ನಟ ವಿಜಯ ರಾಘವೇಂದ್ರ ಹಾಗೂ ಪತ್ನಿ ಸ್ಪಂದನಾ ಅವರು ಜೋಡಿಯ ಮೇಲೆ ಜೀವ ಹೂವಾಗಿದೆ ಹಾಡಿಗೆ ಸ್ಟೆಪ್ಸ್ ಹಾಕಿದ್ದ ವಿಡಿಯೋ ವೈರಲ್ ಆಗುತ್ತಿದ್ದು, ಕಣ್ಣೀರು ತರಿಸುತ್ತಿದೆ.
ಸಾವು ಹೇಗೆ, ಯಾರಿಗೆ, ಯಾವ ಸಮಯದಲ್ಲಿ ಬರುತ್ತದೆ ಎನ್ನುವುದು ಯಾರಿಗೂ ತಿಳಿಯದ ವಿಷಯವೇ. ಒಬ್ಬ ವ್ಯಕ್ತಿ ಮೃತಪಟ್ಟ ಮೇಲೆ ಹೀಗಿರಬಹುದು, ಹಾಗಿರಬಹುದು, ಸಾವಿಗೆ ಈ ಕಾರಣ ಇರಬಹುದು ... ಎಂಬ ವ್ಯಾಖ್ಯಾನಗಳು, ಸಲಹೆ-ಸೂಚನೆಗಳನ್ನು ಕೊಡಬಹುದಷ್ಟೇ. ಆರೋಗ್ಯವಂತನಾಗಿರುವ ವ್ಯಕ್ತಿಯೊಬ್ಬ ಯಾವ ಸದ್ದಿಲ್ಲದೇ ದಿಢೀರ್ ಉಸಿರು ಚೆಲ್ಲಿದಾಗ ಆಗುವ ಆಘಾತ ಅಷ್ಟಿಷ್ಟಲ್ಲ. ಆದರೆ ಕಾಲನ ಕರೆ ಬಂದಾಗ ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕು ಎನ್ನುವುದು ಮಾತ್ರ ಬದುಕಿನ ಸತ್ಯ. ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಸಾವು ಕೂಡ ಬರಸಿಡಿಲಿನಂತೆ ಬಂದೆರಗಿದೆ. ಪತಿ, ಪುಟಾಣಿ ಕಂದ ಸೇರಿದಂತೆ ಅಸಂಖ್ಯ ಬಂಧುಬಳಗವನ್ನು, ಅಪಾರ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ ಸ್ಪಂದನಾ. ಹೃದಯಾಘಾತ (Heart attack) ಹಾಗೂ ಲೋ ಬಿಪಿಯಿಂದ ಇವರು ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಇವರ ಸಾವಿಗೆ ಕಾರಣ ಏನಿರಬಹುದು ಎಂಬ ಬಗ್ಗೆ ಹಲವಾರು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿರುವ ನಡೆಯುತ್ತಿವೆ. ಇವರ ಜೊತೆ ಒಡನಾಟ ಇದ್ದವರೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಿಹಿ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಈ ಹೊತ್ತಿನಲ್ಲಿ ವಿಜಯ ರಾಘವೇಂದ್ರ (Vijaya Raghavendra) ಹಾಗೂ ಸ್ಪಂದನಾ ಅವರು ಜೊತೆಯಾಗಿ ನಟಿಸಿ ರೀಲ್ಸ್ ಮಾಡಿದ್ದ 'ಜೀವ ಹೂವಾಗಿದೆ' ಹಾಡಿನ ಗಾಯನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಯಾಂಡಲ್ವುಡ್ ಸಮಾಚಾರ ಇನ್ಸ್ಟಾಗ್ರಾಮ್ನಲ್ಲಿ ಈ ಹಾಡನ್ನು ಶೇರ್ ಮಾಡಲಾಗಿದ್ದು, ಇದೀಗ ವೈರಲ್ ಆಗುತ್ತಿದ್ದು, ನೋಡುಗರನ್ನು ಕಣ್ಣೀರಿನಲ್ಲಿ ತೇಲಿಸುತ್ತಿದೆ. 1981ರಲ್ಲಿ ತೆರೆ ಕಂಡ ಡಾ.ರಾಜ್ಕುಮಾರ್ ಅಭಿನಯದ ನೀ ನನ್ನ ಗೆಲ್ಲಲಾರೆ ಚಿತ್ರದ ಜೀವ ಹೂವಾಗಿದೆ ಹಾಡಿಗೆ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಜೊತೆಯಾಗಿ ಹೆಜ್ಜೆ ಹಾಕುವುದನ್ನು ಇದರಲ್ಲಿ ನೋಡಬಹುದು. ನಟಿ ಹಾಗೂ ನಿರ್ಮಾಪಕಿಯೂ ಆಗಿ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದ ಸ್ಪಂದನಾ ಅವರು, ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡಿದ್ದ ಅಪೂರ್ವ ಸಿನಿಮಾದಲ್ಲಿ ಸ್ಪಂದನಾ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಮ್ದು ಲವ್ ಮ್ಯಾರೇಜ್ ಅಲ್ಲ ಪಕ್ಕಾ ಅರೇಂಜ್ಡ್ ಮ್ಯಾರೇಜ್; ವಿಜಯ್ ರಾಘವೇಂದ್ರ-ಸ್ಪಂದನಾ ಮ್ಯಾರೇಜ್ ಸ್ಟೋರಿ!
ತೀವ್ರ ಹೃದಯಾಘಾತದಿಂದ ನಿಧನರಾಗಿರುವ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana) ನಟಿ ಹಾಗೂ ನಿರ್ಮಾಪಕಿಯೂ ಆಗಿ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡಿದ್ದ ಅಪೂರ್ವ ಸಿನಿಮಾದಲ್ಲಿ ಸ್ಪಂದನಾ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಜಯ ರಾಘವೇಂದ್ರ ನಟಿಸಿದ್ದ ‘ಕಿಸ್ಮತ್’ ಚಿತ್ರಕ್ಕೆ ಸ್ಪಂದನಾ ಅವರೇ ನಿರ್ಮಾಪಕಿ ಕೂಡ. 2018ರಲ್ಲಿ ತೆರೆ ಕಂಡಿದ್ದ ಈ ಸಿನಿಮಾಗೆ ಸ್ಪಂದನಾ ಹಣ ಹೂಡಿದ್ದರು. ಪತಿಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದರೂ ಈ ರೀಲ್ಸ್ನಲ್ಲಿ ಪತಿಯ ಜೊತೆ ಸ್ಪಂದನಾ ಹೆಜ್ಜೆ ಹಾಕಿದ್ದು, ನೋಡುಗರನ್ನು ಭಾವುಕರನ್ನಾಗಿಸುತ್ತದೆ.
ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿ ಸ್ಪಂದನಾ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಪತ್ನಿಯನ್ನು ಬಿಟ್ಟು ಬಹಳ ದಿನ ತಮ್ಮಿಂದ ಇರಲು ಸಾಧ್ಯವಿಲ್ಲ ಎಂದು ಬಿಗ್ಬಾಸ್ ಮನೆಯಲ್ಲಿ ವಿಜಯ್ ಅವರು ಕಣ್ಣೀರು ಹಾಕಿದ್ದರು. ಬಿಗ್ ಬಾಸ್ ಸೀಸನ್ 1ನಲ್ಲಿ ವಿಜಯ್ ಅವರು ಭಾಗವಹಿಸಿದ್ದರು. 100 ದಿನಗಳಿಗೂ ಅಧಿಕ ಕಾಲ ಕುಟುಂಬವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿದ್ದರು. ಆದರೆ ಈ ಸಮಯದಲ್ಲಿ ಪತ್ನಿಯನ್ನು ನೋಡಲು ಹಾಗೂ ಫೋನ್ನಲ್ಲಿ ಮಾತನಾಡಲು ಆಗದ ಕಾರಣ, ಪದೇ ಪದೇ ನನ್ನ ಹೆಂಡ್ತಿ ನೋಡಬೇಕು, ಪ್ಲೀಸ್ ಕರೆಸಿ ಅಂತ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು. ಇದು ಅವರಿಗೆ ಪತ್ನಿಯ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಇಂಥ ಜೋಡಿಗೆ ಈ ಪರಿಯ ಸ್ಥಿತಿ ಬಂದದ್ದು ಕಂಡು ಜನರು ಕಣ್ಣೀರಾಗುತ್ತಿದ್ದಾರೆ.
KETO Diet ಅಪಾಯಕಾರಿ; ಇದ್ದಕ್ಕಿದ್ದಂತೆ 16 ಕೆಜಿ ತೂಕ ಇಳಿಸಿಕೊಂಡ ಸ್ಪಂದನಾ!