ಅಮರಾವತಿ ಪೋಲೀಸ್ ಸ್ಟೇಷನ್‌ನಲ್ಲಿ ಕಾಣಿಸಿಕೊಂಡ ಧರ್ಮ ಕೀರ್ತಿರಾಜ್-ಗುರುರಾಜ್ ಜಗ್ಗೇಶ್: ಯಾಕೆ ಗೊತ್ತಾ?

Published : Feb 21, 2025, 04:40 PM ISTUpdated : Feb 21, 2025, 04:42 PM IST
ಅಮರಾವತಿ ಪೋಲೀಸ್ ಸ್ಟೇಷನ್‌ನಲ್ಲಿ ಕಾಣಿಸಿಕೊಂಡ ಧರ್ಮ ಕೀರ್ತಿರಾಜ್-ಗುರುರಾಜ್ ಜಗ್ಗೇಶ್: ಯಾಕೆ ಗೊತ್ತಾ?

ಸಾರಾಂಶ

ಕಡಲ ತೀರದಲ್ಲಿರುವ ಅಮರಾವತಿ ಎಂಬ ಕಾಲ್ಪನಿಕ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್ ಮಿಸ್ಟ್ರಿ ಕಥಾ ಹಂದರವನ್ನು ಹೊಂದಿರುವ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 

ಕಡಲ ತೀರದಲ್ಲಿರುವ ಅಮರಾವತಿ ಎಂಬ ಕಾಲ್ಪನಿಕ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್ ಮಿಸ್ಟ್ರಿ ಕಥಾ ಹಂದರವನ್ನು ಹೊಂದಿರುವ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಧರ್ಮ ಕೀರ್ತಿರಾಜ್ ಮತ್ತು ವೇದ್ವಿಕಾ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಗುರುರಾಜ್ ಜಗ್ಗೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ಸಿನಿಮಾ ಪ್ರಚಾರಕರ್ತರಾದ ನಾಗೇಂದ್ರ ಅವರು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. 

ಯುವನಟ ಧರ್ಮ ಕೀರ್ತಿರಾಜ್ ಈ ಚಿತ್ರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ  ನಟಿಸಿದ್ದು, ಗುರುರಾಜ್ ಜಗ್ಗೇಶ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ವೇದ್ವಿಕ ಚಿತ್ರದ ನಾಯಕಿಯ ಪಾತ್ರ ಮಾಡಿದ್ದಾರೆ. ನಾಯಕ ಧರ್ಮ‌ ಕೀರ್ತಿರಾಜ್ ಮಾತನಾಡುತ್ತ ಈ ಚಿತ್ರದಲ್ಲಿ ನಾನು ಮಫ್ತಿಯಲ್ಲಿರುವ ಪೊಲೀಸ್ ಪಾತ್ರ ಮಾಡಿದ್ದೇನೆ.  ಸಿನಿಮಾದಲ್ಲಿ ಆಕ್ಷನ್ ತುಂಬಾ ವಿಶೇಷವಾಗಿದೆ. ನಿರ್ದೇಶಕ ಪುನೀತ್ ಅವರು ಮಾಡಿಕೊಂಡಿದ್ದ ಕಥೆ ತುಂಬಾ ಚೆನ್ನಾಗಿದೆ ಎಂದು ಹೇಳಿದರು.

ನಿರ್ದೇಶಕ ಪುನೀತ್ ಈಗಾಗಲೇ 36 ದಿನಗಳ ಕಾಲ ನಮ್ಮ ಚಿತ್ರದ ಶೇ.90 ಭಾಗದ ಚಿತ್ರೀಕರಣ ನಡೆಸಲಾಗಿದೆ. ಕ್ಲೈಮ್ಯಾಕ್ಸ್ ಹಾಗೂ ಹಾಡೊಂದರ ಶೂಟಿಂಗ್ ಮಾತ್ರವೇ ಬಾಕಿಯಿದೆ. ಅದನ್ನು ಗೋವಾ ಹಾಗೂ ಹಿಙದೂಪುರದಲ್ಲಿ ಚಿತ್ರೀಕರಿಸುವ ಪ್ಲಾನಿದೆ. ಅಲ್ಲದೆ ಮಾರ್ಚ್ 17ರಂದು  ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನ  ನಮ್ಮ ಚಿತ್ರದ ಲವ್ ಟ್ರ್ಯಾಕೊಂದನ್ನು ಬಿಡುಗಡೆ ಮಾಡುತ್ತಿದ್ದೇವೆ. ಮಾರ್ಚ್ ಎಂಡ್ ಅಥವಾ ಏಪ್ರಿಲ್ ವೇಳೆಗೆ ಸಿನಿಮಾ ರಿಲೀಸ್ ಮಾಡೋ ಯೋಚನೆಯಿದೆ ಎಂದು ಹೇಳಿದರು.

ಚಿತ್ರದಲ್ಲಿ ಪಕ್ಕಾ ನಾಸ್ತಿಕನಾಗಿ ನಟಿಸಿದ್ದೇನೆ: ಆದರೂ ಅಪಾಯವಿದೆ ಎಂದ 'ಅಣ್ಣಯ್ಯ' ಧಾರಾವಾಹಿ ನಟ ವಿಕಾಶ್

ಪುನೀತ್ ಅರಸೀಕೆರೆ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಪಿ. ಪಿ. ಪವರ್ ಪಿಕ್ಚರ್ಸ್ ಲಾಛನದಲ್ಲಿ  ಕೆ.ಆರ್.ಪ್ರದೀಪ್ ಕಮಲಪುರ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಶ್ರೀಮತಿ ಗೀತಾ ಅಂಜನರೆಡ್ಡಿ ಅವರು ಸಹ ನಿರ್ಮಾಪಕಿಯಾಗಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ರೋಣದ ಬಕ್ಕೇಶ್ ಅವರ ಸಂಗೀತ ಸಂಯೋಜನೆಯಿದೆ. ಗೌತಮ್ ಮಟ್ಟಿ ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ, ವೆಂಕಿ ಯುವಿಡಿ ಅವರ ಸಂಕಲನ, ಆರ್ಯ ಶಿವು ಕರಗುಂದ ಅವರ ಸಂಭಾಷಣೆ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರಕ್ಕಿದೆ. ಇನ್ನು ಹಿರಿಯ ನಟಿ ಭವ್ಯ, ಧರ್ಮ, ಸಾಧು ಕೋಕಿಲ, ಕಾಕ್ರೋಚ್ ಸುಧಿ ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮುಂತಾದವರು ಚಿತ್ರದ  ಉಳಿದ ತಾರಾಗಣದಲ್ಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ