
ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್‌ಗೆ ಅದ್ದೂರಿ ತಯಾರಿ ನಡೆಯುತ್ತಿದೆ. ‘ಕೆಜಿಎಫ್’ ಚಿತ್ರದ ನಂತರ ಪಕ್ಕಾ ಪ್ಲಾನ್ ಮಾಡಿಕೊಂಡು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಹೆಗ್ಗಳಿಕೆಯೊಂದಿಗೆ ಮೂಡಿ ಬರುತ್ತಿರುವ ಈ ಚಿತ್ರದ ಟ್ರೇಲರ್ ಅನ್ನು ನ.24 ರಂದು ಏಕಕಾಲದಲ್ಲಿ ಐದೂ ಭಾಷೆಗಳಲ್ಲೂ ಅನಾವರಣ ಮಾಡಲಾಗುತ್ತಿದೆ.
ಶೋಲೆಗೂ ಅವನೇ ಶ್ರೀಮನ್ನಾರಾಯಣಗೂ ಉಂಟಾ ನಂಟು?
ಈ ನಿಟ್ಟಿನಲ್ಲಿ ಟ್ರೇಲರ್ ಬಿಡುಗಡೆಗಾಗಿ ಏನೆಲ್ಲ ತಯಾರಿಗಳು ನಡೆಯುತ್ತಿವೆ ಎಂಬುದು ಕುತೂಹಲ. ಈಗಾಗಲೇ ಚಿತ್ರದ ಹೊಸ ಪೋಸ್ಟರ್‌ಗಳನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಬುಲೆಟ್ ಮೇಲೆ ಕೂತು ನುಗ್ಗುತ್ತಿರುವ ಪೋಸ್ಟರ್‌ಗೆ ಎಲ್ಲ ಭಾಷೆಯಲ್ಲೂ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಗುತ್ತಿದೆ. ಬೇರೆ ಭಾಷೆಯ ಸ್ಟಾರ್ ನಟರನ್ನೂ ಈ ಪೋಸ್ಟರ್ ಗಮನ ಸೆಳೆದಿದ್ದು, ಈಗ ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆಗೆ ಸೌತ್ ಇಂಡಿಯನ್ ಸ್ಟಾರ್‌ಗಳು ಜತೆಯಾಗುತ್ತಿದ್ದಾರೆ.
ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ನಾನಿ, ಮಯಾಳಂನಲ್ಲಿ ನಿವಿನ್ ಪೌಲ್ ಅವರು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಈ ಮೂವರು ಸ್ಟಾರ್ ನಟರು ತಮ್ಮ ತಮ್ಮ ಭಾಷೆಯಲ್ಲಿ ನ.24 ರಂದು ಸಂಜೆ 4 ಗಂಟೆಗೆ ಏಕಕಾಲದಲ್ಲಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ಆಯೋಜಿಸಿರುವ ನಾಲ್ಕು ರಾಜ್ಯಗಳ ಪತ್ರಕರ್ತರನ್ನೊಳಗೊಂಡ ಮಾಧ್ಯಮ ಗೋಷ್ಟಿಯಲ್ಲಿ ಕನ್ನಡ ಭಾಷೆಯ ಟ್ರೇಲರ್ ಅನಾವರಣಗೊಳ್ಳಲಿದೆ.
ಅಪರೂಪಕ್ಕೆ ಫ್ಯಾನ್ಸ್ ಗಳಿಗೆ ದರ್ಶನ ನೀಡಿದ ’ಅವನೇ ಶ್ರೀಮನ್ನಾರಾಯಣ’!
ಹೀಗೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಯಾರೆಲ್ಲ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಇನ್ನೂ ಹಿಂದಿಯಲ್ಲೂ ಕೂಡ ಸ್ಟಾರ್ ನಟರೊಬ್ಬರು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದು, ಅದು ಯಾರೆಂಬುದು ಇನ್ನೂ ಅಂತಿಮವಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.