ಮಗನಿದ್ದಾನೆ ಮಗಳೂ ಇದ್ದಾಳೆ ಯಾರಾದರೇನು ಆರೋಗ್ಯ ಮುಖ್ಯ: ಎರಡನೇ ಮಗುವಿನ ಬಗ್ಗೆ ಧ್ರುವ ಮಾತು

Published : Aug 31, 2023, 04:02 PM IST
ಮಗನಿದ್ದಾನೆ ಮಗಳೂ ಇದ್ದಾಳೆ ಯಾರಾದರೇನು ಆರೋಗ್ಯ ಮುಖ್ಯ: ಎರಡನೇ ಮಗುವಿನ ಬಗ್ಗೆ ಧ್ರುವ ಮಾತು

ಸಾರಾಂಶ

ಆಕ್ಷನ್ ಪ್ರಿನ್ಸ್‌ ಕುಟುಂಬಕ್ಕೆ ಎರಡನೇ ಕಂದಮ್ಮ ಎಂಟ್ರಿ. ಧ್ರುವ ಫಸ್ಟ್ ರಿಯಾಕ್ಷನ್ ಏನು?  

ಕನ್ನಡ ಚಿತ್ರರಂಗದ ಸ್ಯಾಂಡಲ್‌ವುಡ್‌ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಸೆಪ್ಟೆಂಬರ್‌ ತಿಂಗಳಿನಲ್ಲಿ ಕಂದಮ್ಮ ಬರ ಮಾಡಿಕೊಳ್ಳುತ್ತಿರುವ ವಿಚಾರ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಇದು ಶಾಕಿಂಗ್ ನ್ಯೂಸ್ ಆಗಿದ್ದರು ಸರ್ಜಾ ಕುಟುಂಬ ಬೆಳೆಯುತ್ತಿದೆ ಎಂದು ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.

'ನನಗೆ ಈಗಾಗಲೆ ಮಗನಿದ್ದಾನೆ ಮೊಗಳು ಇದ್ದಾಳೆ..ಹೀಗೆ ಅಂತ ಹೇಳುವುದಿಲ್ಲ ಯಾವ ಮಗು ಆದರೂ ನನಗೆ ಓಕೆ. ಸೆಪ್ಟೆಂಬರ್‌ ತಿಂಗಳಿಗೆ ಡೇಟ್ ಕೊಟ್ಟಿದ್ದಾಗ ಆಗ ಕಂದಮ್ಮ ಎಂಟ್ರಿ ಆಗಲಿದೆ' ಎಂದು ಧ್ರುವ ಸರ್ಜಾ ಖಾಸಗಿ ಟಿವಿವೊಂದರಲ್ಲಿ ಮಾತನಾಡಿದ್ದಾರೆ. ಧ್ರುವ ಸರ್ಜಾ ಮತ್ತು ಪ್ರೇರಣಾ ಈಗಾಗಲೆ ಹೆಣ್ಣು ಮಗುವಿಗೆ ಪೋಷಕರಾಗಿದ್ದು 10 ತಿಂಗಳಾಗಿದೆ ಶೀಘ್ರದಲ್ಲಿ ಮಗುವಿನ ನಾಮಕರಣ ಮತ್ತು ಬರ್ತಡೇ ಮಾಡುವ ಪ್ಲಾನ್ ಮಾಡಿದ್ದರು ಅಷ್ಟರಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ರಿವೀಲ್ ಮಾಡಿದ್ದಾರೆ..ಇದು ಡಬಲ್ ಧಮಾಕಾ. 

ನೀನು ಬಂದು ಮಲ್ಕೊಂಡ್ರೆನೇ ಜೀವನ: ಲಾಡ್ಜ್‌ನಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮಜಾ ಭಾರತ ಸುಶ್ಮಿತಾ!

ಒಳ್ಳೆಯದಾಗಲಿ ಗಂಡು ಮಗುವಾಗಲಿ ಎಂದು ಸಾಕಷ್ಟು ಕಾಮೆಂಟ್‌ಗಳು ಬಂದಿದೆ. ಸದ್ಯ ಮಾರ್ಟಿನ್ ಸಿನಿಮಾ ಚಿತ್ರೀಕರಣದಲ್ಲಿ ಧ್ರುವ ಸರ್ಜಾ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಅಂದ್ರೆ ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ವರ್ಷದಲ್ಲಿ ಎರಡು ಸಿನಿಮಾ ಮಾಡಿ ರಿಲೀಸ್ ಮಾಡುವುದಾಗಿ ಈ ಹಿಂದೆ ಧ್ರುವ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದರು. 

10 ವರ್ಷ ಆದ್ಮೇಲೆ ಈಕೆ ಸಿಕ್ಕಿರುವುದು ನನ್ನ ಅದೃಷ್ಟ: ಲವ್‌ ಬಗ್ಗೆ ಹಿಂಟ್ ಕೊಟ್ಟ ರಕ್ಷಿತ್ ಶೆಟ್ಟಿ?

ಗಂಡು ಮಗು ಯಾರು? 

ಧ್ರುವ ಸರ್ಜಾ ಎಲ್ಲೇ ಹೋದರೂ ನನಗೆ ಗಂಡು ಮಗ ಇದ್ದಾನೆ ಎಂದು ಆಗಾಗ ಹೇಳುತ್ತಿರುತ್ತಾರೆ. ಈ ಮಾತಿಗೆ ಅನೇಕರು ಕನ್ಫ್ಯೂಸ್ ಆಗಿದ್ದಾರೆ....ಗಂಡ ಮಗ ಅಂದ್ರೆ ಅಣ್ಣನ ಮಗ ರಾಯನ್ ರಾಜ್ ಸರ್ಜಾ. ಹೌದು ಅಣ್ಣ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ಗೆ ಹುಟ್ಟಿರುವ ಮುದ್ದಾದ ರಾಜಕುಮಾರ ರಾಯನ್ ರಾಜ್ ಸರ್ಜಾ. ಶಿಷ್ಯಾ ಶಿಷ್ಯಾ ಎಂದು ಧ್ರುವ ರಾಯನ್‌ ಕರೆಯುತ್ತಾರೆ..ಇವರಿಬ್ಬರು ಭೇಟಿ ಮಾಡಿದ ಕ್ಷಣಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಧ್ರುವ ಸರ್ಜಾಗೆ ಮೊದಲು ಹುಟ್ಟಿರುವುದು ಹೆಣ್ಣು ಮಗು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!