Latest Videos

ನಾನು ಕರೆಕ್ಟ್‌ ಆಗಿದ್ದೆ, ನೀವು ಗೌರವ ಕೊಟ್ರೆ ನಾನು ಗೌರವ ಕೊಡ್ತೀನಿ; ಕಾಂಟ್ರವರ್ಸಿಗೆ ಉತ್ತರ ಕೊಟ್ಟ ಅನಿರುದ್ಧ್

By Vaishnavi ChandrashekarFirst Published Jun 15, 2024, 5:29 PM IST
Highlights

ಧಾರಾವಾಹಿ ಒಪ್ಪಿದ್ದೇ ನನ್ನ ಮಗಳು ಮಾಡು ಎಂದು ಹೇಳಿದ್ದಕ್ಕೆ ಎಂದ ಅನಿರುದ್ಧ ಮತ್ತೊಮ್ಮೆ ಕಾಂಟ್ರವರ್ಸಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

ಕನ್ನಡ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿ ಮಾಡಿದ ಧಾರಾವಾಹಿ ಜೊತೆ ಜೊತೆಯಲಿ. ನಟ ಅನಿರುದ್ಧ ಆರ್ಯವರ್ಧನ್ ಪಾತ್ರದಲ್ಲಿ, ನಟಿ ಮೇಘಾ ಶೆಟ್ಟಿ ಅನು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೂಪರ್ ಹಿಟ್‌ ಧಾರಾವಾಹಿ ಮುಗಿಯಲು ಕೇವಲ ಎರಡು ತಿಂಗಳು ಇದ್ದಾಗ ಕಾಂಟ್ರವರ್ಸಿಗಳಿಂದ ಅನಿರುದ್ಧ ಹೊರ ಬರುತ್ತಾರೆ. ತಮ್ಮ ಮುಂದಿನ ಸಿನಿಮಾ ಚೆಫ್‌ ಚಿದಂಬರ ಪ್ರಚಾರದಲ್ಲಿ ಮತ್ತೆ ಕಾಂಟ್ರವರ್ಸಿಗಳ ಬಗ್ಗೆ ಮಾತನಾಡಿದ್ದಾರೆ. 

'ಜೊತೆ ಜೊತೆಯಲಿ ಧಾರಾವಾಹಿಗೂ ಮುನ್ನ ಸಾಕಷ್ಟು ಧಾರಾವಾಹಿಗಳನ್ನು ರಿಜೆಕ್ಟ್‌ ಮಾಡಿದ್ದೆ. ನೀವು ಮಾಡಲ್ಲ ಅಂದ್ರೆ ಚಾನೆಲ್‌ ಅವರು ಧಾರಾವಾಹಿನೇ ಬೇಡ ಎನ್ನುತ್ತಿದ್ದಾರೆ ಅಂದ್ರು ಸರಿ ಮನೆಯಲ್ಲಿ ಮಾತನಾಡಿದೆ. ಇದೇ ಮರಾಠಿ ಸೀರಿಯಲ್‌ನ ಮನೆಯಲ್ಲಿ ನೋಡುತ್ತಿದ್ದ ನಾನು ಕೂಡ ಆಗಾಗ ನೋಡುತ್ತಿದ್ದ, ನಾಯಕ ನಟ ಕೊನೆಯಲ್ಲಿ ವಿಲನ್ ಆಗುತ್ತಿದ್ದ ಹೀಗಾಗಿ ಅವಕಾಶವನ್ನು ಒಪ್ಪಿಕೊಂಡೆ. ಚೆನ್ನಾಗಿದೆ ಮಾಡಿ ಎಂದು ಮಗಳು ಹೇಳಿದ್ದಳು' ಎಂದು ನಟ ಅನಿರುದ್ಧ ಖಾಸಗಿ ಯೂಟ್ಯೂಬ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ರೇಣುಕಾಸ್ವಾಮಿ ಪ್ರಕರಣದ ಅರೋಪಿಗಳಿಗೆ ಜೀವಾವಧಿ ಶಿಕ್ಷೆಯಿಂದ ಮರಣದಂಡನೆವರೆಗೂ ಶಿಕ್ಷೆ ಇರುತ್ತದೆ: ಬಿ.ಕೆ ಶಿವರಾಂ

ಕಲಾಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳು ಬರುತ್ತದೆ. ದುರಹಂಕಾರ ಬಂದ್ರೆ ಕಷ್ಟವಾಗುತ್ತದೆ ನಮ್ಮೆಲ್ಲರಿಗಿಂತ ದೊಡ್ಡ ಪ್ರಾಜೆಕ್ಟ್‌ ಆಗಿರುತ್ತದೆ. ಏನೇ ಆದರೂ ಪ್ರಾಜೆಕ್ಟ್‌ ಇದ್ದಿದ್ದು ಎರಡು ತಿಂಗಳು ಮಾತ್ರ ನಾನು ಮುಗಿಸಲು ರೆಡಿಯಾಗಿದ್ದೆ. ಯಾರ ಹೊಟ್ಟೆ ಮೇಲೆ ಹೊಡೆಯಲು ನನಗೆ ಇಷ್ಟವಿರಲಿಲ್ಲ ಇದುವರೆಗೂ ಅವರ ಪ್ರೆಸ್‌ಮೀಟ್‌ ನೋಡಿಲ್ಲ ಮೀಡಿಯಾದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿರುವೆ. ಕ್ಲೈಮ್ಯಾಕ್ಸ್‌ ಶೂಟಿಂಗ್‌ ಕೂಡ ಮುಗಿಯುತ್ತಿತ್ತು...ಅಂತದ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ ಅನಿಸಿತ್ತು. ಹಲವು ಸಲ ನಾನು ಚರ್ಚೆ ಮಾಡಿದಾಗ ಅವರಿಗೆ ಯಶಸ್ಸಿನ ಬೆಲೆ ಗೊತ್ತೇ ಇಲ್ಲ...ಜನ ನೋಡುತ್ತಾರೋ ಬಿಡುತ್ತಾರೋ ನಾವು ಸರಿಯಾಗಿ ಇರಬೇಕು ಎಂದು ನಟ ಅನಿರುದ್ಧ ಹೇಳಿದ್ದಾರೆ. 

ನಿನಗಾಗಿ ಕಾಯುತ್ತಿರುವೆ; ಬೇಬಿ ಬಂಪ್‌ ಜೊತೆ ರೊಮ್ಯಾಂಟಿಕ್‌ ಪೋಸ್‌ ಕೊಟ್ಟ ಮಿಲನಾ-ಕೃಷ್ಣ!

ಜೊತೆ ಜೊತೆಯಲಿ ಧಾರಾವಾಹಿಯ ಪ್ರತಿಯೊಂದು ಪಾತ್ರ ಜನರ ತಲೆಯಲ್ಲಿ ಕುಳಿತಿತ್ತು. ಪ್ರತಿಯೊಬ್ಬರಿಗೂ ಒಳ್ಳೆ ಪ್ರಭಾವಳಿ ಆಗಿದೆ. ನನ್ನ ಜೊತೆಗಿದ್ದ ಜನರೇ ನನ್ನನ್ನು ನಾಷ ಮಾಡಿಬಿಟ್ಟರು. ಸ್ಕ್ರಿಪ್ಟ್‌ ವಿಚಾರದಲ್ಲಿ ನಾನು ತುಂಬಾನೇ ಪರ್ಟಿಕ್ಯೂಲರ್ ಆಗಿದ್ದೆ ಚೆನ್ನಾಗಿದ್ಯಾ ಕರೆಕ್ಟ್‌ ಆಗಿದ್ಯಾ ಲಾಜಿಕ್‌ ಇದ್ಯಾ ಮ್ಯಾಚ್ ಆಗುತ್ತ ಅಂತ ಯೋಚನೆ ಮಾಡಿ ಶೂಟ್ ಮಾಡುತ್ತಿದ್ದೆ. ನಾನು ಬೇಕಾಬಿಟ್ಟು ಕೂತ್ಕೊಂಡು ಮಾಡೋದು ಅದೆಲ್ಲಾ ಆಗಲ್ಲ. ನಾನು ತಡ ಮಾಡುತ್ತಿದ್ದರೆ ಕರೆ ಮಾಡಿ ಹೇಳುತ್ತಿದ್ದೆ ಟೈಮ್ ವಿಚಾರದಲ್ಲಿ ನಾನು ತುಂಬಾ ಕರೆಕ್ಟ್‌ ಆಗಿದ್ದೆ. ನಾನು ನಿಮ್ಮನ್ನು ಗೌರವಿಸುತ್ತಿದ್ದೀನಿ ಅಂದ್ರೆ ನೀವು ನನ್ನನ್ನು ಗೌರವಿಸಬೇಕು ಎಂದಿದ್ದಾರೆ ಅನಿರುದ್ಧ

click me!