48ನೇ ವಯಸ್ಸಲ್ಲಿ ನಟಿ ನಗ್ಮಾ ವಿವಾಹವಾಗ್ತಿದ್ದಾರಾ? ಅವರು ಹೇಳಿದ್ದೇನು?

By Suvarna News  |  First Published Aug 31, 2023, 3:32 PM IST

ಬಹುಭಾಷಾ ನಟಿ ನಗ್ಮಾ ಅವರಿಗೆ 48 ವರ್ಷ ವಯಸ್ಸಾಗಿದ್ದು, ಇದೀಗ ಅವರು ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ನಟಿ ಹೇಳಿದ್ದೇನು? 
 


ಬಹುಭಾಷಾ ನಟಿ ನಗ್ಮಾ (Nagma) ಶಿವರಾಜ್ ಕುಮಾರ್ ಅಭಿನಯದ ಕುರುಬನ ರಾಣಿ ಚಿತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ರವಿಮಾಮ ಹಾಗೂ ಹೃದಯವಂತ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ನಗ್ಮಾ  ಹಿಂದಿ, ಮಲಯಾಳಂ, ತೆಲುಗು, ಬೋಜಪುರಿ ಚಿತ್ರಗಳಲ್ಲೂ  ಸೈ ಎನಿಸಿಕೊಂಡಿದ್ದಾರೆ. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು ಇವರು.  ಬಹುಬೇಡಿಕೆಯ ನಟಿಯಾಗಿದ್ದ ನಗ್ಮಾ ಬೇಡಿಕೆ ಇರುವಾಗಲೇ ಚಿತ್ರರಂಗದಿಂದ ದೂರ ಆದರು. ಹಲವು ಭಾಷೆಗಳಲ್ಲಿ ನಟಿಸುವ ಮೂಲಕ ತಮ್ಮ ಸಿನಿ ಜೀವನದಲ್ಲಿ ನಟಿ ನಗ್ಮಾ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದರು. ತಮ್ಮ ಉತ್ತಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.  ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಗ್ಮಾ 2008ರಲ್ಲಿ ಸಿನಿಮಾಗಳಿಂದ ಅಂತರ ಕಾಯ್ದುಕೊಂಡರು. ಇದಾದ ಬಳಿಕ ರಾಜಕೀಯ ಪ್ರವೇಶ ಮಾಡಿದರು. ಪ್ರಸ್ತುತ ಕಾಂಗ್ರೆಸ್​ ಸರ್ಕಾರದಲ್ಲಿ ನಗ್ಮಾ ಬಿಜಿಯಾಗಿದ್ದಾರೆ.

ನಗ್ಮಾ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ವಯಸ್ಸು 48. 1974ರ ಡಿಸೆಂಬರ್​ 25ರಂದು ಹುಟ್ಟಿರುವ ನಗ್ಮಾ ಅವರು ವಯಸ್ಸು 48 ಆದರೂ ಇದುವರೆಗೂ ಸಿಂಗಲ್​ ಆಗಿದ್ದಾರೆ. ನಟಿ ನಗ್ಮಾ 2008 ರಿಂದ ಚಿತ್ರರಂಗಕ್ಕೆ ಬ್ರೇಕ್ ನೀಡಿ ಕಾಂಗ್ರೆಸ್ ಪಕ್ಷಕ್ಕೆ (Congress) ಸೇರಿಕೊಂಡಿದ್ದರು. ರಾಜಕೀಯದಲ್ಲಿ ನಟಿ ಸಕ್ರಿಯರಾಗಿದ್ದಾರೆ. ಇನ್ನು ನಟಿ ನಗ್ಮಾ ಅವರ ಕಾಲದಲ್ಲಿ ಮದುವೆಯ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಇವರು ಮದುವೆಯಾಗುವ ಹುಡುಗನ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಇವರ ಹೆಸರು ಹಲವರ ಜತೆಯಲ್ಲಿ ಆ ಕಾಲದಲ್ಲಿ ತಳುಕು ಹಾಕಿಕೊಂಡಿತ್ತು. ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಮತ್ತು ನಗ್ಮಾ ಪ್ರೇಮ ಪ್ರಕರಣ ಭಾರೀ ಸುದ್ದಿಯಾಗಿತ್ತು. 

ಉಂಗುರ ಹಾಕ್ಬೇಕಾದ್ರೆ ನಡಗ್ತಿದ್ದೆ, ತಾಳಿ ಕಟ್ಬೇಕಾದ್ರೆ ಬಿಂದಾಸ್​: ಅದಿತಿ-ಯಶಸ್​ ಕೌತುಕ ಸ್ಟೋರಿ

Tap to resize

Latest Videos

ಅದಾದ ಬಳಿಕ ಮದುವೆಯಾದ ಶರತ್​ ಕುಮಾರ್​, ಮನೋಜ್​ ತಿವಾರಿ (Manoj Tiwari) ಮತ್ತು ರವಿ ಕಿಶಾನ್​ (Ravi Kishan) ಜತೆಯೂ ಹೆಸರು ಕೇಳಿಬಂದಿತ್ತು.  ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ನಟ ರವಿ ಕಿಶನ್ ಅವರಿಗೆ ಈ ವಿಷಯವಾಗಿ ಕೇಳಲಾಗಿತ್ತು.  ಆಗ ಅವರು ಇವೆಲ್ಲಾ ಸುಳ್ಳು ಸುದ್ದಿ ಎಂದಿದ್ದರು. 'ನಮ್ಮಿಬ್ಬರ ಚಿತ್ರಗಳು ಬ್ಲಾಕ್‌ಬಸ್ಟರ್ ಆಗಿದ್ದರಿಂದ ನಾವು ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದೆವು. ನಾವು ಉತ್ತಮ ಸ್ನೇಹಿತರಾಗಿದ್ದೇವೆ ಮತ್ತು ಮುಖ್ಯವಾಗಿ ನಾನು ಮದುವೆಯಾಗಿದ್ದೇನೆ ಎಂದು ಎಲ್ಲರಿಗೂ ತಿಳಿದಿತ್ತು. ನಾನು ನನ್ನ ಹೆಂಡತಿ ಪ್ರೀತಿ ಶುಕ್ಲಾಳನ್ನು ಗೌರವಿಸುತ್ತೇನೆ ಮತ್ತು ಹೆದರುತ್ತೇನೆ. ನಾನು ಅವಳ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತೇನೆ ಎಂದು ಈ ಮೊದಲು ಬಹಿರಂಗಪಡಿಸಿದ್ದೇನೆ. ನನ್ನ ಹೆಂಡತಿ ಮೊದಲಿನಿಂದಲೂ ನನ್ನೊಂದಿಗೆ ಇದ್ದಳು ಮತ್ತು ನನ್ನ ಬಳಿ ಹಣವಿಲ್ಲದಿರುವಾಗಲೂ ಅವಳು ನನ್ನೊಂದಿಗೆ ಇದ್ದಳು' ಎಂದು ಹೇಳಿದ್ದರು. 

ಇದೀಗ ತಮ್ಮ ಮದುವೆಯ ಕುರಿತು ನಗ್ಮಾ ಮೌನ ಮುರಿದಿದ್ದಾರೆ.  ನಾನು ಮದುವೆ ಆಗುವುದಿಲ್ಲ ಎಂದು ಯಾವತ್ತಿಗೂ ಹೇಳಿಲ್ಲ, ಅಥವಾ ಮದುವೆಯಾಗುವುದಿಲ್ಲ ಎಂದು ಯೋಚಿಸಿಯೂ ಇಲ್ಲ. ನನಗೂ ಮದುವೆಯಾಗುವ ಆಸೆ ಇದೆ. ಸಂಗಾತಿ ಮತ್ತು ಮಕ್ಕಳಾಗುವ ಭರವಸೆ ಈಗಲೂ ಇದೆ. ಮದುವೆಯ ಮೂಲಕ ಸಂಸಾರ ಆರಂಭಿಸುವ ಯೋಚನೆ ಇದೆ. ಸಮಯ ಸಿಕ್ಕರೆ ತನ್ನ ಮದುವೆ ಆಗಬಹುದಾ ಎಂದು ನೋಡುತ್ತೇನೆ. ಮದುವೆಯಾದರೆ ನನಗೂ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.   

ಬಾರ್ಬಿಡಾಲ್​ ರೂಪದಲ್ಲಿ ನಿವೇದಿತಾ ವಿಡಿಯೋ! ಹಾರ್ಟ್​ ಬೀಟ್​ ಹೆಚ್ತಿದೆ ಗೊಂಬೆ ಅಂತಿದ್ದಾರೆ ಫ್ಯಾನ್ಸ್​

click me!