Latest Videos

ದರ್ಶನ್‌ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಕೇಳಿದ್ದಕ್ಕೆ ಮುಖಕ್ಕೆ ಡಿಚ್ಚಿ, ಮೈಮೇಲೆ ಬಾಸುಂಡೆ ಕೊಟ್ಟರು!

By Sathish Kumar KHFirst Published Jun 15, 2024, 7:57 PM IST
Highlights

ನಟ ದರ್ಶನ್‌ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಕೊಡುವಂತೆ ಕೇಳಿದ್ದಕ್ಕೆ ಮುಖಕ್ಕೊಂದು ಡಿಚ್ಚಿ, ಅಭಿಮಾನಿಗಳ ಮೈಮೇಲೆ ಬಾಸುಂಡೆ ಗಿಫ್ಟ್ ಕೊಟ್ಟಿದ್ದರು.

ಹಾವೇರಿ (ಜೂ.15): ಹಾವೇರಿದ ಸಿನಿಮಾ ಮಂದಿರದ ಮಾಲೀಕ ನಟ ದರ್ಶನ್ ಅಭಿನಯದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಪ್ರದರ್ಶನ ಮಾಡಲು ಪ್ರಿಂಟ್ ಕೇಳಿದ್ದಕ್ಕೆ, ಸಿನಿಮಾ ಪ್ರೊಡೂಸರ್‌ಗೆ ಥಿಯೇಟರ್ ಬರೆದುಕೊಟ್ಟು, ಮುಖಕ್ಕೆ ಡಿಚ್ಚಿಯನ್ನೂ ಹೊಡೆಸಿಕೊಂಡು ಬಂದಿರುವ ಘಟನೆ ನಡೆದಿದೆ. ಸ್ವತಃ ದರ್ಶನ್ ಹಾಗೂ ಆತನ ಬೆಂಬಲಿಗರು ಮಾಡುವ ಹಲ್ಲೆಗೆ ಅಭಿಮಾನಿಗಳು ತತ್ತರಿಸಿ ಹೋಗಿದ್ದಾರೆ ಎಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಸಿನಿಮಾ ಮಂದಿರ ಮಾಲೀಕ ನಾಗನಗೌಡ ಹೇಳಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ರಟ್ಟಹಳ್ಳಿ ಪಟ್ಟಣದ ಸಿನಿಮಾ ಮಂದಿರದ ಮಾಲೀಕ ನಾಗನಗೌಡ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾಗಾಗಿ ದರ್ಶನ್ ಮನೆ ಬಾಗಿಲಿಗೆ ಅಲೆದಾಡಿದ್ದೆನು. ನಮ್ಮೂರಿನ ಜನತೆಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ತೋರಿಸಲೇ ಬೇಕು ಎಂದು 15 ದಿ ಗಾಂಧಿ ನಗರದಲ್ಲಿಯೇ ಉಳಿದುಕೊಂಡಿದ್ದೆ. ಆಗ ನಿನ್ನ ಸಿನಿಮಾ ಥಿಯೇಟರ್ ಸಿ ದರ್ಜೆಯದ್ದಾಗಿದ್ದು 50 ದಿನ ಆದ ನಂತರ ಚಿತ್ರವನ್ನು ಕೊಡುವುದಾಗಿ ಹೇಳಿದ್ದರು. ಆದರೂ, ಪಟ್ಟು ಬಿಡದೇ ಸಿನಿಮಾ ಬೇಕೇ ಬೇಕು ಎಂದು ಹಠವಿಡಿದು ಸಿನಿಮಾ ಕೊಡುವಂತೆ ಕೇಳಿದ್ದರು.

ನಟ ದರ್ಶನ್ ಅಂಡ್ ಗ್ಯಾಂಗ್‌ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ

ಗಾಂಧಿನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಬೇಕೆಂದು ಕುಳಿತಾಗ ಪ್ರೊಡ್ಯೂಸರ್ ಬಂದು ಸಿನಿಮಾ ಕೊಡುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು. ಆಗ, ನಾನು ಸಿನಿಮಾ ಜನರಿಗೆ ತೋರಿಸಬೇಕು ಅಂತಾ ಮಾಡಿದ್ದಾಗ ನನಗೇಕೆ ಕೊಡಲ್ಲ ಎಂದು ಜೋರಾಗಿ ಪ್ರಶ್ನಜೆ ಮಾಡಿದ್ದಕ್ಕೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಬಂದು ನನ್ನ ಮೂಗಿಗೆ ಜೋರಾಗಿ ಗುದ್ದಿ ಹಲ್ಲೆ ಮಾಡಿದರು. ಆದರೂ, ನನ್ನ ಹಠ ಬಿಡದೇ ಸಿನಿಮಾ ಕೊಡುವಂತೆ ಅಲ್ಲಿಯೇ ಗಾಂಧಿ ನಗರದಲ್ಲಿಯೇ ಉಳಿದುಕೊಂಡೆ. 

ನಂತರ ಸಿನಿಮಾ ಕೊಡಬೇಕೆಂದರೆ 30 ಲಕ್ಷ ರೂ. ಕೊಡು, 50 ಲಕ್ಷ ರೂ. ಅಡ್ವಾನ್ಸ್ ಕೊಡು ಎಂದು ಕೇಳಿದರು. ಆದರೆ ನನ್ನ ಬಳಿ ಹಣವಿಲ್ಲವೆಂದು ಹೇಳಿದೆ. ಆಗ ಪುನಃ ನನ್ನನ್ನು ಬೈದು ಹೊರಗೆ ಕಳಿಸಿದರು. ಆಗಲೂ ಪುನಃ ಸಿನಿಮಾ ಕೇಳಿದಾಗ ನಿನ್ನ ಥಿಯೇಟರ್ ಎಷ್ಟು ಬೆಲೆ ಬಾಳುತ್ತದೆ ಎಂದು ಕೇಳಿದರು. ಆಗ ನಾನು ಒಂದೆರಡು ಕೋಟಿ ಎಂದು ಹೇಳಿದೆ. ಹಾಗಾದರೆ, ನಿನ್ನ ಥಿಯೇಟರ್ ಅಡವಿಟ್ಟು ರೀಲ್ ತೆಗೆದುಕೊಂದು ಹೋಗಲು ಹೇಳಿದರು. ಇದಕ್ಕೊಪ್ಪಿ ನಾನು ಥಿಯೇಟರ್ ಅನ್ನು ಅವರಿಗೆ ಅಡವಿಡಲು ಕಾಗದ ಪತ್ರದಲ್ಲಿ ಬರೆದುಕೊಟ್ಟಿದ್ದೆನು. ಆದರೂ, ಚೆನ್ನೈನಿಂದ ಪ್ರಿಂಟ್ ಬರಬೇಕು. ಪ್ರಿಂಟ್ ಮಾಡಿಸಲು 2 ಲಕ್ಷ ರೂ. ಕೊಡು ಎಂದು ಕೇಳಿದರು. ಆಗ ಬೇರೆಯವರಿಂದ ಸಾಲ ಮಾಡಿ 2 ಲಕ್ಷ ರೂ. ಕೊಟ್ಟು ಬಂದಿದ್ದೆನು.

ಇನ್ನು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ರಿಲೀಸ್ ಆಗಿ 1 ವಾರದ ಬಳಿಕ ನನಗೆ ಪ್ರಿಂಟ್ ಕೊಟ್ಟರು. ಆಗ ನಾನು ಅವರಿಗೆ 9 ಲಕ್ಷ ರೂ. ಗಿಂತ ಅಧಿಕ ಶೆರ್ ಪ್ರೊಡೂಸರ್ಸ್‌ಗೆ ಕೊಟ್ಟಿದ್ದೇನೆ. ಆನಂತರ ಸಿನಿಮಾ ಮಂದಿರ ಅಡವಿಟ್ಟ ಕಾಗದ ಪತ್ರಗಳನ್ನು ವಾಪಸ್ ಪಡೆದಿದ್ದೆನು. ನನ್ನ ಥಿಯೇಟರ್‌ನಲ್ಲಿ 50 ದಿನ ಸಿನಿಮಾ ಓಡಿದ ನಂತರ ಸ್ವತಃ ದರ್ಶನ್ ರಟ್ಟಹಳ್ಳಿಗೆ ಹೋಗುವುದಾಗಿ ಪೇಪರ್ ಅನೌನ್ಸ್‌ಮೆಂಟ್ ಕೊಟ್ಟರು. ಆದರೆಮ 50ನೇ ದಿನದ ಸಂಭ್ರಮಕ್ಕೆ ದರ್ಶನ್ ಬರುತ್ತಾರೆಂದು ಮಧ್ಯಾಹ್ನ 12 ಗಂಟೆಯಿಂದ ಕಾದರೂ ಬರಲೇ ಇಲ್ಲ. ನಂತರ ಮಧ್ಯರಾತ್ರಿ 12 ಗಂಟೆ ವೇಳೆಗೆ ಊರಿಗೆ ಬಂದರು. ಆಗ ಅಭಿಮಾನಿಗಳೊಂದಿಗೆ ಮಾತನಾಡಿ ತೆರಳಿದರು.

ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಸಾಯಿಸಿದ್ದಾರೆ; ಕೋರ್ಟ್‌ಗೆ ಸರ್ಕಾರಿ ವಕೀಲರಿಂದ ಮಾಹಿತಿ

ದರ್ಶನ್ ಬೌನ್ಸರ್ಸ್‌ಗಳಿಂದ ಬಾಸುಂಡೆ ಬರುವಂತೆ ಹಲ್ಲೆ:
ದರ್ಶನ್ ನಮ್ಮೂರಿನಿಂದ ಹೋಗುವಾಗ 3 ಕಿ.ಮೀ. ದೂರದಲ್ಲಿ ನಮ್ಮೂರಿನ ದರ್ಶನ್ ಅಭಿಮಾನಿಗಳು ಸಾರ್ ನಿಮ್ಮನ್ನು ಒಂದು ಬಾರಿ ಮುಟ್ಟಬೇಕು, ಆಶೀರ್ವಾದ ಪಡೆದುಕೊಳ್ಳಬೇಕು, ಫೋಟೋ ತೆಗಿಸಿಕೊಳ್ಳಬೇಕು ಎಂದು ಕೇಳಿದ್ದರು. ಆಗ ದರ್ಶನ್ ಅವರ ಬೌನ್ಸರ್ಸ್‌ಗಳು ಫೋಟೋ ಕೇಳಿದವರಿಗೆ ಹಿಗ್ಗಾಮುಗ್ಗಾ ಹೊಡೆದು ಕಳಿಸಿದ್ದರು. ಮೈಮೇಲೆಲ್ಲಾ ಬಾಸುಂಡೆಗಳೇ ಕಾಣುತ್ತಿದ್ದವು. ಮರುದಿನ ಹಲ್ಲೆಗೊಳಗಾದ ಅಭಿಮಾನಿಗಳು ರಟ್ಟಹಳ್ಳಿಯಲ್ಲಿ ಹಾಕಿದ್ದ ಪೋಸ್ಟರ್ ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ದರ್ಶನ್ ನಿರ್ದಯವಾಗಿ ನಡೆದುಕೊಳ್ಳುವುದು ಮಾತ್ರ ಸರಿಯಲ್ಲ ಎಂದು ನಾಗನಗೌಡ ಹೇಳಿದರು.

click me!