ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಸಕ್ಸಸ್ ದಾಖಲಿಸಿದೆ. ಈ ಚಿತ್ರವು ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಿದೆ. ಎಲ್ಲ ಭಾಷೆಗಳ ಸಿನಿಪ್ರೇಕ್ಷಕರು ಕೂಡ ಈ ಮ್ಯಾಕ್ಸ್ ಚಿತ್ರವನ್ನು ಮೆಚ್ಚಿಕೊಂಡಿದ್ದು, ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೂರು ವಾರಗಳ ಜರ್ನಿ ಮುಗಿಸಿರುವ ಮ್ಯಾಕ್ಸ್..
ಕಿಚ್ಚ ಸುದೀಪ್ (Kichcha Sudeep) ಅವರು ಡಾ ರಾಜ್‌ಕುಮಾರ್ (Dr Rajkumar) ಬಗ್ಗೆ ಮಾತನ್ನಾಡಿದ್ದಾರೆ. ಅವರು ಅಣ್ಣಾವ್ರ ಬಗ್ಗೆ ಅದೇನು ಹೇಳಿದ್ದಾರೆ ಅನ್ನೋದು ಇಲ್ಲಿದೆ. ಜೊತೆಗೆ, ಅವರು ಹೇಳಿದ್ದು ಯಾವಾಗಲೋ ಇರಬಹುದು. ಆದರೆ ಅದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ದರೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಮೇರುನಟ ಡಾ ರಾಜ್‌ಕುಮಾರ್ ಬಗ್ಗೆ ಅದೇನು ಹೇಳಿದ್ದಾರೆ? ಬಹುಶಃ ನೀವು ಊಹಿಸಿರಲಿಕ್ಕೂ ಸಾಧ್ಯವಿಲ್ಲ. ಅಂತಹ ಮಾತನ್ನು ಸುದೀಪ್ ಹೇಳಿದ್ದಾರೆ. ಅದಕ್ಕೆ ತುಂಬಾ ಮೆಚ್ಚುಗೆಯ ಕಾಮೆಂಟ್ಸ್ ಸುರಿಮಳೆ ವಿಭಿನ್ನ ರೀತಿಯಲ್ಲಿ ಆಗುತ್ತಿದೆ.
ಕಿಚ್ಚ ಸುದೀಪ್ 'ಬಹುಶಃ ಸಿಂಪ್ಲಿಸಿಟಿ ಅನ್ನೋದು ಹುಟ್ಟಿದ್ದೇ ಆ ಮಹಾನ್ ವ್ಯಕ್ತಿಯಿಂದ ಅನ್ಸುತ್ತೆ. ನನ್ನ ಸಿನಿಮಾಗಳನ್ನು ನೋಡಿ ನನಗೆ ಅವರು ಮುತ್ತು ಕೊಟ್ಟಿದ್ದು, ಆನಂದಭಾಷ್ಪ ಸುರಿಸಿದ್ದನ್ನು ನಾನೆಂದಿಗೂ ಮರೆಯಲಾರೆ. ಎಂದೂ ಅಷ್ಟು ಸಲುಭವಾಗಿ ಕಣ್ಣಿರು ಹಾಕದ ನಾನು ಅವರ ಮೆಚ್ಚುಗೆಯ ಮಾತುಗಳಿಂದ ಅಂದು ನನಗೂ ಅಳು ಬಂದಿತ್ತು. ಅಂಥವರನ್ನ ನೋಡೋಕೆ ಸಿಗೋದೇ ಅಪರೂಪ. 'ಓಂ' ಚಿತ್ರದ ಓಂ ಬ್ರಹ್ಮಾನಂದ ಓಂಕಾರ..' ಹಾಡು ನನಗೆ ತುಂಬಾ ಇಷ್ಟವಾದದ್ದು. ಸ್ಟಿರಿಯೋ ಸೌಂಡ್ ಸಿಸ್ಟಮ್ ಕಾಲದಲ್ಲೇ ಅಣ್ಣಾವ್ರ ಆ ಹಾಡು, ಅವರ ಆ ಟೋನ್ ಅತ್ಯದ್ಭುತವಾಗಿತ್ತು. ಈಗಿನ ರೀತಿ ಡಿಟಿಎಸ್, ಇತರೆ ತಾಂತ್ರಕತೆ ಇದ್ದಿದ್ದರೆ ಬಹುಶಃ ಥಿಯೇಟರ್ ಕಿರ್ಕೊಂಡು ಹೋಗಿರ್ತಿತ್ತು' ಎಂದಿದ್ದಾರೆ ಕಿಚ್ಚ ಸುದೀಪ್.
ನಾಗಚೈತನ್ಯ ಹೇಳಿದ್ದು ಕೊನೆಗೂ ಬಾಯ್ಬಿಟ್ಟ ಸಮಂತಾ; ಸತ್ಯ ಒಂದಿನ ಹೊರಗೆ ಬರಲೇಬೇಕು!
ನಟ ಸುದೀಪ್ ಅವರು ಅಣ್ಣಾವ್ರನ್ನು ತುಂಬಾ ಮೇಲ್ಮಟ್ಟದ ವ್ಯಕ್ತಿಯಾಗಿ ನೋಡಿದ್ದಾರೆ. ಅವರ ಸಿನಿಮಾಗಳನ್ನು, ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ಅದೇ ರೀತಿ, ನಟ ವಿಷ್ಣುವರ್ಧನ್ ಅವರನ್ನು'ಬಾಸ್' ಎಂದು ಕರೆಯುತ್ತ, ಅವರಿಗೂ ಗೌರವ ಕೊಡುತ್ತಾರೆ. ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕೂಡ ಗೌರವಿಸುತ್ತಾರೆ ನಟ ಸುದೀಪ್. ಶಂಕರ್ ನಾಗ್, ಅನಂತ್ ನಾಗ್ ಹೀಗೆ ಎಲ್ಲ ಹಿರಿಯರನ್ನು ಗೌರವಿಸುತ್ತ, ಕಿರಿಯರನ್ನು ಪ್ರೀತಿಸುತ್ತ ನಟ ಕಿಚ್ಚ ಸುದೀಪ್ ತಮ್ಮದೇ ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿ ವೃತ್ತಿಜೀವನದ ಉತ್ತುಂಗದ ಕ್ಷಣಗಳನ್ನು ಸ್ಟಾರ್ ನಟ ಸುದೀಪ್ ಎಂಜಾಯ್ ಮಾಡುತ್ತಿದ್ದಾರೆ.
ಅಂದಹಾಗೆ, ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಸಕ್ಸಸ್ ದಾಖಲಿಸಿದೆ. ಈ ಚಿತ್ರವು ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಿದೆ. ಎಲ್ಲ ಭಾಷೆಗಳ ಸಿನಿಪ್ರೇಕ್ಷಕರು ಕೂಡ ಈ ಮ್ಯಾಕ್ಸ್ ಚಿತ್ರವನ್ನು ಮೆಚ್ಚಿಕೊಂಡಿದ್ದು, ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೂರು ವಾರಗಳ ಜರ್ನಿ ಮುಗಿಸಿರುವ ಮ್ಯಾಕ್ಸ್, ಈಗಲೂ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. 2024ರ ಕೊನೆಯ ವಾರದಲ್ಲಿ ಬಿಡುಗಡೆ ಕಂಡಿರುವ ಮ್ಯಾಕ್ಸ್, ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ಎನ್ನಲಾಗುತ್ತಿದೆ.
ಸಂಕ್ರಾಂತಿಗೆ 'ಪುಷ್ಪ 2' ಹೊಸ ವರ್ಷನ್ ಕೊಟ್ಟ ಟೀಮ್; ಇಲ್ಲಿದೆ ಹೊಸ ಗುಟ್ಟು!