Latest Videos

ಮರ್ಡರ್‌ ಕೇಸಲ್ಲಿ ಅರೆಸ್ಟ್‌: ದರ್ಶನ್‌ಗೆ ಬಿಟ್ಟೂ ಬಿಡದೆ ಬೆನ್ನು ಹತ್ತಿದೆಯಾ 'ಡೆವಿಲ್' ಚಿತ್ರ?

By Girish GoudarFirst Published Jun 16, 2024, 9:14 AM IST
Highlights

ಚಿತ್ರದ ಟೈಟಲ್ ಚೇಂಜ್ ಮಾಡೋಕೆ ಚಿತ್ರತಂಡ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಟೈಟಲ್ ಚೇಂಜ್ ಮಾಡುವ ಚಿತ್ರದ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಬಂದ ಮೇಲಷ್ಟೇ ಅಂತೆ ಕಂತೆಗಳಿಗೆ ಸ್ಪಷ್ಟಣೆ ಸಿಗಲಿದೆ. 

ಬೆಂಗಳೂರು(ಜೂ.16):  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಬಂಧನವಾಗಿದ್ದಾರೆ. ಹೀಗಾಗಿ ಅವರ ಮುಂದಿನ ಚಿತ್ರಗಳು ನಿಂತೋಗುತ್ತಾ ಎಂಬ ಪ್ರಶ್ನೆಗಳು ಇದೀಗ ಉದ್ಭವಾಗುತ್ತಿವೆ. ಹೌದು, ದರ್ಶನ್ ನಟನೆಯ ಡೆವಿಲ್ ಸಿನಿಮಾದ ಶೂಟಿಂಗ್ ನಿಲ್ಲಿಸಲು ಚಿಂತನೆ ನಡೆಸಿದೆಯಂತೆ ಎಂದು ಹೇಳಲಾಗುತ್ತಿದೆ. 

ಈ ಮೂಲಕ ನಟ ದರ್ಶನ್ ಗೆ "ಡೆವಿಲ್" ತಂಡದಿಂದ ಸಂಕಷ್ಟ ಎದುರಾಗಿದೆ. ಡೆವಿಲ್ ಶುರುವಾದ ಮೇಲೆ ಕಾಂಟ್ರವರ್ಸಿಲ್ಲೇ ಇದೆ. "ಡೆವಿಲ್" ಮೊದಲ ಶೆಡ್ಯೂಲ್ ವೇಳೆ ಕೈ ಪೆಟ್ಟು ಮಾಡಿಕೊಂಡು ದರ್ಶನ್ ಆಪರೇಷನ್‌ಗೆ ಒಳಗಾಗಿದ್ದರು. ಎರಡನೇ ಶೆಡ್ಯೂಲ್ ಶುರುವಾದಾಗ ದರ್ಶನ್ ನಾಯಿಯಿಂದ ಸ್ಟೇಷನ್ ಮೆಟ್ಟಿಲು ಹತ್ತಿದ್ದರು. ಜೆಟ್ ಲ್ಯಾಗ್ ಪಬ್‌ನಲ್ಲಿ  ಬೆಳಗಿನ ಜಾವದ ತನಕ ಪಾರ್ಟಿ ಕೇಸ್‌ನಲ್ಲೂ ದರ್ಶನ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. 

ದರ್ಶನ್ ಚಿತ್ರರಂಗದಿಂದ ಬ್ಯಾನ್ ವಿಚಾರ ನಮ್ ಕೈಲಿಲ್ಲ: ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್

ಇನ್ನು ಮೂರನೇ ಶೆಡ್ಯೂಲ್ ಶುರುವಾದ ಎರಡೇ ದಿನಕ್ಕೆ ಕೊಲೆ ಕೇಸ್‌ನಲ್ಲಿ ಬಂಧನವಾಗಿದ್ದಾರೆ. ಒಟ್ಟಾರೆ ನಟ ದರ್ಶನ್‌ಗೆ ಬಿಟ್ಟೂ ಬಿಡದೆ ಬೆನ್ನು ಹತ್ತಿದೆ 'ಡೆವಿಲ್'. "ಡೆವಿಲ್" ಚಿತ್ರ ನೆಗೆಟಿವ್ ಟೈಟಲ್ ಆಗಿದ್ದು ಈ ಎಲ್ಲಾ ಘಟನೆಗಳ ನಂತರ ಚಿತ್ರತಂಡಕ್ಕೆ ಟೈಟಲ್ ತಲೆನೋವಾಗಿಗೆ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. 

ಹೀಗಾಗಿ ಚಿತ್ರದ ಟೈಟಲ್ ಚೇಂಜ್ ಮಾಡೋಕೆ ಚಿತ್ರತಂಡ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಟೈಟಲ್ ಚೇಂಜ್ ಮಾಡುವ ಚಿತ್ರದ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಬಂದ ಮೇಲಷ್ಟೇ ಅಂತೆ ಕಂತೆಗಳಿಗೆ ಸ್ಪಷ್ಟಣೆ ಸಿಗಲಿದೆ.  ಸದ್ಯ ಕೊಲೆ ಕೇಸ್‌ನಲ್ಲಿ ದರ್ಶನ್ ಪೋಲೀಸ್ ಕಸ್ಟಡಿಯಲ್ಲಿರುವ ಕಾರಣ ಡೆವಿಲ್‌ ಚಿತ್ರದ ಶೂಟಿಂಗ್ ಸ್ಥಗಿತವಾಗಿದೆ. 

click me!