ಸಬ್ಸಿಡಿ ಹಣ, ರಾಜ್ಯ ಪ್ರಶಸ್ತಿಗಾಗಿ ರೂಪಾ ಅಯ್ಯರ್ ಹೋರಾಟ; ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

Published : Dec 13, 2024, 01:05 PM IST
ಸಬ್ಸಿಡಿ ಹಣ, ರಾಜ್ಯ ಪ್ರಶಸ್ತಿಗಾಗಿ ರೂಪಾ ಅಯ್ಯರ್ ಹೋರಾಟ; ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಸಾರಾಂಶ

'ಸಬ್ಸಿಡಿ ಹಣ ಕೊಡದೆ ಇರೋದು ಚಿಕ್ಕಪುಟ್ಟ ನಿರ್ಮಾಪಕರಿಗೆ ತೊಂದರೆ ಆಗ್ತಿದೆ. ಈ ಕಾರಣಕ್ಕಾಗಿ ನಾವೆಲ್ಲರೂ ಹಲವರು ಸೇರಿ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡ್ತಿದ್ದೇವೆ. ಚಿತ್ರರಂಗವನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ. ಇವರಿಗೆ ಪ್ರತಿವರ್ಷ ಇಂಟರ್‌ರ್ನ್ಯಾಷನಲ್..

ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಅವರು ಸಬ್ಸಿಡಿ ಹಣ ಹಾಗೂ ರಾಜ್ಯ ಪ್ರಶಸ್ತಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. 'ಕಳೆದ 6 ವರ್ಷಗಳಿಂದ ರಾಜ್ಯ ಸರ್ಕಾರ ಸಬ್ಸಿಡಿ ಹಣ ಹಾಗೂ ರಾಜ್ಯ ಪ್ರಶಸ್ತಿ ಘೋಷಣೆ ಮಾಡಿಲ್ಲ' ಎಂಬುದು ಈ ಹೋರಾಟಕ್ಕೆ ಕಾರಣವಾದ ಅಂಶವಾಗಿದೆ. ಸದ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಸಿನಿಮಾ ತಾರೆ ರೂಪ ಅಯ್ಯರ್ ಹೋರಾಟಕ್ಕೆ ಇಳಿದಿದ್ದಾರೆ. ಅವರ ಜೊತೆ ಸ್ಯಾಂಡಲ್‌ವುಡ್‌ನ ಅನೇಕರು ಭಾಗಿಯಾಗಿದ್ದಾರೆ. 

ಈ ಬಗ್ಗೆ ಹೇಳಿಕೆ ನೀಡಿರುವ ನಟಿ-ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಅಯ್ಯರ್ (Roopa Iyer) ಅವರು 'ಸಬ್ಸಿಡಿ ಹಣ ಕೊಡದೆ ಇರೋದು ಚಿಕ್ಕಪುಟ್ಟ ನಿರ್ಮಾಪಕರಿಗೆ ತುಂಬಾ ತೊಂದರೆ ಆಗ್ತಿದೆ. ಈ ಕಾರಣಕ್ಕಾಗಿ ನಾವೆಲ್ಲರೂ ಹಲವರು ಸೇರಿ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡ್ತಿದ್ದೇವೆ. ಚಿತ್ರರಂಗವನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ. ಇವರಿಗೆ ಪ್ರತಿವರ್ಷ ಇಂಟರ್‌ರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮಾಡೊಕೆ ಹಣ ಇದೆ, ಆದರೆ ಬಡ ನಿರ್ಮಾಪಕರಿಗೆ ಸಬ್ಸಿಡಿ ಕೊಡೋಕೆ ಸರ್ಕಾರದ ಬಳಿ ಹಣವಿಲ್ಲ..'ಎಂದಿದ್ದಾರೆ. 

ರಾಜ್ ಕಪೂರ್ ಶತಕ ಸಂಭ್ರಮ, ಮೋದಿಗೆ ಆಹ್ವಾನ ಕೊಟ್ಟ ಕಪೂರ್​ ಫ್ಯಾಮಿಲಿ!

ಈ ಬಗ್ಗೆ ಮುಂದುವರಿದು ಮಾತನಾಡಿರುವ ರೂಪಾ ಅಯ್ಯರ್ 'ವಾಣಿಜ್ಯ ಮಂಡಳಿ ಕೂಡ ಇದರ ವಿರುದ್ದ ಮಾತನಾಡ್ತಿಲ್ಲ. ಫಿಲ್ಮ್ ಚೇಂಬರ್‌ನಲ್ಲಿ ಕುಳಿತು ಈಸಿ ಮೀಟಿಂಗ್ ಮಾಡ್ಕೊಂಡು, ಮಸಾಲೆ ದೋಸೆ ತಿನ್ಕೊಂಡು ಕಾಲ ಕಳೀತಿದ್ದಾರೆ. ರಾಜ್ಯಪಾಲರಿಗೆ ಮನವಿ ಮಾಡಿ‌ ನಾವು ಈಗ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡ್ತಿದ್ದೀವಿ. 6 ವರ್ಷಗಳಿಂದ ಸುಮಾರು 600 ಸಿನಿಮಾಗಳಿಗೆ ಸಬ್ಸಿಡಿ ಹಣ ಕೊಟ್ಟಿಲ್ಲ. ಸರ್ಕಾರ ಈ ಕೂಡಲೇ ಸಬ್ಸಿಡಿ‌ ಹಣ ಬಿಡುಗಡೆ ಮಾಡಬೇಕು. 

ನ್ಯಾಯವಾಗಿ ಸಿನಿಮಾಗಳಿಗೆ ಬರಬೇಕಾದ ಸಬ್ಸಿಡಿ ಹಣ ಬಿಡುಗಡೆ ಮಾಡದಿದ್ದರೆ ನಾವು ಉಪವಾಸ ಸತ್ಯಾಗ್ರಹ ಮಾಡ್ತೇವೆ. ಸಬ್ಸಿಡಿ ವಿಚಾರವಾಗಿ ರಾಜ್ಯ ಪಾಲರಿಗೂ ಮನವಿ ಮಾಡಿದ್ದೇವೆ. ನಮ್ಮದು ನ್ಯಾಯಯುತವಾದ, ನ್ಯಾಯ ಪರವಾದ ಹೋರಾಟ. ಕಳೆದ 6 ವರ್ಷಗಳಿಂದ ಸಬ್ಸಿಡಿ ಹಣ ಬಂದಿಲ್ಲ ಅಂದರೆ ಅದನ್ನೇ ನಂಬಿಕೊಂಡು ಸಮಾಜಕ್ಕೆ ಸಿನಿಮಾ ಮೂಲಕ ಕೊಡುಗೆ ಕೊಟ್ಟ ನಿರ್ಮಾಪಕರ ಗತಿ ಏನಾಗಬೇಕು? ಈ ಬಗ್ಗೆ ರಾಜ್ಯ ಸರ್ಕಾರ ಯೋಚಿಸಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು' ಎಂದಿದ್ದಾರೆ. 

ಸಿಡ್ನೀಲಿ ಬಾಲ್ಯದ ಆಸೆ ಈಡೇರಿಸಿಕೊಂಡ ಚಂದನ್ ಶೆಟ್ಟಿ, ಹೊಡೀತು ಜಾಕ್‌ಪಾಟ್‌ ಎಂದ ನೆಟ್ಟಿಗರು!

ಖ್ಯಾತ ಕಲಾವಿದೆ ರೂಪಾ ಅಯ್ಯರ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಾಂತಿಯುತ ಹೋರಾಟಕ್ಕೆ ಚಿತ್ರರಂಗದ ಹಿರಿಕಿರಿಯ ಕಲಾವಿದರು, ನಿರ್ಮಾಪಕರು ಹಾಗು ನಿರ್ದೇಶಕರು ಭಾಗಿಯಾಗಿದ್ದಾರೆ. 'ರಾಜ್ಯಪಾಲರ ಅನುಮತಿ ಪಡೆದು ನಡೆಸಲಾಗುತ್ತಿರುವ ಈ ಹೋರಾಟವನ್ನು ನ್ಯಾಯ ನೀಡುವ ಅಭಯ ಸಿಗುವ ತನಕವೂ ಮುಂದುವರಿಸಲಾಗುವುದು' ಎಂದಿದ್ದಾರೆ ರೂಪಾ ಅಯ್ಯರ್. ಸುರಿಯುತ್ತಿರುವ ಮಳೆ-ಚಳಿಯನ್ನೂ ಲೆಕ್ಕಿಸದೇ ಕನ್ನಡ ಚಿತ್ರರಂಗದ ಅನೇಕರು ಅಲ್ಲಿ ಭಾಗಿಯಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್