ನೋ ಎಂದ ದಾಸ.. ಪವಿತ್ರಾ ಗೌಡಗೆ ಸಿಗದ ದರ್ಶನ: ಬೇಲ್ ಸಿಕ್ಕು ಹೊರಬಂದಾಗಲೂ ಭೇಟಿ ಇಲ್ಲ!

Published : Dec 20, 2025, 05:50 PM IST
Darshan

ಸಾರಾಂಶ

ರೇಣುಕಾಸ್ವಾಮಿ ಕೇಸ್ ಟ್ರಯಲ್ ಆರಂಭವಾಗಿದ್ದು, ಈ ಕೇಸ್ ವಿಚಾರವಾಗಿ ದರ್ಶನ್​ಗಿಂತ ಹೆಚ್ಚು ಎ-1 ಪವಿತ್ರಾಗೆ ಢವಢವ ಶುರುವಾಗಿದೆ. ಈ ನಡುವೆ ಪವಿತ್ರಾ, ದರ್ಶನ್ ಬೇಟಿ ಮಾಡ್ಲಿಕ್ಕೆ ಪ್ರಯತ್ನ ಪಟ್ಟಿದ್ದು, ಅದಕ್ಕೆ ದಾಸ ಒಪ್ಪಿಲ್ಲ.

ರೇಣುಕಾಸ್ವಾಮಿ ಕೇಸ್ ಟ್ರಯಲ್ ಆರಂಭವಾಗಿದ್ದು, ಈ ಕೇಸ್ ವಿಚಾರವಾಗಿ ದರ್ಶನ್​ಗಿಂತ ಹೆಚ್ಚು ಎ-1 ಪವಿತ್ರಾಗೆ ಢವಢವ ಶುರುವಾಗಿದೆ. ಈ ನಡುವೆ ಪವಿತ್ರಾ, ದರ್ಶನ್ ಬೇಟಿ ಮಾಡ್ಲಿಕ್ಕೆ ಪ್ರಯತ್ನ ಪಟ್ಟಿದ್ದು, ಅದಕ್ಕೆ ದಾಸ ಒಪ್ಪಿಲ್ಲ. ಜೈಲಿನಲ್ಲಿ ಅದೆಷ್ಟೇ ಪ್ರಯತ್ನ ಪಟ್ರೂ ಪವಿತ್ರಾಗೆ ದರ್ಶನ ಸಿಕ್ಕಿಲ್ಲ. ಯೆಸ್ ರೇಣುಕಾಸ್ವಾಮಿ ಕೊಲೆ ಕೇಸ್ ಟ್ರಯಲ್ ಆರಂಭಗೊಂಡಿದ್ದು, ದರ್ಶನ್ ಌಂಡ್ ಗ್ಯಾಂಗ್ ಟೆನ್ಶನ್​ನಲ್ಲಿ ಮುಳುಗಿದೆ. ಈ ನಡುವೆ ದರ್ಶನ್​ಗಿಂತ ಹೆಚ್ಚಾಗಿ ಪವಿತ್ರಾಗೆ ಢವ ಢವ ಹೆಚ್ಚಾಗಿದೆ. ಯಾಕಂದ್ರೆ ಈ ಕೇಸ್​ನಲ್ಲಿ ಆರೋಪಿ ನಂ.1 ಪವಿತ್ರಾನೇ. ಇನ್ನೂ ದರ್ಶನ್ ಪರ ಬೇರೆ ವಕೀಲರು ವಾದ ಮಾಡ್ತಾ ಇದ್ರೆ, ಪವಿತ್ರಾ ಪರ ಬೇರೆ ವಕೀಲರು ಇದ್ದಾರೆ.

ತಾನೇ ಕೇಸ್​ನಲ್ಲಿ ಎ-1 ಆಗಿದ್ದು ಎಲ್ಲಿ ತನ್ನ ಮೇಲೆ ಕೇಸ್ ತಿರುಗಿಕೊಳ್ಳುತ್ತೋ ಅನ್ನೋ ಭಯ ಪವಿತ್ರಾಗೆ ಕಾಡ್ತಾ ಇದೆ. ಇದೇ ವಿಚಾರವಾಗಿ ದರ್ಶನ್ ಮಾತನಾಡೋದಕ್ಕೆ ಪವಿತ್ರಾ ಪ್ರಯತ್ನ ಪಟ್ಟಿದ್ದಾಳೆ. ಇತ್ತೀಚಿಗೆ ನೂತನ ಡಿಜಿಪಿ ಅಲೋಕ್ ಕುಮಾರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ರು. ಜೈಲಿನ ಪರಿಶೀಲನೆ ಬಳಿಕ ದರ್ಶನ್ ಬ್ಯಾರಕ್​ಗೂ ಹೋಗಿ ಅಲ್ಲಿನ ವ್ಯವಸ್ಥೆ ಪರಿಶೀಲನೆ ಮಾಡಿದ್ರು. ಬಳಿಕ ಮಹಿಳಾ ಬ್ಯಾರಕ್​ಗೂ ವಿಸಿಟ್ ಮಾಡಿದ್ರು. ಆಗ ಅಲೋಕ್ ಕುಮಾರ್ ಎದುರು ಪವಿತ್ರಾ ಮನವಿಯೊಂದನ್ನ ಇಟ್ಟಿದ್ದಾಳೆ. ತನಗೆ ದರ್ಶನ್​ನ ಭೇಟಿ ಮಾಡೋದಕ್ಕೆ ಅವಕಾಶ ಕೊಡಿ ಅಂತ ಕೇಳಿಕೊಂಡಿದ್ದ ಪವಿತ್ರಾಗೆ, ಜೈಲು ನಿಯಮ ಏನಿದೆ ವಿಚಾರಿಸಿ ಹೇಳ್ತಿನಿ ಅಂದಿದ್ರಂತೆ ಅಲೋಕ್​ ಕುಮಾರ್.

ಜೈಲಿನಲ್ಲಿ ಒಂದೇ ಕೇಸ್​ನಲ್ಲಿ ಬಂಧಿಗಳಾಗಿರೋ ಮಹಿಳಾ ಮತ್ತು ಪುರುಷ ಕೈದಿಗಳ ಭೇಟಿಗೆ ಅವಕಾಶ ಇದ್ದೇ ಇದೆ. ಸೋ ಜೈಲರ್ಸ್ ಪವಿತ್ರಾ ಭೇಟಿಯ ಮನವಿಯನ್ನ ದರ್ಶನ್​ಗೆ ತಲುಪಿಸಿದ್ರು. ಹೌದು ಪವಿತ್ರಾ ಗೌಡ ಭೇಟಿಗೆ ಅವಕಾಶ ಕೇಳಿದ್ದಾಳೆ, ನೀವು ಇಚ್ಚೆ ಪಟ್ಟಲ್ಲಿ ಭೇಟಿ ಮಾಡಬಹುದು ಅಂತ ದರ್ಶನ್​ಗೆ ಹೇಳಲಾಗಿದೆ. ಆದ್ರೆ ದಾಸ ಯಾವ ಕಾರಣಕ್ಕೂ ತಾನು ಪವಿತ್ರಾಳನ್ನ ಭೇಟಿ ಮಾಡಲ್ಲ ಅಂದಿದ್ದಾನಂತೆ. ಹೌದು ಕಳೆದ ಡಿಸೆಂಬರ್ ತಿಂಗಳಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರುಗೂ ಬೇಲ್ ಮಂಜೂರು ಆಗಿತ್ತು. ಆದ್ರೆ ಆಗಲೂ ಇಬ್ಬರೂ ಪರಸ್ಪರ ಭೇಟಿ ಆಗಲೇ ಇಲ್ಲ. ದರ್ಶನ್ ಪತ್ನಿ, ಮಗನ ಜೊತೆಗೆ ಇದ್ರೆ, ಪವಿತ್ರಾ ತನ್ನ ತಾಯಿ-ಮಗಳ ಜೊತೆಗೆ ಇದ್ದುಬಿಟ್ಟಿದ್ರು.

ಪವಿತ್ರಾಗೆ ದರ್ಶನ ಸಿಕ್ಕಿಲ್ಲ

ಕೋರ್ಟ್​​ಗೆ ಹಾಜರಾಗೋದಕ್ಕೆ ಬಂದಾಗಲೂ ಇಬ್ಬರ ನಡುವೆ ಮಾತುಕತೆ ನಡೆದಿರಲಿಲ್ಲ. ಒಂದೊಮ್ಮೆ ಸೆಷೆನ್ಸ್ ಕೋರ್ಟ್​​ನಲ್ಲಿ ಪವಿತ್ರಾ ಪಟ್ಟು ಹಿಡಿದು ದರ್ಶನ್​ ಹೊಸ ಫೋನ್ ನಂಬರ್ ಪಡೆದುಕೊಂಡಿದ್ಳು. ಆದ್ರೆ ಇಬ್ಬರ ನಡುವೆ ಮಾತುಕತೆ ನಡೀತಾ ಗೊತ್ತಿಲ್ಲ. ಮೂಲಗಳ ಪ್ರಕಾರ ತನ್ನ ಇಂದಿನ ಸ್ಥಿತಿಗೆ ಪವಿತ್ರಾಳೇ ಕಾರಣ ಅಂತ ಸಿಟ್ಟಾಗಿರೋ ದರ್ಶನ್, ಪವಿತ್ರಾ ಜೊತೆ ಮಾತನಾಡ್ಲಿಕ್ಕೆ ಒಪ್ತಾ ಇಲ್ಲ. ಆದ್ರೆ ಕೇಸ್ ಏನಾಗುತ್ತೋ ಅನ್ನೋ ಭೀತಿಯಲ್ಲಿರೋ ಪವಿತ್ರಾ ದರ್ಶನ್ ಜೊತೆ ಮಾತನಾಡಬೇಕು ಅಂತ ತಡವರಿಸ್ತಾ ಇದ್ದಾಳೆ. ಸದ್ಯಕ್ಕಂತೂ ಪವಿತ್ರಾಗೆ ದರ್ಶನ ಸಿಕ್ಕಿಲ್ಲ.. ಮುಂದೆ ಸಿಕ್ಕುತ್ತಾ ಅದೂ ಗೊತ್ತಿಲ್ಲ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಪ್ಪನಂತೆ ಅದೇ ಹೈಟ್, ಅದೇ ಲುಕ್.. ಡೆವಿಲ್ ಸೆಟ್​​ನಲ್ಲಿ ಗೆಳೆಯರಂತೆ ಕಾಣಿಸಿಕೊಂಡ ದರ್ಶನ್-ವಿನೀಶ್
ಪುನೀತ್ ರಾಜ್‌ಕುಮಾರ್ ಹೇಳಿದ ಆ ಒಂದು ಮಾತಿಗೆ ಕನ್ನಡ ಕಲಿತೆ: ನಟಿ ಪ್ರಿಯಾ ಆನಂದ್‌ ಹೇಳಿದ್ದೇನು?