ಕನ್ನಡದಲ್ಲಿಯೇ ಅಪ್ಪು ಇಂಟರ್​ವ್ಯೂ ಮಾಡಿದ್ದ ರಶ್ಮಿಕಾ: ಅಪರೂಪದ ಕುತೂಹಲದ ವಿಡಿಯೋ ವೈರಲ್​

ನಟಿ ರಶ್ಮಿಕಾ ಮಂದಣ್ಣ, ಪುನೀತ್​ ರಾಜ್​ಕುಮಾರ್​ ಅವರ ಜೊತೆ ಕನ್ನಡದಲ್ಲಿಯೇ ಸಂದರ್ಶನ ಮಾಡಿದ್ದ ಹಳೆಯ ವಿಡಿಯೋ ವೈರಲ್​ ಆಗಿದೆ.  ಏನಿದೆ ಇದರಲ್ಲಿ?
 

Rashmika Mandanna being interviewed in Kannada with Puneeth Rajkumar has gone viral suc

ಇಂದು ಕನ್ನಡದ ಕಣ್ಮಣಿ ಅಪ್ಪು ಅರ್ಥಾತ್​  ಪುನೀತ್​  ರಾಜ್​ ಅವರ 50ನೇ ಹುಟ್ಟುಹಬ್ಬದ ಸಂಭ್ರಮ.  ಅರಳುವ ಮುನ್ನವೇ ಬಾಡಿದ ಈ ನಟನ ಬಗ್ಗೆ ಇನ್ನೂ ಅದೆಷ್ಟೋ ಮಂದಿ ಮರೆಯಲಾಗದ ನೆನಪಿನ ಬುತ್ತಿಗಳನ್ನು ಬಿಚ್ಚಿಡುತ್ತಲೇ ಇದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಮೂರೂವರೆ ವರ್ಷಗಳಾದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. 

ಇದು ಅಪ್ಪು ಮಾತಾದರೆ, ಇನ್ನು ಕೊಡಗಿನ ಬೆಡಗಿ, ಕಾಂಟ್ರವರ್ಸಿ ಲೇಡಿ, ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಅವರು ಈಗ ಛಾವಾ ಸಿನಿಮಾದ ಖುಷಿಯಲ್ಲಿದ್ದಾರೆ. ಒಂದರ  ಮೇಲೊಂದು ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ಕೊಡುತ್ತಲೇ ಬಂದಿರುವ ನಟಿ, ಈಚೆಗೆ ತಮ್ಮ ಅಪ್ಪನಿಗಿಂತಲೂ ದೊಡ್ಡ ವಯಸ್ಸಿನವರಾದ ಸಲ್ಮಾನ್​ ಖಾನ್​ ಜೊತೆ ಸಿಕಂದರ್​ ಚಿತ್ರದಲ್ಲಿ ರೊಮಾನ್ಸ್​ ಮಾಡಿ ಟೀಕೆಯನ್ನೂ ಎದುರಿಸುತ್ತಿದ್ದಾರೆ. ರಶ್ಮಿಕಾಗೆ ಮಗಳು ಹುಟ್ಟಿದರೆ ಅವಳ ಜೊತೆನೂ ರೊಮಾನ್ಸ್​ ಮಾಡ್ತೇನೆ, ಏನಿವಾಗ ಎನ್ನುವ ಮೂಲಕ ಸಲ್ಮಾನ್​ ಖಾನ್​ ಕೂಡ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

Latest Videos

'ಅಪ್ಪು' ಜೀವನಚರಿತ್ರೆಯಲ್ಲಿದೆ ಏಳು 'F': ಕುತೂಹಲದ ವಿಷಯ ರಿವೀಲ್​ ಮಾಡಿದ ಲೇಖಕ ಪ್ರಕೃತಿ ಬನವಾಸಿ

ಅದೇನೇ ಇರಲಿ. ರಶ್ಮಿಕಾ ಅವರಿಗೂ ಇರುವ ಅಭಿಮಾನಿಗಳ ಸಂಖ್ಯೆ ಲೆಕ್ಕಕ್ಕೇ ಇಲ್ಲ. ತಾವು ಇಲ್ಲಿಯ ಹುಡುಗಿ, ಅಲ್ಲಿಯ ಹುಡುಗಿ ಎಂದೆಲ್ಲಾ ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುವ ಮೂಲಕ ಕಾಂಟ್ರವರ್ಸಿ ಸೃಷ್ಟಿಸಿಕೊಳ್ತಿರೋ ರಶ್ಮಿಕಾ ಕೊಡಗಿನ ಬೆಡಗಿ, ಕನ್ನಡದ ಮಗಳು ಎನ್ನುವುದಂತೂ ಸುಳ್ಳಲ್ಲ. ಇದೀಗ ಕನ್ನಡದಲ್ಲಿಯೇ ಅವರು ಪುನೀತ್​ ರಾಜ್​ಕುಮಾರ್​ ಜೊತೆ ಮಾಡಿರುವ ಸಂದರ್ಶನದ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಇದು ಈ ಇಬ್ಬರು ತಾರೆಯರು ಒಟ್ಟಾಗಿ ನಟಿಸಿದ್ದ ಅಂಜನಿ ಪುತ್ರ ಚಿತ್ರದ ಕುರಿತಾಗಿ. ಈ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ರಶ್ಮಿಕಾ ಅವರು, ಪುನೀತ್​ ರಾಜ್​ ಅವರ ಸಂದರ್ಶನ ಮಾಡಿದ್ದರು.  ಈ ಚಿತ್ರಕ್ಕಾಗಿ ನಾನು ತುಂಬಾ ಎಕ್ಸ್ಟೈಟ್​ ಆಗಿದ್ದೀನಿ ಎಂದು ರಶ್ಮಿಕಾ ಹೇಳಿದ್ದರೆ, ಪುನೀತ್​ ಕೂಡ ನಿಮ್ಮಷ್ಟೇ ನಾನೂ ಎಕ್ಸ್ಟೈಟ್​ ಆಗಿದ್ದೀನಿ ಎಂದಿದ್ದರು. ಈ ಚಿತ್ರದ ಕುರಿತು ಈ ಸಿನಿಮಾ ಜೋಡಿ ಮಾತನಾಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. 

ನಿಮ್ಮಂಥ ಮೇರು ನಟರ ಜೊತೆ ನಾನು ಸ್ಕ್ರೀನ್​ ಶೇರ್​ ಮಾಡಿಕೊಳ್ತಿರುವುದಕ್ಕೆ ತುಂಬಾ ಖುಷಿಯಾಗ್ತಿದೆ ಎಂದು ರಶ್ಮಿಕಾ ಹೇಳಿದ್ದಾರೆ. ಇನ್ನು ಅಂಜನಿ ಪುತ್ರ ಸಿನಿಮಾ ಕುರಿತು ಹೇಳುವುದಾದರೆ, ಈ ಚಿತ್ರ ನಿರ್ದೇಶಕ ಹರಿ ಅವರ ತಮಿಳು ಚಲನಚಿತ್ರ ಪೂಜಾಯಿ  ಚಿತ್ರದ ರಿಮೇಕ್ ಆಗಿದೆ. ಎ. ಹರ್ಷ ನಿರ್ದೇಶಿಸಿದ ಮತ್ತು ಎಮ್.ಎನ್. ಕುಮಾರ್ ನಿರ್ಮಿಸಿದ ಚಿತ್ರವಿದು.  ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ,  ಪಿ. ರವಿಶಂಕರ್, ರಮ್ಯಾ ಕೃಷ್ಣನ್, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರವಿ ಬಸ್ರೂರ್ ಅವರು ಚಿತ್ರಕ್ಕಾಗಿ ಸಂಗೀತ ನೀಡಿದ್ದಾರೆ. ಛಾಯಾಗ್ರಹಣವನ್ನು ಸ್ವಾಮಿ ಜೆ ಮಾಡಿದ್ದಾರೆ ಹಾಗೂ ದೀಪು ಎಸ್.ಕುಮಾರ್ ಚಲನಚಿತ್ರ ಸಂಕಲನ ನಿರ್ವಹಿಸಿದ್ದಾರೆ.  21 ಡಿಸೆಂಬರ್ 2017 ರಂದು ಚಿತ್ರ ಬಿಡುಗಡೆಗೊಂಡಿದೆ. ಈ ಸಂದರ್ಶನವನ್ನು ಎಸ್​ಜಿವಿ ಕನ್ನಡ ಮೀಡಿಯಾ ಶೇರ್​ ಮಾಡಿಕೊಂಡಿದೆ.

ಅಪ್ಪು ಪರಿಚಯಿಸಿದ 'ಡಿವೋರ್ಸ್​ ಲಾಯರ್'​ ಕನಸಿನ ಹುಡುಗ ಹೀಗಿರ್ಬೇಕಂತೆ! ನಟಿಯ ಮಾತಿಗೆ ಫ್ಯಾನ್ಸ್​ ಫುಲ್​ ಖುಷ್​...

vuukle one pixel image
click me!