'ಪದವಿ ಪೂರ್ಣ'ನೊಂದಿಗೆ ಕೈ ಜೋಡಿಸಿ ನಿರ್ಮಾಣಕ್ಕಿಳಿದ ಯೋಗರಾಜ್‌ ಭಟ್!

Published : Nov 26, 2019, 01:07 PM IST
'ಪದವಿ ಪೂರ್ಣ'ನೊಂದಿಗೆ ಕೈ ಜೋಡಿಸಿ ನಿರ್ಮಾಣಕ್ಕಿಳಿದ ಯೋಗರಾಜ್‌ ಭಟ್!

ಸಾರಾಂಶ

  'ಗಾಳಿಪಟ' ಹಾರಿಸುತ್ತಲೇ 'ಪದವಿ ಪೂರ್ಣ'ನೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ ಯೋಗರಾಜ್‌ ಭಟ್‌ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ತರುವುದರಲ್ಲಿ ಕಿಂಗ್ ಮೇಕರ್.

 

ಆಲೋಚನೆಗಳನ್ನು ಹಾಡಿನ ರೂಪದಲ್ಲಿ ತಂದು ಪ್ರೇಕ್ಷಕರನ್ನೇ ಆಲೋಚನೆಯಲ್ಲಿ ಮುಳುಗುವಂತೆ ಮಾಡುವ ಮಾಸ್ಟರ್ ಡೈರೆಕ್ಟರ್ ಯೋಗರಾಜ್‌ ಭಟ್ ತಮ್ಮ ಬ್ಯಾನರ್‌ನಲ್ಲಿ ಮತ್ತೊಂದು ಚಿತ್ರ ನಿರ್ಮಾಣ ಮಾಡುವುದರ ಬಗ್ಗೆ ಖಚಿತಪಡಿಸಿದ್ದಾರೆ.

ಪ್ರಭುದೇವ ಕೈಗೆ ಗಾಳಿಪಟ ಹಾರ್ಸೋಕೆ ಕೊಟ್ಟು ಬಿಟ್ರು ಯೋಗರಾಜ್ ಭಟ್ರು!

 

ಗಣೇಶ್ ಮತ್ತು ದೂದ್ ಪೇಡ ದಿಗಂತ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಗಾಳಿಪಟ-2' ಕನ್ನಡ ಸಿನಿ ಪ್ರೇಕ್ಷಕರಿಗೆ ನಿರೀಕ್ಷೆ ಹುಟ್ಟಿಸಿದೆ. ಒಂದು ಸಿನಿಮಾ ಮಾಡುತ್ತಲೇ ಮತ್ತೊಂದು ಸಿನಿಮಾ ನಿರ್ಮಾಣ ಮಾಡುವುದರಲ್ಲಿ ರಿಸ್ಕ್‌ ತೆಗೆದುಕೊಂಡಿದ್ದಾರೆ ಭಟ್ರು.

ರಾಧಿಕಾ ನಾರಾಯಣ್‌ಗ ಕ್ಲೀನ್‌ ಬೋಲ್ಡ್‌ ಆದ ದತ್ತಣ್ಣ!

ಹರಿಪ್ರಸಾದ್ ಜಯಣ್ಣ ಆ್ಯಕ್ಷನ್‌ ಕಟ್‌ಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಪದವಿ ಪೂರ್ಣ' ಚಿತ್ರಕ್ಕೆ ಯೋಗರಾಜ್‌ ಭಟ್ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಕಾಲೇಜು ಯುವಕರ ಮನಸ್ಥಿತಿ ಇಟ್ಟುಕೊಂಡು ಮಾಡಿರುವ ಕಥೆ ಇದಾಗಿದ್ದು ಮಾಡೆಲ್ ಪೃಥ್ವಿ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ. ಚಿತ್ರದ ಮಾತುಕಥೆ ನಡೆಯುತ್ತಿದ್ದು 2020 ರಲ್ಲಿ ಮುಹೂರ್ತ ಶುರುವಾಗಲಿದೆ ಎಂದು ಹೇಳಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?