ದರ್ಶನ್ ಇಲ್ದೇ ಇರುವಾಗ ಕೆಲವೊಬ್ರು ಏನೇನೋ ಮಾತಾಡ್ತಾರೆ: ಕಿಚ್ಚ ಸುದೀಪ್‌ಗೆ ಪರೋಕ್ಷವಾಗಿ ಟಕ್ಕರ್ ಕೊಟ್ರಾ ವಿಜಯಲಕ್ಷ್ಮಿ

Published : Dec 21, 2025, 08:34 PM IST
Vijayalakshmi

ಸಾರಾಂಶ

ನಟ ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾ ಡಿ.11ರಂದು ರಿಲೀಸ್ ಆಗಿ ಬಹಳಷ್ಟು ಸದ್ದು ಮಾಡಿತ್ತು. ಇದೀಗ ದರ್ಶನ್ ಅವರ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ 'ದಿ ಡೆವಿಲ್' ಪ್ರಚಾರ ಮಾಡಿದ್ದಾರೆ.

ದಾವಣಗೆರೆ (ಡಿ.21): ನಟ ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾ ಡಿ.11ರಂದು ರಿಲೀಸ್ ಆಗಿ ಬಹಳಷ್ಟು ಸದ್ದು ಮಾಡಿತ್ತು. ಇದೀಗ ದರ್ಶನ್ ಅವರ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ 'ದಿ ಡೆವಿಲ್' ಪ್ರಚಾರ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ದಿ ಡೆವಿಲ್ ಸಿನಿಮಾ ಯಶಸ್ಸು ಮಾಡುವಂತೆ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ. ವಿಜಯಲಕ್ಷ್ಮಿ ಬರುತ್ತಿದ್ದಂತೆ ಡಿ ಬಾಸ್ ಡಿಬಾಸ್ ಎಂದು ಅಭಿಮಾನಿಗಳು ಕೂಗಿದ್ದಾರೆ.

ನಂತರ ಮಾತನಾಡಿದ ವಿಜಯಲಕ್ಷ್ಮಿ ಅವರು, ದರ್ಶನ್ ಅವ್ರು ಇಲ್ದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ. ವೇದಿಕೆ ಮೇಲೆ, ಚಾನೆಲ್‌ಗಳಲ್ಲಿ ಕುತ್ಕೊಂಡು ಮಾತಾಡ್ತಾರೆ ಎನ್ನುವ ಮೂಲಕ ಕಿಚ್ಚ ಸುದೀಪ್‌ಗೆ ಪರೋಕ್ಷವಾಗಿ ಟಕ್ಕರ್ ನೀಡಿದ್ದಾರೆ. ದರ್ಶನ್ ಬಗ್ಗೆ, ಅವರ ಫ್ಯಾನ್ಸ್ ಬಗ್ಗೆ‌ ಏನೇನೋ ಮಾತಾಡ್ತಾ ಇರ್ತಾರೆ. ದರ್ಶನ್ ಅವ್ರು ಬಂದಾಗ ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಅನ್ನೋದೆ ಗೊತ್ತಾಗೋದಿಲ್ಲ.

ಅಂತ ಜನಗಳು ದರ್ಶನ್ ಅವ್ರು ಇರುವಾಗ ಎಲ್ಲಿ ಮಾಯ ಅಗಿರ್ತಾರೋ ಗೊತ್ತಾಗೋದಿಲ್ಲ. ದರ್ಶನ್ ಹೇಳಿದಂತೆ ಯಾರು ಕೂಡ ಕೋಪ ಮಾಡ್ಕೋಬೇಡಿ, ಬೇಜಾರ್ ಮಾಡ್ಕೋಬೇಡಿ ಎಂದು ವಿಜಯಲಕ್ಷ್ಮಿ ಹೇಳಿದರು. ವಿಜಯಲಕ್ಷ್ಮಿ ಹಾಗೂ ಡೆವಿಲ್ ಚಿತ್ರ ನಟಿ ರಚನಾ ರೈ ದಾವಣಗೆರೆ ಗೀತಾಂಜಲಿ ಚಿತ್ರ ಮಂದಿರಕ್ಕೆ ಭೇಟಿ ನೀಡಿ, ಕನ್ನಡ ಚಿತ್ರರಂಗದ ಎಲ್ಲಾ ಚಿತ್ರಗಳಿಗೂ ಸಪೋರ್ಟ್ ಮಾಡಿ, ಹೆಚ್ಚಿನದಾಗಿ ನಮ್ಮ ಚಿತ್ರ ಸಪೋರ್ಟ್ ಮಾಡಿ ಎಂದು ವಿಜಯಲಕ್ಷ್ಮಿ ತಿಳಿಸಿದರು.

ಕಿಚ್ಚ ಸುದೀಪ್ ಹೇಳಿದ್ದೇನು?

ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ವಾ, ಆದರೆ ನನ್ನ ಗೆಳೆಯರು ಚೆನ್ನಾಗಿರಬೇಕು ಅಂತ ಬಾಯಿ ಮುಚ್ಚಿಕೊಂಡು ಇದ್ವಿ. ಬಾಯಿ ಇಲ್ಲಾ ಅಂತ ಅಲ್ಲಾ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಕಾರಣ ಇದೆ. ಇನ್ನು ಇಲ್ಲಿ ಮಾತನಾಡಿದರೆ ಆಯಿತು. ಯಾರಿಗೆ ಮುಟ್ಟಬೇಕೋ ಅವರಿಗೆ ಮುಟ್ಟುತ್ತದೆ. ಯಾರಿಗೆ ತಟ್ಟಬೇಕೋ ಅವರಿಗೆ ತಟ್ಟುತ್ತದೆ. ಅದಕ್ಕೇನೆ ಮಾರ್ಕ್ ಸಿನಿಮಾದ ಕಾರ್ಯಕ್ರಮವನ್ನ ಇಲ್ಲಿ ಮಾಡಿದ್ದೇವೆ ಅಂತ ಕಿಚ್ಚ ಸುದೀಪ್ ನಿನ್ನೆ (ಶನಿವಾರ) ಖಡಕ್ ಆಗಿಯೇ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ಯಧಿಕ ಹಣದ ಆಫರ್​ ಕೊಟ್ರೂ ಯುವತಿಯರ 'ಡ್ರೀಮ್​ ಬಾಯ್'​ ಮುಕೇಶ್​ ಗೌಡ Bigg Bossಗೆ ಹೋಗದ ಕಾರಣ ರಿವೀಲ್​
Actors Death in 2025: ಈ ವರ್ಷ ಇಹಲೋಕ ತ್ಯಜಿಸಿದ ಚಂದನವನದ ತಾರೆಯರು