ನಟಿ ಅಮೂಲ್ಯ ಹಾಗೂ ಜಗದೀಶ್ ರಾಮಂದಿರ ನಿರ್ಮಾಣಕ್ಕೆ ಭಾರೀ ದೇಣಿಗೆ ನೀಡಿರುವುದರ ಬಗ್ಗೆ ತಿಳಿಸಿದ್ದಾರೆ. ರಶೀದಿ ಫೋಟೋ ಹಂಚಿಕೊಂಡು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜನವರಿ 15ರಿಂದ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಶ್ರೀ ಸಾಮಾನ್ಯರು ಹಾಗೂ ಸೆಲೆಬ್ರಿಟಿಗಳು ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ರಾಜರಾಜೇಶ್ವರಿ ನಿವಾಸಿಗಳಾಗಿರುವ ಜಗದೀಶ್ ಹಾಗೂ ಅಮೂಲ್ಯ ದೇಣಿಗೆ ನೀಡಿರುವ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಂದ 6 ಲಕ್ಷ ದೇಣಿಗೆ
ಜಗದೀಶ್ ದಂಪತಿಗಳು 1.50 ಲಕ್ಷ ರೂ ನೀಡಿದ್ದಾರೆ ಹಾಗೂ ತಂದೆ ರಾಮಚಂದ್ರ ಅವರ ಹೆಸರಿನಲ್ಲಿ 1 ಲಕ್ಷ ರೂ ನೀಡಲಾಗಿದೆ. ಸದ್ಯ ಚೆಕ್ ಸಹಿ ಹಾಡುತ್ತಿರುವ ಫೋಟೋವನ್ನು ಅಮೂಲ್ಯ ಶೇರ್ ಮಾಡಿದ್ದಾರೆ. ' ಅಯೋಧ್ಯಾ ಶ್ರೀ ರಾಮನಿಗಾಗಿ ನಮ್ಮ ಕಿರುಕಾಣಿಕೆ. ನಾನು ಇದರಲ್ಲಿ ಭಾಗಿಯಾಗಿರುವುದಕ್ಕೆ ತುಂಬಾನೇ ಸಂತೋಷವಿದೆ. #NidhiSamrapan4RamMandir ಕ್ಯಾಂಪೇನ್. ಎಲ್ಲರೂ ಒಟ್ಟಾಗಿ ರಾಮಂದಿರ ಕಟ್ಟಲು ಸಹಾಯ ಮಾಡೋಣ. ಜೈ ಶ್ರೀರಾಮ್' ಎಂದು ಜಗದೀಶ್ ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ನಟ ಜಗ್ಗೇಶ್ ರಾಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಟ ಅಕ್ಷಯ್ ಕುಮಾರ್ ಕೂಡ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈಗಾಗಲೇ ಪವರ್ ಸ್ಟಾರ್ ಪವನ್ ಕಲ್ಯಾಣ್ 30 ಲಕ್ಷ ರೂ. ನೀಡಿರುವುದರ ಬಗ್ಗೆ ಮಾಹಿತಿ ಇದೆ.