ಸ್ಮಿಮ್‌ ಸೂಟ್‌ ಹಾಕು ಎಂದು ಡೈರೆಕ್ಟರ್‌ ಹೇಳ್ದಾಗ, ಲಂಗಾ ಎತ್ತಿ ತೊಡೆ ತೋರಿಸಿದ್ರು ನಟಿ ಲಕ್ಷ್ಮೀ!

Published : Dec 13, 2024, 02:32 PM ISTUpdated : Dec 13, 2024, 03:15 PM IST
ಸ್ಮಿಮ್‌ ಸೂಟ್‌ ಹಾಕು ಎಂದು ಡೈರೆಕ್ಟರ್‌ ಹೇಳ್ದಾಗ, ಲಂಗಾ ಎತ್ತಿ ತೊಡೆ ತೋರಿಸಿದ್ರು ನಟಿ ಲಕ್ಷ್ಮೀ!

ಸಾರಾಂಶ

ಮೊದಲ ಚಿತ್ರಕ್ಕೆ ಸ್ವಿಮ್‌ಸೂಟ್‌ ಧರಿಸಿದ ಸುಂದರಿ ಲಕ್ಷ್ಮಿ. ಗೋವಾದಲ್ಲಿ ಸಿಐಡಿ 999 ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ನಡೆದ ಘಟನೆಯನ್ನು ಭಗವಾನ್ ವಿವರಿಸಿದ್ದಾರೆ. 

ಲಾಯರ್ ಆಗಬೇಕಿ ಎಂದು ಕನಸು ಕಟ್ಟಿಕೊಂಡಿದ್ದ ಲಕ್ಷ್ಮಿ ತಾಯಿಯ ಸಪೋರ್ಟ್‌ನಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. 'ಗೋವಾದಲ್ಲಿ ಸಿಐಡಿ 999' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಲಕ್ಷ್ಮಿ ಎಷ್ಟು ಬೋಲ್ಡ್ ಆಂಡ್ ಬ್ಯೂಟಿಫುಲ್ ಎಂದು ಭಗವಾನ್ ವಿವರಿಸಿದ್ದಾರೆ. ದೊರೆ ಭಗವಾನ್ ನಿರ್ದೇಶನ ಗೋವಾದಲ್ಲಿ ಸಿಐಡಿ 999, ಚಂದನದ ಗೊಂಬೆ, ನಾನೊಬ್ಬ ಕಳ್ಳ, ಬೆಂಕಿಯ ಬಲೆ ಸಿನಿಮಾಗಳಲ್ಲಿ ಲಕ್ಷ್ಮಿ ಅಭಿನಯಿಸಿದ್ದಾರೆ. 

'ಲಕ್ಷ್ಮಿ ಅವರನ್ನು ಹುಡುಕಿಕೊಂಡು ಅವರ ಮನೆಗೆ ಹೋದೆವು. ಕಾನ್ವೆಂಟ್‌ಗೆ ಹೋಗಿದ್ದಾಳೆ ಬಾರ್ತಾಳೆ ಇರಿ ಎಂದು ಅವರ ತಾಯಿ ಹೇಳಿದ್ದರು. ನಾವು ಕೂತಿದ್ದೆವು. 3 ಗಂಟೆ ವೇಳೆಗೆ ಸ್ಕೂಲ್ ಯೂನಿಫಾರ್ಮ್‌ನಲ್ಲಿ ಲಕ್ಷ್ಮಿ ಮನೆಗೆ ಬಂದಳು. ರಾಜ್‌ಕುಮಾರ್ ಸಿನಿಮಾದಲ್ಲಿ ನಟಿಸುತ್ತೀಯಾ ಎಂದು ಕೇಳಿದ ಕೂಡಲೇ ಖುಷಿಯಿಂದ ಒಪ್ಪಿಕೊಂಡಳು. ಇದು ಜೇಮ್ಸ್‌ ಬಾಂಡ್ ಫಿಲ್ಮ್ ಕೊಂಚ ಎಕ್ಸ್‌ಪೋಸ್‌ ಇರುತ್ತದೆ ನೀನು ತಯಾರಿದ್ದರೆ ಮಾಡಬಹುದು ಎಂದೆ. ಸ್ವಿಮ್ ಸೂಟ್ ಹಾಕಬೇಕು ಅದಕ್ಕೆ ಬಾಡಿ ತುಂಬಾ ಚೆನ್ನಾಗಿ ಇರಬೇಕು..ಕೈ ಕಾಲು  ತೊಡೆ ಎಲ್ಲಾ ಚೆನ್ನಾಗಿರಬೇಕು ಆಗ ಸ್ವಿಮ್‌ ಸೂಟ್ ಹಾಕಲು ಚೆಂದ ಅಂದೆ. ಕೂಡಲೇ ಲಂಗಾ ಮೇಲಕ್ಕೆ ತೆಗೆದು ನನ್ನ ತೊಡೆ ಚೆನ್ನಾಗಿದ್ಯಾ? ನೋಡಿ ಎಂದಳು. ಅಷ್ಟು ಬೋಲ್ಡ್‌ ಲಕ್ಷ್ಮಿ'  ಎಂದು ಕನ್ನಡದ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ನಲ್ಲಿ ಭಗವಾನ್ ಮಾತನಾಡಿದ ಸಂದರ್ಶನ ವೈರಲ್ ಆಗುತ್ತಿದೆ.

ಕಾಲು ಎಳೆಯುವವರು ಇದ್ದಾಗಲೇ ಬೆಳೆಯೋದು, ಒಳ್ಳೆಯವರು ಜೊತೆಗಿದ್ದರೆ ಒಳ್ಳೆಯದ್ದೇ ಆಗೋದು: ಸುದೀಪ್

'ಲಕ್ಷ್ಮಿ ಅವರ ಮನೆಯಿಂದ ಹೊರಟ ನಂತರ ದೊರೆ ಹೇಳಿದ್ದರು, ಈ ಹುಡುಗಿಯನ್ನು ಬಿಡಬೇಡಿ ಅಕೆ ದೊಡ್ಡ ನಟಿಯಾಗುತ್ತಾಳೆ ಎಂದು. ಆಕೆಗೆ ಒಳ್ಳೆ ಭವಿಷ್ಯ ಇದೆ ಎಂದಿದ್ದರು. ದೊರೆ ಹೇಳಿದಂತೆಯೇ ಲಕ್ಷ್ಮಿ ದೊಡ್ಡದಾಗಿ ಬೆಳೆದರು. ಕೇಳಿದ ಕೂಡಲೆ ತೊಡೆ ತೋರಿಸಿ ಧೈರ್ಯ ತೋರಿದ್ದಳು. ಸಾಮಾನ್ಯವಾಗಿ ಸ್ವಿಮ್‌ಸೂಟ್‌ ಅಂದ್ರೆ ಮೂಗುಮುರಿಯವವರೇ ಹೆಚ್ಚು. ಆದರೆ ಲಕ್ಷ್ಮಿ ಆ ರೀತಿ ಮಾಡಲಿಲ್ಲ' ಎಂದು ಭಗವಾನ್ ಹೇಳಿದ್ದಾರೆ. 

ಮುಖ ಮೂತಿ ಹೊಡೆದಾಕಿನೇ ಆಚೆ ಹೋಗೋದು; ಧನರಾಜ್‌ ಮೇಲೆ ಹಲ್ಲೆ ಮಾಡಿದ ರಜತ್ ಕಿಶನ್

60-70ರ ದಶಕದಿಂದ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲಕ್ಷ್ಮಿ ನಟಿಸಿದ್ದಾರೆ. ಸ್ವಿಮ್‌ಸೂಟ್ ಧರಿಸಿದ ಮೊದಲ ಬೋಲ್ಡ್‌ ನಟಿ ಎನ್ನಬಹುದು. ಇಂಡಸ್ಟ್ರಿಯಲ್ಲಿ ಜ್ಯೂಲಿ ಲಕ್ಷ್ಮಿ ಎನ್ನುವ ಹೆಸರು ಕೂಡ ಪಡೆದಿದ್ದಾರೆ. 5 ದಶಕಗಳಿಂದ ಬಣ್ಣದ ಪ್ರಪಂಚದಲ್ಲಿ ಇರುವ ಲಕ್ಷ್ಮಿ ಈಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾ.ರಾಜ್‌ಕುಮಾರ್, ಶಿವಾಜಿ ಗಣೇಶ್, ಎನ್‌ಟಿಆರ್‌, ಎಎಸ್‌ಆರ್‌, ವಿಷ್ಣುವರ್ಧನ್ ಸೇರಿದಂತೆ ದೊಡ್ಡ ಕಲಾವಿದರ ಜೊತೆ ಲಕ್ಷ್ಮಿ ನಟಿಸಿದ್ದಾರೆ. 

ಪತ್ನಿ ಪ್ರಿಯಾಂಕಾಗೆ ಪ್ರಪೋಸ್ ಮಾಡಿದ್ದರೂ ಆಂಕರ್ ಅನುಶ್ರೀ ಮನಸ್ಸಿನಲ್ಲಿದ್ದಾಳೆ ಎಂದ ಉಪ್ಪಿ; ಹಳೆ ವಿಡಿಯೋ ಸಖತ್ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್