ಬದುಕು ಬದಲಿಸಿದ ಆ ದಿನದಂದೇ, 40 ವರ್ಷಗಳ ಬಳಿಕ ಹೊಸ ಸಾಹಸಕ್ಕಿಳಿದ ನಟಿ ಸುಧಾರಾಣಿ

Published : Feb 21, 2025, 04:22 PM ISTUpdated : Feb 21, 2025, 04:41 PM IST
ಬದುಕು ಬದಲಿಸಿದ ಆ ದಿನದಂದೇ, 40 ವರ್ಷಗಳ ಬಳಿಕ ಹೊಸ ಸಾಹಸಕ್ಕಿಳಿದ ನಟಿ ಸುಧಾರಾಣಿ

ಸಾರಾಂಶ

ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ನಟಿಸಿರುವ ಸುಧಾರಾಣಿ‌ ಇಂದು, ಅಂದು ಕೂಡ ಅನೇಕರ ಫೇವರಿಟ್. ಈಗ ಅವರು ಹೊಸ ಸಾಹಸಕ್ಕೆ ಇಳಿದಿದ್ದಾರೆ.   

150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ದಿಗ್ಗಜ ನಟರಿಗೆ ಹೀರೋಯಿನ್‌ ಆಗಿ ಮೆರೆದ ಸುಧಾರಾಣಿ ಅವರು ಸದ್ಯ ಕಿರುತೆರೆ, ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರು ನಟನೆ, ಕಂಠದಾನ, ಮಾಡೆಲಿಂಗ್‌, ಬೇರೆ ವಿಷಯದ ಬಗ್ಗೆ ಕೋರ್ಸ್‌ ಮಾಡುತ್ತಿದ್ದ ಸುಧಾರಾಣಿ ಈಗ ಯುಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾರೆ.

ನಾನು ಜಯಶ್ರೀ ಆಗಿದ್ದೆ
"ನನ್ನನ್ನು ತೆರೆ ಮೇಲೆ ಸುಧಾರಾಣಿಯಾಗಿ ನೋಡಿದ್ದೀರಿ. ಇದಕ್ಕೂ ಮುನ್ನ ನಾನು ಜಯಶ್ರೀ ಆಗಿದ್ದೆ. ನನ್ನದೊಂದು ವ್ಯಕ್ತಿತ್ವ ಇದೆ, ನಾನು ಯಾರು ಎನ್ನೋ ಪ್ರಶ್ನೆ ಇರುತ್ತದೆ. ಇಷ್ಟುದಿನಗಳ ಕಾಲ ನನ್ನನ್ನು ನೋಡಿರುವ ನೀವು ಸ್ವಲ್ಪ ಬಗ್ಗೆ ತಿಳಿದುಕೊಂಡಿರ್ತೀರಿ. ಆದರೆ ಸಂಪೂರ್ಣ ವಿಷಯ ಗೊತ್ತಿರೋದಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ನಾನೇ ನೇರವಾಗಿ ಹಂಚಿಕೊಂಡ್ರೆ ಚೆನ್ನಾಗಿರುತ್ತದೆ” ಎಂದು ಸುಧಾರಾಣಿ ಹೇಳಿದ್ದಾರೆ.

ಸ್ನೇಹಕ್ಕಾಗಿ ಸಿನಿಮಾ ಒಪ್ಪಿಕೊಂಡು ಮೋಸ ಆಗಿದೆ, ದೊಡ್ಡ ಪಾಠ ಕಲಿತಿದ್ದೀನಿ: ಸುಧಾರಾಣಿ

ಯುಟ್ಯೂಬ್‌ ಚಾನೆಲ್‌ ಆರಂಭ 
“ಇಷ್ಟು ವರ್ಷಗಳಿಂದ ನೀವು ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದ್ದೀರಿ, ನೀವು ನಿಮ್ಮ ಅನುಭವಗಳನ್ನು ಯಾಕೆ ಬರೆಯಬಾರದು ಅಂತ ಒಬ್ಬರು ಅಂದ್ರು. ನನಗೆ ಬರೆಯುವಷ್ಟು ಸಮಯ ಇರಲಿಲ್ಲ, ಅಷ್ಟು ಕೌಶಲ ಇರಲಿಲ್ಲ. ನೀವು ಹೇಳಿ, ನಾನು ಬರಿತೀನಿ ಅಂತ ಇನ್ನೊಬ್ಬರು ಹೇಳಿದರು. ಆದರೆ ನನಗೆ ನನ್ನ ಮಾತುಗಳಲ್ಲಿ ಹೇಳಿದ್ರೆ ಚೆನ್ನಾಗಿರತ್ತೆ ಅಂತ ಯುಟ್ಯೂಬ್‌ ಚಾನೆಲ್‌ ಆರಂಭಿಸಿದೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಯುಟ್ಯೂಬ್‌ ಚಾನೆಲ್‌ ಆರಂಭಿಸುವ ಯೋಚನೆ ಬಂದಿತ್ತು" ಎಂದು ಸುಧಾರಾಣಿ ಹೇಳಿದ್ದಾರೆ.

ʼಫೆಬ್ರವರಿ 19ʼ ವಿಶೇಷ ಯಾಕೆ?
"ನನ್ನನ್ನು ನಿಮ್ಮ ಮನೆ ಮಗಳ ರೀತಿ ಸ್ವೀಕಾರ ಮಾಡಿದ್ದೀರಿ. ನನ್ನ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಾನು ರೆಡಿ ಆಗಿದ್ದೇನೆ. 1986 ಫೆಬ್ರವರಿ 19ರಂದು ಆನಂದ್‌ ಸಿನಿಮಾ ಲಾಂಚ್‌ ಆಗಿದೆ. ಈ ಸಿನಿಮಾ ರಿಲೀಸ್‌ ಆಗಿ 40 ವರ್ಷ ಆಗಿದೆ. ಇದು ತುಂಬ ಮೆಮೊರೆಬಲ್‌ ಡೇ. ಈ ದಿನ ಚಾನೆಲ್‌ ಆರಂಭಿಸಿದರೆ ಇನ್ನೊಂದಿಷ್ಟು ವಿಶೇಷ ಅಂತ ಅನಿಸುತ್ತದೆ. ನಾಯಕಿಯಾಗಿ ಮೊದಲ ಬಾರಿಗೆ ಕ್ಯಾಮರಾ ಫೇಸ್‌ ಮಾಡಿದ ಸಮಯವಿದು. ಇದಕ್ಕೂ ಮುನ್ನ ಬಾಲನಟಿಯಾಗಿ ನಟಿಸಿದ್ದರೂ ಕೂಡ ಆನಂದ್‌ ಸಿನಿಮಾ ನನ್ನ ಜೀವನಕ್ಕೆ ತಿರುವು ಕೊಟ್ಟಿದೆ ಎಂದು ಹೇಳಬಹುದು" ಎಂದು ನಟಿ ಸುಧಾರಾಣಿ ಹೇಳಿದ್ದಾರೆ.

'ಚೋಟುದ್ದ ಇದ್ಯಾ? ಎಷ್ಟೋ ಮಾತಾಡ್ತ್ಯಾ?'; ಕಿಶನ್‌ ಮುಂದೆ ಅವಾಜ್‌ ಹಾಕಿದ ನಟಿ ರಮ್ಯಾ!

ತಾಂತ್ರಿಕ ಜ್ಞಾನ ಇರಲಿಲ್ಲ 
“ನನಗೆ ತಾಂತ್ರಿಕವಾಗಿ ಅಷ್ಟು ಜ್ಞಾನ ಇಲ್ಲ. ಮೊದಲು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರಲಿಲ್ಲ, ಈಗ ಆಕ್ಟಿವ್‌ ಆಗಲು ಪ್ರಯತ್ನಪಡುತ್ತಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ನಾನು ಇಂದು ಸುಧಾರಾಣಿಯಾಗಲು ಮೊದಲು ಅವಕಾಶ ನೀಡಿದ ಪಾರ್ವತಮ್ಮ ರಾಜ್‌ಕುಮಾರ್‌, ಡಾ ರಾಜ್‌ಕುಮಾರ್‌, ಸಿಆರ್‌ ರಾವ್‌ ಅವರಿಗೆ ಧನ್ಯವಾದಗಳು” ಎಂದು ಸುಧಾರಾಣಿ ಹೇಳಿದ್ದಾರೆ. 

ದ ರಾ ಬೇಂದ್ರೆ ಮಾತು ಇಷ್ಟ 
“ಹುಚ್ಚನಂತೆ ಇರು, ಪೆದ್ದನಂತೆ ಇರು, ಹೇಗಾದರೂ ಇರು, ಮೊದಲು ನೀನು ನೀನಾಗಿರು. ಗುರಿಯೆಡೆಗೆ ಹೆಜ್ಜೆ ಹಾಕುತ್ತಿರುವ ನಿನ್ನ ಬಗ್ಗೆ ಅರಿಯದವರಿಗೆ, ಸಾಧನೆಯ ಶಿಖರದೊಂದಿಗೆ ಪರಿಚಯವಾಗುವಂತಿರು ಎಂಬ ದ ರಾ ಬೇಂದ್ರೆ ಅವರ ಮಾತು ನನಗೆ ತುಂಬ ಇಷ್ಟ” ಎಂದು ಸುಧಾರಾಣಿ ಹೇಳಿದ್ದಾರೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?