ಡಿ.25ಕ್ಕೆ 'ಶಕೀಲಾ' ಸಿನಿಮಾ;ಟ್ರೇಲರ್‌ ಬಿಡುಗಡೆ ಮಾಡಿದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌

Kannadaprabha News   | Asianet News
Published : Dec 07, 2020, 09:13 AM ISTUpdated : Dec 07, 2020, 09:42 AM IST
ಡಿ.25ಕ್ಕೆ 'ಶಕೀಲಾ' ಸಿನಿಮಾ;ಟ್ರೇಲರ್‌ ಬಿಡುಗಡೆ ಮಾಡಿದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌

ಸಾರಾಂಶ

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಶಕೀಲಾ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ಚಿತ್ರವನ್ನು ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ. 

ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ‘ಶಕೀಲಾ’ ಸಿನಿಮಾ ತೆರೆಗೆ ಬರಲಿದೆ. ಇಲ್ಲಿ ಶಕೀಲಾ ಪಾತ್ರದಲ್ಲಿ ಬಾಲಿವುಡ್‌ ನಟಿ ರಿಚಾ ಚಡ್ಡಾ ನಟಿಸಿದ್ದಾರೆ. ವಿತರಕರು, ನಿರ್ಮಾಪಕರು ಹಾಗೂ ಚಿತ್ರಮಂದಿರಗಳ ಪಾಲಿನ ಬಾಕ್ಸ್‌ ಅಫೀಸ್‌ ಕ್ವೀನ್‌ ಎನಿಸಿಕೊಂಡ ನಟಿಯ ಬಗ್ಗೆ ಮೂಡಿ ಬಂದಿರುವ ಟ್ರೇಲರ್‌ಗೆ ನೋಡುಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

"

ಶಕೀಲಾ ಅವರ ಕುರಿತು ಪ್ರತ್ಯೇಕವಾಗಿ ಹೇಳಬೇಕಿಲ್ಲ. 90ರ ದಶಕದ ಹಾಟ್‌ ನಟಿ. ನೀಲಿ ಚಿತ್ರಗಳ ತಾರೆ ಎಂದೇ ಗುರುತಿಸಿಕೊಂಡಿದ್ದ ಶಕೀಲಾ ಅವರ ಜೀವನ ಪುಟಗಳನ್ನು ಆಧರಿಸಿ ಇಂದ್ರಜಿತ್‌ ಲಂಕೇಶ್‌ ಶಕೀಲಾ ಹೆಸರಿನಲ್ಲೇ ಸಿನಿಮಾ ಮಾಡಿದ್ದಾರೆ. ಆ ಕಾಲದ ಈ ನೀಲಿ ತಾರೆಯ ಬದುಕು, ನಟನಾ ಜಗತ್ತು ಹೇಗಿತ್ತು ಎಂಬುದನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ. ಹಿಂದಿಯ ಪಂಕಜ್‌ ತ್ರಿಪಾಠಿ ಹಾಗೂ ಮಲಯಾಳಂನ ರಾಜೀವ ಪಿಳ್ಲೈ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶಕೀಲಾ ಎಂಬ ಹೆಸರು ತಂದಿಟ್ಟ ಫಜೀತಿ! 

ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ಶಕೀಲಾ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು, ಡಿಸೆಂಬರ್‌ 25ಕ್ಕೆ ಎಲ್ಲ ಕುತೂಹಲಗಳಿಗೆ ಉತ್ತರ ದೊರೆಯಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್