
ವೈವಾಹಿಕ ಜೀವನಕ್ಕೆ ನಟ ದಿಗಂತ್ ಕಾಲಿಟ್ಟ ನಂತರ ಟ್ರ್ಯಾವಲಿಂಗ್, ಸೈಕಲಿಂಗ್ ಅದು ಇದು ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ಮುಂದಿನ ಚಿತ್ರ 'ಕ್ಷಮಿಸಿ ನಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್ ಅಗುವುದರ ಬಗ್ಗೆ ಇತ್ತೀಚಿಗೆ ನಡೆದ ಸುದ್ದಿ ಗೋಷ್ಠಿಯಲ್ಲಿ ತಂಡ ಮಾಹಿತಿ ನೀಡಿದೆ.
ಇದೇನಪ್ಪಾ ದಿಗಂತ್ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂತಿದ್ದಾರೆ?
ಅಪ್ಪಟ ಮಲೆನಾಡಿನ ಜನರಿಗೆ ಮಾಡಿಟ್ಟಿರುವ ಈ ಕಥೆಗೆ ನಿರ್ದೇಶಕರು ಆರಂಭದಲ್ಲಿ ಕಮರ್ಷಿಯಲ್ ಹೀರೋನನ್ನು ಆಯ್ಕೆ ಮಾಡಿಬೇಕೆಂದು ನಿರ್ಧಿಸಿದ್ದರು ಆದರೆ ಬೇರೆಯವರ ಹತ್ತಿರ ಕಥೆ ಹೇಳಿ ದಿಗಂತ್ ಚನ್ನಾಗಿದೆ ಎಂದು ಹೇಳಿದ ನಂತರವೇ ತಂಡ ಅವರನ್ನು ಸಂಪರ್ಕಿಸಿದರು. ಕಾಮಿಡಿ ಜಾನರ್‌ನಲ್ಲಿ ಸಾಗುವ ಈ ಚಿತ್ರವನ್ನು 20 ದಿನಗಳಲ್ಲಿ ಶೂಟಿಂಗ್ ಮಾಡಲಾಗಿದೆ.
'ಮಲೆನಾಡಿನ ಹುಡುಗ ನಾನು. ಕಲಾವಿದನಾಗಿದ್ದರಿಂದ ಮಲೆನಾಡಿನ ಕಥೆಯ ಸಿನಿಮಾ ಮಾಡಬೇಕು ಎಂಬ ಆಸೆ. ಈ ಹಿಂದೆ ತುಂಬಾ ಕಥೆಗಳನ್ನು ಕೇಳಿದೆ ಯಾವುದು ಇಷ್ಟವಾಗಿರಲಿಲ್ಲ. ಅಡಿಗೆ ಬೆಳೆಗಾರ, ಹವ್ಯಕ ಬ್ರಾಹ್ಮಣ ಮಾಣಿ, ಎಂಎಟಿ ಗಾಡಿ, ಗೊಬ್ಬರದ ಅಂಗಡಿ ಇಟ್ಟುಕೊಂಡಿರುವ ಒಂದು ಪಾತ್ರವಿರುವ ಕಥೆ ಸಿಕ್ಕಿತು. 7 ವರ್ಷಗಳ ನಂತರ ಐಂದ್ರಿತಾ ಜೊತೆ ಅಭಿನಯಿಸಿರುವೆ. ಅಲ್ಲದೆ ನಮ್ಮ ಸಿನಿಮಾದ ಎರಡು ಹಾಡುಗಳನ್ನು ಕೇಳಿ ಬೋಲ್ಡ್ ಆದೆ' ಎಂದು ದಿಗಂತ್ ಮಾತನಾಡಿದ್ದಾರೆ.
"
ಕನ್ನಡತಿ ಅಭಿನಯಿಸಿದ್ದಾರೆ:
ಕನ್ನಡತಿ ಧಾರಾವಾಹಿಯ ಭುವಿ ಅಲಿಯಾಸ್ ರಂಜನಿ ರಾಘವನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 2018ರಲ್ಲಿ ಚಿತ್ರಕತೆ ಕೇಳಿ ತುಂಬಾನೇ ಇಷ್ಟಪಟ್ಟರಂತೆ. ಪಕ್ಕಾ ಮಲೆನಾಡಿನ ಭಾಷೆಯಲ್ಲಿ ಇಡೀ ತಂಡ ಮಾತನಾಡುವಾಗ ಆರಂಭದಲ್ಲಿ ರಂಜನಿಗೆ ಏನೂ ಅರ್ಥವಾಗುತ್ತಿರಲಿಲ್ಲ ಎಂದು ಹೇಳುತ್ತಾ ತಮ್ಮ ಪಾತ್ರದ ಹೆಸರು ಸೌಮ್ಯ ಎಂದು ತಿಳಿಸಿದ್ದಾರೆ.
ಶುರುವಾಯ್ತು ದಿಗ್ಗಿ-ಆ್ಯಂಡಿ ಮೋಜು ಮಸ್ತಿ; ಬೀಚಲ್ಲಿ ಹೊಸ ಕೋರ್ಸ್‌ಗೆ ಸೇರಿಕೊಂಡ ಜೋಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.