
ನಟ ದರ್ಶನ್ (Darshan Thoogudeepa) ಇಲ್ಲದ ನೋವು ಪತ್ನಿ ವಿಜಯಲಕ್ಷ್ಮಿಯನ್ನು (Vijayalakshmi Darshan) ಕಾಡುತ್ತಿದೆ. ಪತಿಯೇ ಪರ ದೈವ ಅಂತ ಬದುಕುತ್ತಿರೋ ವಿಜಯಲಕ್ಷ್ಮಿಗೆ ಗಂಡನ ಜೈಲಿಂದ ಬಿಡಿಸಿದ್ರೆ ಸಾಕಾಗಿದೆ. ಅದೇ ನೋವಿನಲ್ಲಿ ಕೊರಗಿ ಕಲ್ಲಾಗಿರೋ ವಿಜಯಲಕ್ಷ್ಮೀ ದರ್ಶನ್ ನೆನಪಾದಾಗೆಲ್ಲಾ ಒಂದೊಂದು ಪೋಸ್ಟ್ ಹಾಕುತ್ತಿದ್ದಾರೆ. ಆ ಪೋಸ್ಟ್ಗಳು ಹೇಗಿವೆ ಅಂದ್ರೆ ದಾಸನ ಅಭಿಮಾನಿಗಳ ಕಣ್ಣಂಚಲ್ಲಿ ನೀರು ಆಡೋ ತರ ಇದೆ.. ಹಾಗಾದ್ರೆ ವಿಜಯಲಕ್ಷ್ಮೀಯ ನೋವಿನ ನುಡಿ ಏನಿದೆ..? ನೋಡೋಣ ಬನ್ನಿ..
ದಾಸನಿಲ್ಲದ ನೋವು ಅಭಿಮಾನಿಗಳ ಮನಸ್ಸನ್ನ ಹಿಂಡಿ ಹಿಪ್ಪೆ ಮಾಡಿದೆ. ದರ್ಶನ್ಅವರಿಗಾಗಿಗಾಗಿ ಪರಿತಪಿಸುತ್ತಿರೋ ಮತ್ತೊಂದು ಜೀವ ಪತ್ನಿ ವಿಜಯಲಕ್ಷ್ಮೀ.. ಪ್ರತಿ ಕ್ಷಣ ದರ್ಶನ್ರ ಬಿಡುಗಡೆಗೆ ದಾರಿ ಹುಡುಕುತ್ತಿರೋ ವಿಜಯಲಕ್ಷ್ಮೀ, ಕಣ್ಮುಂದೆ ಸಿನಿಮಾ ಮಾಡಿಕೊಂಡು ಸ್ಟಾರ್ಡಮ್ಅನ್ನ ಎಂಜಾಯ್ ಮಾಡುತ್ತಿದ್ದ ದರ್ಶನ್ರ ಈಗಿನ ಸ್ಥಿತಿ ಕಂಡು ಕರಳು ಹಿಂಡಿಕೊಳ್ಳುತ್ತಿದ್ದಾರೆ.
ಪತಿಯೇ ಪರದೈವ ಅಂತ ಬದುಕುತ್ತಿರೋ ಹೆಣ್ಣುಮಗಳು ವಿಜಯಲಕ್ಷ್ಮೀ.. ಒಂದು ಕೊಲೆ ಆರೋಪ ತನ್ನ ಗಂಡ ಸಿನಿಮಾ ರಂಗದಲ್ಲಿ ಮಾಡಿದ್ದ ಹೆಸರು ಕೀರ್ತಿ ಪತಾಕೆ, ಸಾಮ್ರಾಜ್ಯವೆಲ್ಲಾ ಕೆಡವಿ ಮಣ್ಣು ಪಾಲು ಮಾಡಿದೆ. ಪತಿ ಇವತ್ತು ಜೈಲು ಸೇರಿ ಎಲ್ಲರಿಂದ ಎಲ್ಲದರಿಂದ ದೂರಾಗಿದ್ದಾರೆ. ಧ್ರುತಿಗೆಡದ ವಿಜಯಲಕ್ಷ್ಮೀಯ ಹೋರಾಟ ಮುಂದುವರೆದಿದೆ. ಆದ್ರೂ ಜೈಲು ಸೇರಿರೋದು ಗಂಡ ಅಲ್ವಾ..? ನೋವು ಕಣ್ಣೀರು ದಾಸನ ಪತ್ನಿಯನ್ನ ಕಾಡದೇ ಇರುತ್ತಾ..? ಹಾಗಾಗೇ ನೋವು ಭಗವಂತನಿಗೆ ಮಾತ್ರ ಗೊತ್ತು ಎಂದಿದ್ದಾರೆ..
"ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು".. ಪತಿ ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್..!
ಹೌದು, ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ನೋವು ಮುಗಿಯೋ ಹಾಗೆ ಕಾಣುತ್ತಿಲ್ಲ.. ದರ್ಶನ್ ಜೈಲು ಸೇರಿ ಎರಡು ವರ್ಷ ಆಯ್ತು. ಅಂದಿನಿಂದ ಇಂದಿನವರೆಗೂ ವಿಜಯಲಕ್ಷ್ಮೀಯದ್ದು ಹೋರಾಟದ ಬದುಕೇ.. ಅದಕ್ಕೂ ಮೊದಲು ತಾಳಿ ಕಟ್ಟಿಸಿಕೊಂಡಿದ್ದ ಗಂಡನಿಂದಲೇ ಹಲ್ಲೆಗೆ ಒಳಗಾಗಿ ಒದ್ದಾಡಿದ್ದು, ಇದೆ. ಆದ್ರೆ ಏನೇ ಆದ್ರು ಗಂಡ ಅಲ್ವಾ.. ಎಲ್ಲ ಕಷ್ಟಗಳನ್ನ ಸಹಿಸಿಕೊಂಡ ಈ ಹೆಣ್ಣುಮಗಳು ಇವತ್ತು ಮತ್ತದೇ ಸಂಕಟದಲ್ಲಿ ಒದ್ದಾಡುತ್ತಿದ್ದಾರೆ. ಆ ನೋವು ಹೇಳಿಕೊಳ್ಳಬೇಕು ಅಂದೆನಿಸಿದಾಗೆಲ್ಲಾ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಾರೆ. ಹೀಗಾಗೆ ನಾನು ಎಷ್ಟೇ ನಗುವಿನಿಂದ ಇದ್ರೂ, ಆ ನಗುವ ಮುಖದ ಹಿಂದೆ ಇರೋ ನೋವು ಆ ದೇವರಿಗಷ್ಟೇ ಗೊತ್ತು ಅಂತ ಪೋಸ್ಟ್ ಹಾಕಿ, ಆ ನೋವನ್ನ ವ್ಯಕ್ತಪಡಿಸಿದ್ದಾರೆ.
ವಿಜಯಲಕ್ಷ್ಮೀ ಎಂಥದ್ದೇ ಸಂಕಷ್ಟ ಬಂದ್ರು ಅದನ್ನ ಧೈರ್ಯದಿಂದ ಗಟ್ಟಿಯಾಗಿ ಎದುರಿಸುತ್ತಿದ್ದಾರೆ. ಕಷ್ಟ ಇದೆ ಅಂತ ಸಮಾಜದ ಮುಂದೆ ಸಪ್ಪೆ ಮೋರೆ ಹಾಕಿಕೊಂಡು ಓದಾಡೋ ಚಾತಿ ದರ್ಶನ್ ಪತ್ನಿಯದ್ದಲ್ಲ.. ಎಲ್ಲವನ್ನು ನಗುನಗುತ್ತಾ ಸ್ವೀಕರಿಸಿ ಜಯಿಸೋ ಜಾಯಮಾನ ವಿಜಯಲಕ್ಷ್ಮೀಯದ್ದು. ಆದ್ರೆ ಕೆಲ ಸಾಮಾಜಿಕ ಮಾಧ್ಯಮಗದ ಹುಳಗಳು ವಿಜಯಲಕ್ಷ್ಮೀ ನಗುಮುಖದಲ್ಲಿ ಕಂಡರೆ ಸಾಕು. ಪತಿ ಜೈಲಲ್ಲಿರೋ ನೋವು ಒಂದ್ ಚೂರೂ ಈ ಹೆಂಗಸಿಗೆ ಇಲ್ಲ ಅಂತೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ. ಆ ನಗುವಿನ ಹಿಂದಿರೋ ನೋವು ದೇವರಿಗೆ ಮಾತ್ರ ಗೊತ್ತು ಎಂದು ಹೇಳೋ ಮೂಲಕ ಇದಕ್ಕೂ ದರ್ಶನ್ ಪತ್ನಿ ಉತ್ತರ ಕೊಟ್ಟಂತಿದೆ.
ದರ್ಶನ್ರ ಸಂಪ್ರದಾಯ ಮುಂದುವರೆಸಿದ ವಿಜಯಲಕ್ಷ್ಮೀ..! ನಗು ನಗುತ್ತಲೇ ಚಾಮುಂಡಿ ದರ್ಶನ ಪಡೆದ ದಾಸನ ಪತ್ನಿ..!
ಹೌದು, ದರ್ಶನ್ ಪತ್ನಿ ವಿಜಯಲಕ್ಷ್ಮೀ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ. ಮೊದಲ ಆಷಾಢ ಶುಕ್ರವಾರ ಆಗಿದ್ರಿಂದ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ನಗು ಮುಖದಲ್ಲೇ ಬಂದಿದ್ದಾರೆ. ದರ್ಶನ್ಪತ್ನಿ ಅಳಿಯ ಚಂದನ್ ಜೊತೆ ಬಂದು ಚಾಮುಂಡೇಶ್ವರಿ ಬಳಿ ಸಂಕಷ್ಟ ಪರಿಹಾರಕ್ಕೆ ಬೇಡಿಕೊಂಡಿದ್ದಾರೆ.
ನಟ ದರ್ಶನ್ಚಾಮುಂಡೇಶ್ವರಿಯ ಪರಮ ಭಕ್ತ. ಅದರಲ್ಲೂ ಆಷಾಢ ಮಾಸದ ಮೊದಲ ಶುಕ್ರವಾರ ಮತ್ತು ಕೊನೆ ಶುಕ್ರವಾರ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿ ದರ್ಶನ ಮಾಡಿ ಪಾವನ ಆಗೋದನ್ನ ರೂಡಿಸಿಕೊಂಡಿದ್ರು. ಆದ್ರೆ ಜೈಲು ಸೇರಿದ್ಮೇಲೆ ಇದೆಲ್ಲಾ ಹೇಗೆ ಸಾಧ್ಯವಾಗುತ್ತೆ. ಹೀಗಾಗಿ ಈಗ ಪತ್ನಿ ವಿಜಯಲಕ್ಷ್ಮೀ ಗಂಡನ ಸಂಪ್ರದಾಯವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಒಟ್ನಲ್ಲಿ ಒಂದು ಕಡೆ ಪತಿಯ ಬಿಡುಗಡೆಗೆ ಹೋರಾಟ ಮತ್ತೊಂದು ಕಡೆ ಜೀವನದಲ್ಲಿ ಇಂತಹ ಸಮಸ್ಯೆ ಆಯ್ತಲ್ಲಾ ಅನ್ನೋ ನೋವು.. ಆ ಸಮಸ್ಯೆ ಪರಿಹಾರಕ್ಕೆ ದೇವರ ಮೊರೆ ಹೋಗೋದು.. ಇದೇ ವಿಜಯಲಕ್ಷ್ಮೀ ಜೀವನದಲ್ಲಿ ನಡೆಯುತ್ತಿದೆ.
‘ಸಿನಿಮಾ ಹಂಗಾಮ’ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.