ಸ್ಪಂದನಾ-ವಿಜಯ್ ಎರಡು ದೇಹ ಒಂದೇ ಆತ್ಮ ಒಂದೇ ಮನಸ್ಸು: ಕಣ್ಣೀರಿಟ್ಟ ವಿಕ್ರಮ್ ಸೂರಿ

Published : Aug 08, 2023, 09:23 AM ISTUpdated : Aug 08, 2023, 09:27 AM IST
ಸ್ಪಂದನಾ-ವಿಜಯ್ ಎರಡು ದೇಹ ಒಂದೇ ಆತ್ಮ ಒಂದೇ ಮನಸ್ಸು: ಕಣ್ಣೀರಿಟ್ಟ ವಿಕ್ರಮ್ ಸೂರಿ

ಸಾರಾಂಶ

ರಾಘು ಈ ವಿಚಾರ ಕೇಳಿ ಹೇಗೆ ಧೈರ್ಯ ತೆಗೆದುಕೊಂಡಿರುತ್ತಾನೆ ಗೊತ್ತಿಲ್ಲ ನಿಜಕ್ಕೂ ಬೇಸರವಾಗುತ್ತಿದೆ ಎಂದು ಭಾವುಕರಾದ ವಿಕ್ರಮ್ ಸೂರಿ... 

ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಚಿತ್ರರಂಗದ ಸ್ನೇಹಿತರು ಮತ್ತು ಆಪ್ತರಿಗೆ ಒಂದು ರೀತಿ ರೋಲ್ ಮಾಡಲ್ ಇದ್ದಂತೆ. ಒಮ್ಮೆ ಒಬ್ಬರಿಗೆ ಪರಿಚಯವಾದರೆ ಜೀವನ ಪೂರ್ತಿ ಸ್ನೇಹಿತರಾಗಿರುತ್ತಾರೆ. 35 ವರ್ಷಗಳಿಂದ ರಾಘು ಜೊತೆಗಿರುವ ವಿಕ್ರಮ್ ಸೂರಿ ಭಾವುಕರಾಗಿದ್ದಾರೆ. ಸ್ಪಂದನಾ ಇನ್ನಿಲ್ಲ ಅನ್ನೋ ವಿಚಾರ ತುಂಬಾ ಬೇಸರ ತಂದಿದೆ. ನಾವು 35 ವರ್ಷಗಳಿಂದ ಸ್ನೇಹಿತರು. ಈ ವಿಚಾರ ಕೇಳಿ ಪಾಪ ರಾಘು ಹೇಗೆ ತಡೆದುಕೊಂಡಿದ್ದಾನೆ ಅಂತ ಗೊತ್ತಿಲ್ಲ ಅವನ ಪರಿಸ್ಥಿತಿ ನೆನಪಿಸಿಕೊಂಡರೆ ಬೇಸರವಾಗುತ್ತದೆ. ವಿಜಯ್ ರಾಘವೇಂದ್ರ ಮೃದು ಸ್ವಭಾವದ ವ್ಯಕ್ತಿ ಸ್ಪಂದನಾ ಮತ್ತು ರಾಘು ಎರಡು ದೇಹ ಆದರೆ ಒಂದೇ ಆತ್ಮ ಒಂದೇ ಮನಸ್ಸು ಇದ್ದಂತೆ. ಈಗಲೂ ಸ್ಪಂದನಾ ಇಲ್ಲ ಅನ್ನೋ ವಿಚಾರ ನಂಬಲು ಆಗುತ್ತಿಲ್ಲ' ಎಂದು ವಿಕ್ರಮ್ ಕನ್ನಡ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಮೊದಲು ನಾನು ಮದುವೆ ಆಗಿದ್ದು ಆನಂತರ ರಾಘು. ಅಂಕಲ್ ಮತ್ತು ರಾಘು ಇಬ್ಬರು ಬಂದು ಆಶೀರ್ವಾದಿಸಿದರು.  ಕರೆಕ್ಟ್‌ ಎರಡು ವರ್ಷ ಆದ್ಮೇಲೆ ರಾಘು ಮದುವೆ ಮಾಡಿಕೊಂಡ ನಮ್ಮ ಇಡೀ ಕುಟುಂಬ ಹಾಜರಿದ್ವಿ.ನಮ್ಮ ಜೀವನದಲ್ಲಿ ಏನೇ ಘಟನೆ ನಡೆದರೂ ಹಂಚಿಕೊಳ್ಳುತ್ತೀವಿ. ಮದುವೆಯಾದ ಹೊಸತರಲ್ಲಿ ಗಣೇಶ ಮತ್ತೆ ಬಂದ ಸಿನಿಮಾ ಮಾಡಿದ್ವಿ ಚಿತ್ರೀಕರಣ ಸಮಯದಲ್ಲಿ ಸ್ಪಂದನಾ ಬರುತ್ತಿದ್ದರು ತುಂಬಾ ಎಂಜಾಯ್ ಮಾಡುತ್ತಿದ್ವಿ. ಅಣ್ಣಾವ್ರ ಕುಟುಂಬದ ಕಾರ್ಯಕ್ರಮದಲ್ಲಿ ಸೇರುತ್ತಿದ್ದೆವು ಎಲ್ಲರೊಟ್ಟಿಗೆ ಚೆನ್ನಾಗಿದ್ದರು. ಖುಷಿಯಾಗಿ ಚೆನ್ನಾಗಿದ್ದರು ಒಬ್ಬರನ್ನು ಮತ್ತೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ ಎಲ್ಲೇ ಪ್ರಯಾಣ ಮಾಡಿದರೂ ಫ್ಯಾಮಿಲಿ ಜೊತೆ ಹೋಗುತ್ತಿದ್ದ ಎಂದೂ ಒಬ್ಬನೇ ಪ್ರಯಾಣ ಮಾಡಿಲ್ಲ. ಈ ಸಮಯದಲ್ಲಿ ರಾಘು ಜೊತೆ ನಾವು ನಿಲ್ಲಬೇಕು' ಎಂದು ವಿಕ್ರಮ್ ಹೇಳಿದ್ದಾರೆ. 

ಸ್ಪಂದನಾ ಇಲ್ಲದೆ ರಾಘು ಹೇಗೆ ಬದುಕುತ್ತಾನೆ?; ಚಿನ್ನಾರಿ ಮುತ್ತ ಅತ್ತೆ ಮಾತು ಕೇಳಿ ನಟಿ ಜಯಮಾಲಾ ಭಾವುಕ

'ಇಂಡಸ್ಟ್ರಿಯಿಂದ ಅವರಿಬ್ಬರು ಮದುವೆ ಆಗಿದ್ದು. ಕಾಲೇಜ್ ಸಮಯದಲ್ಲಿ ಇದೆಲ್ಲಾ ಶುರುವಾಗಿರಬೇಕು ನಾನು ನ್ಯಾಷನಲ್ ಕಾಲೇಜ್‌ನಲ್ಲಿದ್ದೆ ಆತ ಎಮ್‌ಇಎಸ್‌ ಕಾಲೇಜ್‌ನಲ್ಲಿದ್ದಆತನಿಗೆ ಅಲ್ಲಿದ್ದ ಸ್ನೇಹಿತರಿಗೆ ಇದು ಗೊತ್ತಿರುತ್ತದೆ. ಆದರೆ ಮದುವೆ ಆದ್ಮೇಲೆ ಸ್ಪಂದನಾ ನನಗೆ ಪರಿಚಯ ಆಗಿದ್ದು. ಈ ಸಮಯದಲ್ಲಿ ವಿಜಯ್ ರಾಘವೇಂದ್ರ ಅಕ್ಕ ಹೇಗಿದ್ದಾರೆ ಗೊತ್ತಿಲ್ಲ. ಒಂದು ಜಾಯಿಂಟ್‌ ಫ್ಯಾಮಿಲಿಗೆ ಸರಿಯಾದ ಉದಾಹರಣೆ ಅಂದ್ರೆ ಇವರ ಕುಟುಂಬ' ಎಂದಿದ್ದಾರೆ ವಿಕ್ರಮ್.

ಅಪ್ಪು ಅಗಲಿದಾಗ Life is unpredictable ಯಾರಿಗೆ ಏನಾಗುತ್ತೆ ಗೊತ್ತಿಲ್ಲ ಎಂದಿದ್ದರು ಸ್ಪಂದನಾ: ಸ್ನೇಹಿತೆ

'ತೂಕ ಇಳಿಸಿಕೊಳ್ಳುವ ವಿಚಾರವಾಗಿ ನನಗೆ ಯಾವ ಮಾಹಿತಿ ತಿಲ್ಲ ಈ ಇದರ ಬಗ್ಗೆ ಮಾತನಾಡಲ್ಲ. ಆದರೆ ಅವರಿಬ್ಬರು ಆರೋಗ್ಯವಾಗಿದ್ದರು ಚೆನ್ನಾಗಿ ತಿನ್ನುತ್ತಿದ್ದರು ಊಟ ವಿಚಾರದಲ್ಲಿ ಶಿಸ್ತು ಇತ್ತು. ಸ್ಪಂದನಾ ಏನೇ ಟ್ಯಾಲೆಂಟ್‌ ಇದ್ದರೂ ನೀನು ಮಾಡು ನಾನು ಹಿಂದೆ ನಿಂತು ನಿನಗೆ ಸಪೋರ್ಟ್ ಮಾಡುತ್ತೀನಿ ಎಂದು ಬೆನ್ನು ತಟ್ಟುತ್ತಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಡ್ರಾಮಾ ಜ್ಯೂನಿಯರ್ ರಿಯಾಲಿಟಿ ಶೋನಲ್ಲಿ ವಿಜಯ್ ಜೊತೆ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಸ್ಪಂದನಾ ಫ್ಯಾಮಿಲಿ ಜೊತೆ ಆಗಮಿಸಿ ಮಕ್ಕಳನ್ನು ಹೇಗೆ ಟ್ರೈನಿಂಗ್ ಮಾಡುತ್ತೀರಾ ಎಂದು ಚರ್ಚೆ ಮಾಡುತ್ತಿದ್ದರು. ಅವರಿಬ್ಬರ ಜೋಡಿ ಹೇಗಿತ್ತು ಅಂತ ಅವರ ಫ್ಯಾಮಿಲಿ ನೋಡಿ ಕಲಿಯಬೇಕು. ಅವರ ಮನೆಯಲ್ಲಿರುವ ಹಿರಿಯರನ್ನು ನೋಡಿ ಅನುಕರಣೆ ಮಾಡಿದ್ದಾರೆ' ಎಂದು ವಿಕ್ರಮ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡ್ರೋನ್ ಪ್ರತಾಪ್ ಮೊಬೈಲ್‌ 'wallpaper'ನಲ್ಲಿ ಕಿಚ್ಚ ಸುದೀಪ್-ಪ್ರಿಯಾ ಸುದೀಪ್.. ಏನ್ ಇದರ ರಹಸ್ಯ?
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ Su From So ಭಾನು: ಬೇಬಿ ಬಂಪ್​ ಕ್ಯೂಟ್​ ಫೋಟೋಶೂಟ್​