ಧ್ರುವ ಸರ್ಜಾ ಮನೆಗೆ ತಿಂಗಳಲ್ಲಿ ಇನ್ನೋರ್ವ ಅತಿಥಿ: ಕುತೂಹಲದ ಪೋಸ್ಟ್‌ ಶೇರ್‌ ಮಾಡಿದ ನಟ!

Published : Aug 25, 2023, 06:00 PM ISTUpdated : Aug 25, 2023, 06:05 PM IST
ಧ್ರುವ ಸರ್ಜಾ ಮನೆಗೆ ತಿಂಗಳಲ್ಲಿ ಇನ್ನೋರ್ವ ಅತಿಥಿ: ಕುತೂಹಲದ ಪೋಸ್ಟ್‌ ಶೇರ್‌ ಮಾಡಿದ ನಟ!

ಸಾರಾಂಶ

ನಟ ಧ್ರುವ ಸರ್ಜಾ ಮನೆಗೆ ತಿಂಗಳಲ್ಲಿ ಇನ್ನೋರ್ವ ಅತಿಥಿ ಆಗಮನವಾಗುತ್ತಿದೆ. ಈ ಕುರಿತು ಕುತೂಹಲದ ಪೋಸ್ಟ್‌ ಅನ್ನು ಅವರು ಶೇರ್‌ ಮಾಡಿದ್ದಾರೆ.   

ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ, ವರಮಹಾಲಕ್ಷ್ಮೀ (Varamahalakshmi) ಹಬ್ಬದ ಪ್ರಯುಕ್ತ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ವಿಶೇಷ ರೀತಿಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್‌ ಮಾಡಿಕೊಂಡಿರುವ ನಟ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಮನೆಗೆ ಹೊಸ ಸದಸ್ಯರ ಆಗಮನವಾಗುತ್ತಿರುವುದಾಗಿ ಹೇಳಿರುವ ಧ್ರುವ ಸರ್ಜಾ ಈ ಮೂಲಕ ತಾವು 2 ನೇ ಮಗುವಿಗೆ ತಂದೆಯಾಗುತ್ತಿರುವ ವಿಷಯ ತಿಳಿಸಿದ್ದಾರೆ. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್‌ ಗರ್ಭಿಣಿಯಾಗಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ ಜೋಡಿ.  ನಟನ ಈ ಪೋಸ್ಟ್‌ಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

2022ರ ಅಕ್ಟೋಬರ್‌ನಲ್ಲಿ ಹೆಣ್ಣು ಮಗುವನ್ನು   ಬರಮಾಡಿಕೊಂಡಿದ್ದ  ನಟ ಧ್ರುವ ಸರ್ಜಾ (Dhruva Sarja) ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಎರಡನೇ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ನಟ ಧ್ರುವ ಸರ್ಜಾ ಇದೀಗ ಪ್ಯಾನ್‌ ಇಂಡಿಯಾ ಸಿನಿಮಾಗಳತ್ತ ಹೆಚ್ಚು ಗಮನ ಹಾಯಿಸಿದ್ದಾರೆ.  ಎ.ಪಿ ಅರ್ಜುನ್‌ ಜತೆಗಿನ ಮಾರ್ಟಿನ್‌ ಸಿನಿಮಾ ಶೂಟಿಂಗ್‌ ಮುಗಿಸಿರುವ ಅವರು, ಇನ್ನೊಂದೆಡೆ ಪ್ರೇಮ್‌ ಜತೆಗೆ ಕೆಡಿ ಸಿನಿಮಾ ಕೆಲಸದಲ್ಲಿ  ಬಿಜಿಯಾಗಿದ್ದಾರೆ. ಈ ಎರಡೂ ಸಿನಿಮಾಗಳು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿವೆ. ಈ ನಡುವೆಯೇ ಅಪ್ಪನಾಗುವ ವಿಷಯವನ್ನು ಶೇರ್‌ ಮಾಡಿಕೊಂಡಿದ್ದಾರೆ. 

Rakksh Ram: ಬೆಳ್ಳಿತೆರೆಗೆ ನಾಯಕನಾಗಿ ಎಂಟ್ರಿಕೊಟ್ಟ ಗಟ್ಟಿಮೇಳದ ವೇದಾಂತ್‌; ಪೋಸ್ಟರ್‌ ರಿಲೀಸ್‌

ಅಂದಹಾಗೆ, ಪ್ರೇರಣಾ ಅವರು ಈಗ ಎಂಟು ತಿಂಗಳ ತುಂಬು ಗರ್ಭಿಣಿ. 2019ರಲ್ಲಿಯೇ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್‌ (Prerana Shankar) ವಿವಾಹ ನಡೆದಿತ್ತು.  ಅದಾಗಿ ಅಂದರೆ 2022ರ ಅಕ್ಟೋಬರ್‌ 01ರಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದೀಗ ಇದೇ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ. ಈ ಸಿಹಿಸುದ್ದಿಯನ್ನು ವರಮಹಾಲಕ್ಷ್ಮಿ ಹಬ್ಬದಂದು ಒಂದು ಸುಂದರ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ತಿಳಿಸಿದ್ದಾರೆ.  ಸೆಪ್ಟೆಂಬರ್ ಎರಡನೇ ವಾರ ಅಥವಾ ಮೂರನೇ ವಾರ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿ ಧ್ರುವ ಸರ್ಜಾ ಮನೆಯಲ್ಲೂ ಮನೆ ಮಾಡಿದ್ದು, ಇಡೀ ಕುಟುಂಬ ಮನೆಗೆ ತಮ್ಮ ಕುಡಿಯನ್ನು ಆಗಮನ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ.

ಇ‌ನ್‌ಸ್ಟಾಗ್ರಾಮ್‌ನಲ್ಲಿ (Instagram) ಶೇ‌ರ್‌ ಮಾಡಿರುವ ಈ ವಿಡಿಯೋ ಕೊನೆಯವರೆಗೂ ತುಂಬಾ ಕುತೂಹಲ ಕೆರಳಿಸುತ್ತದೆ. ಅಂತ್ಯದಲ್ಲಿ ಧ್ರುವ ಸರ್ಜಾ ಅವರು ತಮ್ಮ ಮೊದಲ ಮಗಳ ಜೊತೆ ಕಾಣಿಸಿಕೊಳ್ಳುತ್ತಾರೆ. ನಂತರ ಹಿಂಬದಿಯಿಂದ ಅವರ ಪತ್ನಿ ಪ್ರೇರಣಾ ಕಾಣಿಸಿಕೊಳ್ಳುತ್ತಾರೆ. ಅವರು ತುಂಬು ಗರ್ಭಿಣಿ ಇರುವುದನ್ನು ನೋಡಬಹುದು. ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. 

Bale Bangara: ರಾಜ್ಯ ಸರ್ಕಾರ ಪರಿಗಣಿಸದಿದ್ದ ಅನಿರುದ್ಧ್​ರ​ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ; ನಟ ಹೇಳಿದ್ದೇನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!
ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?