸಿದ್ದರು. ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಇಡೀ ಸೆಟ್‌ಗೆ ಬೆಂಕಿ ಹಾಕಲಾಗುತ್ತದೆ. ಇದೀಗ ಮುಂದುವರಿದ ಭಾಗದಲ್ಲಿಯೂ ಇದೇ ರೀತಿಯಲ್ಲಿಯೇ ಸೆಟ್ ಇರಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಕಾಂತಾರಾ ಚಾಪ್ಟರ್‌ 1ರಲ್ಲಿ ಕದಂಬರ ಕಾಲದ ಮಾದರಿಯ ಸೆಟ್ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಇದೇ ವರ್ಷ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಮೊದಲ ಭಾಗ ಚಿತ್ರ ಸೂಪರ್ ಹಿಟ್ ಆಗಿದ್ದರಿಂದ ಎರಡನೇ ಭಾಗಕ್ಕಾಗಿ ಜನರು ಕಾಯುತ್ತಿದ್ದಾರೆ.

2022ರಲ್ಲಿ ಬಿಡುಗಡೆಗೊಂಡಿದ್ದ ಕಾಂತಾರಾ ಸಿನಿಮಾ ಊಹೆಗೆ ನಿಲುಕದ ರೀತಿಯಲ್ಲಿ ಯಶಸ್ವಿಯಾಗಿತ್ತು. ಗ್ರಾಮೀಣ ಕಥೆಯನ್ನು ಹೊಂದಿದ್ದ ಕಾಂತಾರಾದ ಪ್ರತಿಯೊಂದು ಹಾಡುಗಳು ಸೂಪರ್ ಹಿಟ್ ಆಗಿದ್ದವು. 

ಇದನ್ನೂ ಓದಿ: 16 ಕೋಟಿಯ ಕನ್ನಡ ಸಿನಿಮಾ ಗಳಿಸಿದ್ದು 300 ಕೋಟಿ; ನಟನ ಆಕ್ಟಿಂಗ್‌ಗೆ ಬೆರಗಾದ ಸಿನಿ ಲೋಕ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?