ನಿರ್ದೇಶಕ ದಿನಕರ್ ಇನ್ನೂ ಬಾಡಿಗೆ ಮನೆಯಲ್ಲಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ದರ್ಶನ್ ತಮ್ಮನಾಗಿದ್ದರೂ ಯಾಕೆ ಅವರಿನ್ನೂ ಹಾಗೆ ಇದ್ದಾರೆ ಎಂಬುದಕ್ಕೆ ಸ್ವತಃ ದಿನಕರ್ ಅವರು ಹಲವಾರು ಬಾರಿ ಉತ್ತರಿಸಿದ್ದಾರೆ.
ನಿರ್ದೇಶಕ ದಿನಕರ್ ತೂಗುದೀಪ ಅವರದು ಸಿಂಪಲ್ ಲೈಫ್. ಮಡದಿ, ಮಗಳು ಹಾಗೂ ಮಗ ಇವರೊಟ್ಟಿಗೆ ಸಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ ದಿನಕರ್ ತೂಗುದೀಪ ಅವರು. ತಂದೆ ತೂಗುದೀಪ ಶ್ರೀನಿವಾಸ್ ಹಾಗೂ ತಾಯಿ ಮೀನಾ ತೂಗುದೀಪ ಅವರ ಕಿರಿಯ ಮಗನೇ ದಿನಕರ್. ನಟ ದರ್ಶನ್ ಹಿರಿಯ ಮಗ. ತೂಗದೀಪ್ ಶ್ರೀನಿವಾಸ್ ದಂತಿಗಳಿಗೆ ದಿವ್ಯಾ ಎಂಬ ಮಗಳೂ ಸಹ ಇದ್ದು, ಅವರಿಗೆ ಮದುವೆಯಾಗಿದೆ. ಸದ್ಯನಟ ದರ್ಶನ್ ಕೊಲೆ ಕೇಸಿನಲ್ಲಿ ಆರೋಪಿ ಆಗಿರುವುದರಿಂದ ಸಹಜವಾಗಿಯೇ ತೂಗುದೀಪ ಫ್ಯಾಮಿಲಿ ಬಗ್ಗೆ ಆಸಕ್ತಿ ಎಲ್ಲರಿಗೂ ಹೆಚ್ಚಾಗಿದೆ.
ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ಸಾರಥಿ ಚಿತ್ರದ ಮೂಲಕ ಕನ್ನಡ ಸಿನಿಪ್ರೇಮಿಗಳ ಮನಸ್ಸಿಗೆ ಬಹಳಷ್ಟು ಹತ್ತಿರವಾದರು. 2011ರಲ್ಲಿ ನಟ ದರ್ಶನ್ ಮುಖ್ಯ ಭೂಮಿಕೆಯಲ್ಲಿ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಬಂದ 'ಸಾರಥಿ' ಚಿತ್ರವು ಸೂಪರ್ ಹಿಟ್ ಆಗಿತ್ತು. ಅಂದು ಆ ಚಿತ್ರವು ಅದೆಷ್ಟು ಕಲೆಕಷನ್ ಮಾಡಿತ್ತು, ಜನಮೆಚ್ಚುಗೆ ಗಳಿಸಿತ್ತು ಎಂದರೆ ಅಂದಿನ ಕಾಲದಲ್ಲಿ ಚಿತ್ರರಂಗವೇ ಒಮ್ಮೆ ಮೂಗಿನ ಮೇಲೆ ಬೆರಳಿಟ್ಟಿತ್ತು.
ಸಾರಥಿ ಬಂದ ಸಮಯ ಕೂಡ ನಟ ದರ್ಶನ್ ಅವರಿಗೆ ತುಂಬಾ ಸಹಾಯಕವಾಗಿತ್ತು. ಕಾರಣ, ನಟ ದರ್ಶನ್ 2011ರಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರಿಗೆ ಥಳಿಸಿ ಜೈಲು ಸೇರಿ ಬಿಡುಗಡೆ ಆಗಿದ್ದರು. ಅಂದು ಒಂದು ಕಪ್ಪುಚುಕ್ಕೆ ಅಂಟಿಸಿಕೊಂಡಿದ್ದ ನಟ ದಶ್ನ್ ಅವರಿಗೆ ಸಾರಥಿ ಚಿತ್ರವು ಮತ್ತೆ ಮರುಜನ್ಮ ನೀಡಿತ್ತು. ಆ ಬಳಿಕ ನಟ ದರ್ಶನ್ ದಾಂಪತ್ಯ ಸರಿ ಹೋಯಿತೋ ಇಲ್ಲವೋ ಎಂಬುದು ಅವರಿಗೇ ಗೊತ್ತು. ಆದರೆ, ನಟ ದರ್ಶನ್ ವೃತ್ತಿ ಜೀವನ ಮಾತ್ರ ಉತ್ತುಂಗಕ್ಕೇರಿ ಮತ್ತೆ ಹಿಂತಿರುಗಿ ನೋಡದಂತೆ ಮಾಡಿತ್ತು.
ಡಾ ರಾಜ್ ಸೋಮವಾರದ ವೃತ ಕೆಡಿಸಿಬಿಟ್ಟಿದ್ರು ಅಂಬರೀಷ್; ಅದಕ್ಕೆ ಪಾರ್ವತಮ್ಮ ಏನ್ ಅಂದಿದ್ರು..?
ಆದರೆ, ಇಂದು ಅದೇ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿಆರೋಪಿಯಾಗಿ ಮತ್ತೆ ಜೈಲು ಸೇರಿಕೊಂಡಿದ್ದಾರೆ. ಸದ್ಯ ನ್ಯಾಯಾಂಗ ಕಸ್ಟಡಿಯಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಬೇಲ್ ಮೇಲೆ ಆಚೆ ಬರುತ್ತಾರೋ ಅಥವಾ ಅಪರಾಧಿ ಎನಿಸುತ್ತಾರೋ ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿಯೇ ಉಳಿದುಕೊಂಡಿದೆ.
ನಿರ್ದೇಶಕ ದಿನಕರ್ ಇನ್ನೂ ಬಾಡಿಗೆ ಮನೆಯಲ್ಲಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ದರ್ಶನ್ ತಮ್ಮನಾಗಿದ್ದರೂ ಯಾಕೆ ಅವರಿನ್ನೂ ಹಾಗೆ ಇದ್ದಾರೆ ಎಂಬುದಕ್ಕೆ ಸ್ವತಃ ದಿನಕರ್ ಅವರು ಹಲವಾರು ಬಾರಿ ಉತ್ತರ ಕೊಟ್ಟಿದ್ದಾರೆ. ಅದನ್ನು ಇನ್ನೊಮ್ಮೆ ಹೇಳಬೇಕು ಎಂದರೆ, ದಿನಕರ್ ಅಮ್ಮ ಮೀನಾ ಅವರು ನೀನು ನಿನ್ನ ಸ್ವಂತ ದುಡಿಮೆಯ ಹಣದಿಂದ ಏನಾದರೂ ಮಾಡು. ಮನೆ ಕಟ್ಟುವುದಿರಲಿ, ವಾಹನ ಖರೀದಿ ಮಾಡುವುದಿರಲಿ ಎಂದಿದ್ರಂತೆ.
ರೀಗ್ರೆಟ್ ಆಗ್ತಿದೆ ನಮ್ ಮ್ಯಾರೇಜ್ ಬಗ್ಗೆ ಅಂದ್ರು ನಿಕ್; ಡಿವೋರ್ಸ್ ಆಗುತ್ತಾ ಪ್ರಿಯಾಂಕಾ ಮೇಡಂ..?
ನನಗೆ ಅಮ್ಮನ ಮಾತು ತುಂಬಾ ಇಷ್ಟವಾಯ್ತು, ಅದು ನನ್ನ ಹೃದಯ ತಟ್ಟಿತು. ಅದಕ್ಕಾಗಿ ನಾನು ನನ್ನ ಅಮ್ಮನ ಮಾತಿನಂತೆ ನನ್ನದೇ ಹಣದಿಂದ ಮನೆ ಕಟ್ಟುತ್ತೇನೆ. ಏನೇ ಖರೀದಿ ಮಾಡುವುದಿದ್ದರೂ ಅದು ನನ್ನದೇ ಹಣದಿಂದ ಅಷ್ಟೇ. ನಾನು ಈಗಾಗಲೇ ಸೈಟ್ ಮಾಡಿದ್ದೆ, ಮನೆ ಕಟ್ಟಲು ಶುರು ಮಾಡಿದ್ದೇನೆ. ಅದು ನನ್ನದೇ ದುಡ್ಡು, ಅಮ್ಮನ ಮಾತು..' ಎಂದಿದ್ದಾರೆ ನಿರ್ದೇಶಕ ದಿನಕರ್ ತೂಗುದೀಪ.