ರಾಯಲ್ ಸಿನಿಮಾ ಸಪೋರ್ಟ್ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ದಿನಕರ್. ಯಾಕೆ ನೆಗೆಟಿವ್ ಕಾಮೆಂಟ್ ಬರುತ್ತಿದೆ? ಯಾರಿಂದ ಬರುತ್ತಿದೆ?
ಬಹಳ ವರ್ಷಗಳ ನಂತರ ದಿನಕರ್ ತೂಗುದೀಪ ನಿರ್ದೇಶನ ಮಾಡಿರುವ ರಾಯಲ್ ಸಿನಿಮಾ ರಿಲೀಸ್ ಕಂಡಿತ್ತು. ವಿರಾಟ್, ಸಂಜನಾ ಆನಂದ್, ಅಚ್ಯುತ್ ಕುಮಾರ್, ಛಾಯಾ ಸಿಂಗ್ ಮತ್ತು ರಘು ಮುಖರ್ಜಿ ನಟಿಸಿರುವ ಸಿನಿಮಾ ಇದಾಗಿತ್ತು. ಎಲ್ಲೆ 3 ಸ್ಟಾರ್ ರೇಟಿಂಗ್ ಪಡೆದಿದೆ ಆದರೆ ನಿರೀಕ್ಷೆ ಮಾಡಿದ ಮಟ್ಟಕ್ಕೆ ಸಿನಿಮಾ ವರ್ಕೌಟ್ ಮಾಡುತ್ತಿಲ್ಲ. ಅಲ್ಲದೆ ಸಿನಿಮಾ ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್ ಫ್ಯಾಮಿಲಿ ಕೂಡ ಭಾಗಿಯಾಗಿದ್ದ ಕಾರಣ ಸಿನಿಮಾ ಒಂದು ಮಟ್ಟಕ್ಕೆ ಹೆಸರು ಮಾಡಲಿದೆ ಅನ್ನೋ ಬರವಸೆ ಕೊಟ್ಟಿತ್ತು.ಆದರೆ ಇಲ್ಲಿ ಏನೋ ಎಡವಟ್ಟು ಆಗಿದೆ ಹೀಗಾಗಿ ದಿನಕರ್ ಬೇಸರ ಮಾಡಿಕೊಂಡಿದ್ದಾರೆ.
'ತುಂಬಾ ಖುಷಿಯಾಗುತ್ತಿದೆ ಜನರು ಫ್ಯಾಮಿಲಿ ಜೊತೆ ಬಂದು ಸಿನಿಮಾ ನೋಡುತ್ತಿರುವುದು. ದಿನ ವಿಮರ್ಶೆ ನೋಡುತ್ತಿದ್ದೀನಿ ಜನರಿಂದ ರಿಪೋರ್ಟ್ ಪಡೆಯುತ್ತಿದ್ದೀನಿ. ಜನರು ಸಿನಿಮಾ ನೋಡಿ ಸೂಪರ್ ಎನ್ನುತ್ತಿದ್ದಾರೆ ಆದರೆ ಬುಕ್ ಮೈ ಶೋನಲ್ಲಿ ಸುಮ್ಮ ಸುಮ್ಮನೆ ನೆಗೆಟಿವ್ ವಿಮರ್ಶೆ ಹಾಕುತ್ತಿದ್ದಾರೆ, ಸುಮಾರು ಜನ ಒಂದೊಂದೇ ಸಾಲುಗಳನ್ನು ಕೊಡುತ್ತಿದ್ದಾರೆ. ಬೇಕು ಬೇಕು ಅಂತ ತುಂಬಾ ಜನ ಪ್ರಯತ್ನ ಪಡುತ್ತಿದ್ದಾರೆ....ಜನರು ಸಪೋರ್ಟ್ ಮಾಡಿದ್ದರೆ ಅವರು ಏನೇ ಪ್ರಯತ್ನ ಮಾಡಿದ್ದರೂ ಗೆಲ್ಲಬಹುದು ಅದರ ಜವಾಬ್ದಾರಿ ನಿಮ್ಮದು. ಜನರು ನಮ್ಮನ್ನು ಗೆಲ್ಲಿಸುತ್ತಾರೆ ಅನ್ನೋ ನಂಬಿಕೆ ಇದೆ. ನಮ್ಮ ಸೆಲೆಬ್ರಿಟಿಗಳು ನೀವು ನಮ್ಮನ್ನು ಗೆಲ್ಲಿಸಿ ಕೊಡುತ್ತೀರಿ ಎಂದು ನಂಬಿದ್ದೀನಿ. ಸಿನಿಮಾ ಫ್ಲಾಮ್ ಮಾಡಲು ತುಂಬಾ ಜನ ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ಮೇಲಿನ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಅನಿಸುತ್ತದೆ. ಜನರ ಸಪೋರ್ಟ್ ಇದ್ದರೆ ಆನೆ ಬಲ ಇದ್ಹಾಗೆ' ಎಂದು ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ದಿನಕರ್ ಹೇಳಿದ್ದರು.
ದರ್ಶನ್‌ಗೆ ಬದುಕಿನ ಪಾಠ ಕಲಿಸಿತಾ ಜೈಲುವಾಸ? ಬದಲಾದ್ರಾ ದರ್ಶನ್;ಒಂದಾದ ಅಣ್ಣ-ತಮ್ಮ,ತಾಯಿ-ಮಗ
ಚಿತ್ರದಲ್ಲಿಕೊಂಚ ಲಾಜಿಕ್ ಮಿಸ್ ಹೊಡೆದೆ ಆದರೆ ಮ್ಯೂಸಿಕ್ ಸೂಪರ್ ಆಗಿದೆ ಎಂದು ವಿಮರ್ಶೆಗಳಲ್ಲಿ ಬಂದಿದೆ. ಇನ್ನು ನಾಯಕನ ಬಾಲ್ಯದ ಪಾತ್ರವನ್ನು ದಿನಕರ್ ಪುತ್ರ ಸೂರ್ಯ ನಟಿಸಿದ್ದಾರೆ. ಮಗನ ಮೊದಲ ಚಿತ್ರ ಆಗಿದ್ದ ಕಾರಣ ಮನೆ ಮಂದಿಗೂ ಹೆಚ್ಚಿನ ನಿರೀಕ್ಷೆ ಇತ್ತು. ಇನ್ನು ದಿನಕರ್ ಯಾಕೆ ದರ್ಶನ್ ಅಭಿಮಾನಿಳಗಳ ಬಗ್ಗೆ ಹೀಗೆ ಮಾಡಿದ್ದರು? ದರ್ಶನ್ ಅಭಿಮಾನಿಗಳು ಈ ಕುಟುಂಬಕ್ಕೆ ಸಪೊರ್ಟ್ ಆಗಿ ನಿಂತಿದ್ದರೂ ಸಹ ಅವರಿಂದ ಸೋಲುತ್ತಿದೆ ಅವರು ಕೋಪ ತೋರಿಸುತ್ತಿದ್ದಾರೆ ಎಂದು ಹೇಳಿದ್ದು ಸರಿ ಅಲ್ಲ ಎಂದು ವಾದಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಯಲ್ ಸಿನಿಮಾ ನಂತರ ದಿನಕರ್ ತಮ್ಮ ಅಣ್ಣ ದರ್ಶನ್‌ಗೆ ಆಕ್ಷನ್ ಕಟ್ ಹೇಳಬೇಕು ಎಂದು ಪಟ್ಟು ಹಿಡಿದು ಕುಳಿತಿರುವುದೇ ಅಭಿಮಾನಿಗಳು.
ಮಗ ಚೆನ್ನಾಗಿ ಆಕ್ಟ್ ಮಾಡ್ತಿಲ್ಲ ಅಂತ ಗರಂ ಆದ ದಿನಾಕರ್ ತೂಗುದೀಪ; ಈ ವ್ಯಕ್ತಿಯ ಮಾತಿಗೆ ಓಕೆ ಅಂದುಬಿಟ್ಟರಂತೆ