
ಕನ್ನಡದ ಸ್ಟಾರ್ ನಟ ದರ್ಶನ್ ಬರ್ತ್‌ಡೇಗೆ ಡೆವಿಲ್ ಚಿತ್ರತಂಡ 'ಸರ್‌ಪ್ರೈಸ್' ರೆಡಿ ಮಾಡಿದೆ ಎನ್ನಲಾಗಿದೆ. ಕಳೆದ ವರ್ಷ, ಅಂದರೆ 2024ರಲ್ಲಿ ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ 'ಡೆವಿಲ್' ಚಿತ್ರ ಶೂಟಿಂಗ್ ಶುರು ಮಾಡಿಕೊಂಡಿತ್ತು. ಆದರೆ, ನಟ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿಕೊಂಡ ಬಳಿಕ ಡೆವಿಲ್ ಶೂಟಿಂಗ್ ಸಹಜವಾಗಿ ನಿಂತಿದೆ. ಆದರೆ, ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿರುವ ನಟ ದರ್ಶನ್, ಆ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.
ಸದ್ಯ ನಟ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಡೆವಿಲ್ ಶೂಟಿಂಗ್ ಮತ್ತೆ ಶುರುವಾಗಿಲ್ಲ. ಆದರೆ, ಈಗಾಗಲೇ ಆಗಿರುವ ಶೂಟಿಂಗ್ ಬಳಸಿ ನಟ ದರ್ಶನ್ ಹುಟ್ಟುಹಬ್ಬಕ್ಕೆ 'ಡೆವಿಲ್' ಟೀಸರ್ ರೆಡಿ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸುಳಿವು ದೊರಕಿದೆ. ಫೆಬ್ರವರಿ 16ರಂದು ನಟ ದರ್ಶನ್ ಹುಟ್ಟುಹಬ್ಬ. ಅಂದೇ ಡೆವಿಲ್ ಟೀಸರ್ ಲಾಂಚ್‌ಗೆ ಪ್ಲಾನ್ ನಡೆದಿದೆ ಎನ್ನಲಾಗಿದೆ.
ರಕ್ಷಿತಾ ಪ್ರೇಮ್ ಪೋಸ್ಟ್ ವೈರಲ್... ನನ್ನ ತಮ್ಮನ ಮದುವೆಗೆ ದರ್ಶನ್ ಬರ್ತಾನೆ..!
ಸದ್ಯ ನಟ ದರ್ಶನ್ ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಬೇರೆ ಯಾವುದೇ ಸಿನಿಮಾ ಶೂಟಿಂಗ್ ಮಾಡುತ್ತಿಲ್ಲ. ಡೆವಿಲ್ ಚಿತ್ರೀಕರಣ ಕೂಡ ಮುಂದುವರಿಯುತ್ತಿಲ್ಲ. ಕೊಲೆ ಆರೋಪಕ್ಕಿಂತ ಮೊದಲು ಒಪ್ಪಿಕೊಂಡಿದ್ದ ಸೂರಪ್ಪ ಬಾಬು ಸಿನಿಮಾದ ಅಡ್ವಾನ್ಸ್ ಹಣವನ್ನು ಕೂಡ ನಟ ದರ್ಶನ್ ವಾಪಸ್ ಮಾಡಿದ್ದಾರೆ. ಆದರೆ, ತಮ್ಮ ಪ್ರಾಣ ಸ್ನೇಹಿತೆ ರಕ್ಷಿತಾ ಪತಿ, ಕನ್ನಡದ ಖ್ಯಾತ ನಿರ್ದೇಶಕ ಪ್ರೇಮ್‌ರ ನಿರ್ದೇಶನದ ಚಿತ್ರವೊಂದನ್ನು ನಟ ದರ್ಶನ್ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ನಟ ದರ್ಶನ್ 'ನನ್ನ ಪ್ರಾಣ ಸ್ನೇಹಿತೆ ರಕ್ಷಿತಾ ಸಲುವಾಗಿ ನಾನು ಪ್ರೇಮ್ ನಿರ್ದೇಶನದ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಅದು ಬಿಟ್ಟರೆ ಡೆವಿಲ್ ಶೂಟಿಂಗ್ ಮುಂದುವರೆಯಲಿದೆ. ಸೂರಪ್ಪ ಬಾಬು ಚಿತ್ರಕ್ಕೆ ತೆಗೆದುಕೊಂಡಿದ್ದ ಮುಂಗಡ ಹಣ ವಾಪಸ್ ಮಾಡಿದ್ದೇನೆ. ಬೇರೆ ಯಾವುದೇ ಸಿನಿಮಾ ಸದ್ಯಕ್ಕೆ ಒಪ್ಪಿಕೊಳ್ಳುವ ಮನಸ್ಸಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಬೆನ್ನುನೋವಿಗೆ ನನಗೆ ಸರ್ಜರಿ ಆಗಬೇಕಿರುವುದು ಗ್ಯಾರಂಟಿ. ಅದಾದ ಬಳಿಕ, ನಾನು ಮುಂದಿನ ಸಿನಿಮಾ ಪ್ಲಾನ್ ಮಾಡಲಿದ್ದೇನೆ' ಎಂದಿದ್ದಾರೆ.
ಹಂಸಲೇಖಾ ಮನೆಯಲ್ಲಿ ಯಾರ ಫೋಟೋ ಇದೆ? ಅವ್ರ ಲೈಫಲ್ಲಿ ಮುಖ್ಯವಾದ ಮೂರು 'ರತ್ನ'ಗಳು ಇವ್ರಂತೆ!
ಅಷ್ಟೇ ಅಲ್ಲ, 'ನಾನು ನನ್ನ ಜೀವ ಇರೋವರೆಗೂ ಕನ್ನಡ ಸಿನಿಮಾವನ್ನು ಮಾತ್ರ ಮಾಡುತ್ತೇನೆ. ನನ್ನ ಕನ್ನಡ ಸಿನಿಮಾಗಳು ಬೇರೆ ಭಾಷೆಗಳಿಗೆ ಡಬ್ ಆಗಬಹುದು. ಆದರೆ, ನಾನು ಹೋಗಿ ಬೇರೆ ಭಾಷೆಗಳಲ್ಲಿ ನಟಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಈ ಬಾರಿ ತಾವು ತಮ್ಮ ಹುಟ್ಟುಹಬ್ಬ (February 16 ) ಆಚರಿಸಿಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ನಟ ದರ್ಶನ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಕೇಸ್ ತನಿಖೆ ಕೂಡ ನಡೆಯುತ್ತಿದೆ. ಮುಂದಿನದನ್ನು ಕಾಲವೇ ನಿರ್ಧರಿಸಬೇಕಷ್ಟೇ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.