
ಸ್ಯಾಂಡಲ್‌ವುಡ್ ಬಹು ಬೇಡಿಕೆಯ ನಟ ಧಂನಂಜಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಟ್ಟಿಟರ್‌ನಲ್ಲಿ ಅಭಿಮಾನಿಗಳ ಕೆಮಂಟ್ ಹಾಗೂ ಪೋಸ್ಟ್‌ಗಳನ್ನು ಮಿಸ್ ಮಾಡದೇ ನೋಡುತ್ತಾರೆ. ಇಲ್ಲೊಬ್ಬ ನೆಟ್ಟಿಗ ಮಾಡಿರುವ ಟ್ಟೀಟ್‌ಗೆ ಧನಂಜಯ ಸ್ಪಷ್ಟನೆ ನೀಡಿದ್ದಾರೆ.
ಬಡವ ರಾಸ್ಕಲ್ ಚಿತ್ರದಲ್ಲಿ ಮಠ ಗುರುಪ್ರಸಾದ್, ವಿಜಯ್‌ಪ್ರಸಾದ್; ಸಿನಿಮಾ ಕಾರ್ಮಿಕರಿಗೆ ಉಡುಗೊರೆ ನೀಡಿದ ಡಾಲಿ!
ನೆಚ್ಚಿನ ನಟನ ಜೊತೆ ಅಭಿನಯಿಸಬೇಕೆಂಬುದು ಎಲ್ಲರ ಆಸೆ. ಎಲ್ಲೇ ಎಷ್ಟೇ ದೂರ ಆಡಿಷನ್ ನಡೆದರೂ ತಪ್ಪದೇ ಭಾಗಿಯಾಗುತ್ತಾರೆ. ಆದರೆ ಕೆಲವು ಕಿಡಿಗೆಡಿಗಳು ದಾರಿ ತಪ್ಪಿಸಲು ಮಾಡುವಂತ ಈ ಕೆಲಸಗಳಿಂದ ಕೆಲವು ನಟರಿಗೆ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಜೋಪಾನವಾಗಿರಿ, ಎಂದು ನಟ ಧನಂಜಯ್ ಟ್ಟೀಟ್ ಮಾಡಿದ್ದಾರೆ.
'ಧನಂಜಯ್ ಮುಂದಿನ ಚಿತ್ರಕ್ಕೆ ಹೊಸ ಕಲಾವಿದ ಆಯ್ಕೆ ಮಾಡಲಾಗುತ್ತಿದೆ. ಯುವಕರು ಹಾಗೂ ಮಕ್ಕಳು ಸಪೋರ್ಟಿಂಗ್ ಪಾತ್ರಕ್ಕೆ ಆಡಿಷನ್ ನೀಡಬೇಕು. ಆಸಕ್ತಿ ಇರುವವರು ದಯವಿಟ್ಟು ನನಗೆ ಮೆಸೇಜ್ ಮಾಡಿ,' ಎಂದು ವ್ಯಕ್ತಿಯೊಬ್ಬ ಬರೆದಿದ್ದಾರೆ. ಇದಕ್ಕೆ ದನಂಜಯ್ ಉತ್ತರಿಸಿದ್ದಾರೆ. 'ಈ ತರಹ ಪೋಸ್ಟ್‌ಗಳನ್ನು ನಂಬಿ ಮೋಸ ಹೋಗಬೇಡಿ. ಈ ತರಹ ಎರಡು ಮೂರು ಘಟನೆಗಳು ನನ್ನ ಗಮನಕ್ಕೆ ಬಂದಿವೆ. ಹುಷಾರಾಗಿರಿ. ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ವಿಚಾರವನ್ನು ನಂಬುವ ಮುನ್ನ ವಿಚಾರಿಸಿ ಸತ್ಯ ತಿಳಿದುಕೊಳ್ಳಿ,' ಎಂದು ಎಚ್ಚರಿಸಿದ್ದಾರೆ.
ಡಾಲಿ ಧನಂಜಯ್ ಗರ್ಲ್ ಫ್ರೆಂಡ್ ಕತೆ ಗೊತ್ತಾ!
ಧನಂಜಯ್ ಸಿನಿಮಾಗಳು:
ಪುನೀತ್ ರಾಜ್‌ಕುಮಾರ್ ಜೊತೆ 'ಯುವರತ್ನ' ಚಿತ್ರದಲ್ಲಿ ಅಭಿನಯಿಸಿರುವ ಧನಂಜಯ್ ರಿಲೀಸ್‌ಗೆ ಕಾಯುತ್ತಿದ್ದಾರೆ. ಇದಾದ ನಂತರ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ 'ಪುಷ್ಪ' ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ರೆಟ್ರೋ ಲುಕ್‌ನಲ್ಲಿ 'ರತ್ನನ್ ಪ್ರಪಂಚ' ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಇನ್ನು 'ಬಡವ ರಾಸ್ಕಲ್' ಕೂಡ ಧನಂಜಯ್ ಅವರ ಲಿಸ್ಟಿನಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.