ಸದ್ಯ ದಿನಕರ್ ತೂಗುದೀಪ ನಿರ್ದೇಶನದಲ್ಲಿ 'ಕಿಸ್' ಖ್ಯಾತಿಯ ವಿರಾಟ್ ನಟನೆಯಲ್ಲಿ 'ರಾಯಲ್' ಸಿನಿಮಾ ರೆಡಿಯಾಗಿದೆ. ಈ ಚಿತ್ರದ ಪ್ರಮೋಶನ್ ಶುರುವಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಮನೆಮಾಡಿದೆ. ನಟ ದರ್ಶನ್ ಅವರು ಕೂಡ ತಮ್ಮ ದಿನಕರ್ ಸಿನಿಮಾ ಪ್ರಮೋಶನ್‌ಗೆ...
ಸ್ಯಾಂಡಲ್‌ವುಡ್ ನಿರ್ದೇಶಕ ದಿನಕರ್ ತೂಗುದೀಪ (Dinakar Thoogudeepa) ಅವರು ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಬಗ್ಗೆ ಮಾತನ್ನಾಡಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನ್ನಾಡಿರುವ ದಿನಕರ್ ತೂಗುದೀಪ ಅವರು 'ಆ ಚಿತ್ರದ ಎಲ್ಲ ಕೆಲಸಗಳು ಕೂಡ ಮುಗಿದಿದ್ದವು. ಸಂಭಾಷಣೆಗಳ ಸಮೇತ ಬೌಂಡ್ ಸ್ಕ್ರಿಪ್ಟ್ ಕೂಡ ರೆಡಿಯಾಗಿತ್ತು' ಎಂದು ಹೇಳಿದ್ದಾರೆ. 'ಇನ್ನು ಆ ಕಥೆ ಮುಂದೆ ಸಿನಿಮಾ ಆಗುತ್ತಾ?' ಎಂದು ಕೇಳಲಾದ ಪ್ರಶ್ನೆಗೆ 'ಆ ಸ್ಕ್ರಿಪ್ಟ್ ಖಂಡಿತಾ ಸಿನಿಮಾ ಆಗುತ್ತೆ ಮುಂದೆ, ಅದು ನೂರಕ್ಕೆ ನೂರರಷ್ಟೂ ನಿಜ. ಆ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರು ತುಂಬಾ ಇಷ್ಟಪಟ್ಟಿದ್ದರು. ಹೀಗಾಗಿ ಆ ಕಥೆಯನ್ನು ಸಿನಿಮಾ ಮಾಡ್ತೀನಿ' ಎಂದಿದ್ದಾರೆ ದಿನಕರ್ ತೂಗುದೀಪ.
ಹೌದು, ಈಗ ಕೆಲವು ವರ್ಷಗಳ ಹಿಂದೆ ನಿರ್ದೇಶಕ ದಿನಕರ್ ತೂಗುದೀಪ ಅವರು ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕಥೆ ಮಾಡಿದ್ದು, ಅದನ್ನು ಪುನೀತ್ ಒಪ್ಪಿ ಕಾಲ್‌ಶೀಟ್ ಕೊಟ್ಟಿದ್ದು, ಎಲ್ಲವೂ ಸುದ್ದಿಯಾಗಿತ್ತು. ಆದರೆ ನಟ ಪುನೀತ್ ಅವರು ಆಕಸ್ಮಿಕವಾಗಿ ದುರಂತ ಸಾವು ಕಂಡರು. ಹೀಗಾಗಿ ಆ ಸಿನಿಮಾ ಆಗಲೇ ಇಲ್ಲ. ಆ ಬಗ್ಗೆ ಇದೀಗ ದಿನಕರ್ ಮಾತನ್ನಾಡಿದ್ದು, ಅದನ್ನು ಖಂಡಿತ ತೆರೆಯ ಮೇಲೆ ತರುವುದಾಗಿ ಹೇಳಿದ್ದಾರೆ. ಹೀಗಾಗಿ ಪುನೀತ್ ಓಕೆ ಮಾಡಿದ್ದ ಅ ಸಿನಿಮಾವನ್ನು ದಿನಕರ್ ನಿರ್ದೇಶನದಲ್ಲಿ ಮುಂದೆ ಬೇರೆ ಹೀರೋ ನಟನೆಯಲ್ಲಿ ನೋಡಬಹುದು. ಆದರೆ ಆ ಹೀರೋ ಯಾರು ಎಂಬಗುಟ್ಟನ್ನು ದಿನಕರ್ ಬಿಟ್ಟುಕೊಟ್ಟಿಲ್ಲ!
ದರ್ಶನ್ ಕಷ್ಟದ ಕ್ಷಣದಲ್ಲಿ ವಿಜಯಲಕ್ಷ್ಮಿ 'ನಿಜರೂಪ' ಹೇಳಿದ ದಿನಕರ್ ತೂಗುದೀಪ!
ಸದ್ಯ ದಿನಕರ್ ತೂಗುದೀಪ ನಿರ್ದೇಶನದಲ್ಲಿ 'ಕಿಸ್' ಖ್ಯಾತಿಯ ವಿರಾಟ್ ನಟನೆಯಲ್ಲಿ 'ರಾಯಲ್' ಸಿನಿಮಾ ರೆಡಿಯಾಗಿದೆ. ಈ ಚಿತ್ರದ ಪ್ರಮೋಶನ್ ಶುರುವಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಮನೆಮಾಡಿದೆ. ಈ ಚಿತ್ರದ ಸ್ವತಃ ದಿನಕರ್ರ ಅವರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯುತ್ ಓರಿಯಂಟೆಡ್ ಸಿನಿಮಾ ಆಗಿರುವ ರಾಯಲ್, ಆಕ್ಷನ್ ಮೂಲಕ ಕೂಡ ಗಮನ ಸೆಳೆಯಲಿದೆ ಎನ್ನಲಾಗುತ್ತಿದೆ. ನಟ ದರ್ಶನ್ ಅವರು ಕೂಡ ತಮ್ಮ ದಿನಕರ್ ಸಿನಿಮಾ ಪ್ರಮೋಶನ್‌ಗೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ.
ಇನ್ನು, ಕೊಲೆ ಕೇಸ್ ಆರೋಪಿಯಾಗಿರುವ ನಟ ದರ್ಶನ್ ಅವರು ಸದ್ಯ ಬೇಲ್ ಮೇಲೆ ಆಚೆ ಇದ್ದಾರೆ. ಟ್ರೀಟ್‌ಮೆಂಟ್ ಹಾಗೂ ವಿಶ್ರಾಂತಿ ಹಂತದಲ್ಲಿರುವ ನಟ ದರ್ಶನ್, ಮುಂದೆ ಅರ್ಧಕ್ಕೆ ನಿಂತಿರುವ ತಮ್ಮ ನಟನೆಯ 'ಡೆವಿಲ್' ಚಿತ್ರದ ಶೂಟಿಂಗ್ ಹಾಗು ಡಬ್ಬಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಅಂತೆಕಂತೆಗಳ ಪ್ರಕಾರ ನಟ ದರ್ಶನ್ ಅವರ ಡೆವಿಲ್ ಚಿತ್ರದ ಶೂಟಿಂಗ್ ಇನ್ನು ಸ್ವಲ್ಪ ದಿನದಲ್ಲಿ ಮುಂದುವರೆಯಲಿದೆ.
ಹುಚ್ಚ ಹೇಳ್ತಿದ್ದ ಸಾಲು ಭಟ್ಟರ ಹಾಡಿಗೆ ಸ್ಪೂರ್ತಿ; 'ಮನದ ಕಡಲಿ'ನ ಹಾಡು ಈಗ ವೈರಲ್!