
ಕನ್ನಡ ಚಿತ್ರರಂಗದ ಅದ್ಭುತ ನಟ ಧರ್ಮಣ್ಣ ಕದೂರ್ಸ ಇತ್ತೀಚಿಗೆ ಅದ್ಭುತ ಪಾತ್ರಗಳಲ್ಲಿ ಕಾಣಿಸಿಕೊಂಡ ಸಿನಿ ರಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾ ಕೆಲಸ ಅಂತ ಆಗಾಗ ಅಲ್ಲಿ ಇಲ್ಲಿ ಓಡಾಡುತ್ತಿರುತ್ತಾರೆ. ಸಖತ್ ಸಿಂಪಲ್ ವ್ಯಕ್ತಿಯಾಗಿರುವ ಧರ್ಮಣ್ಣ ಹೀಗೆ ತಮ್ಮ ಧ್ವಿಚಕ್ರ ವಾಹನದಲ್ಲಿ ಓಡಾಡುವಾಗ ಟೀ ಮಾರುವ ಹುಡುಗನೊಬ್ಬ ಡ್ರಾಪ್ ಕೇಳುತ್ತಾರೆ. ಕಲಾವಿದರು ಅಂದ್ಮೇಲೆ ಪ್ರತಿಯೊಂದರ ಬಗ್ಗೆ ಆಸಕ್ತಿ ಜಾಸ್ತಿನೇ...ಹೀಗಾಗಿ ಆತನ ದಿನ ಜೀವನದ ಬಗ್ಗೆ ಮಾತು ಶುರು ಮಾಡಿದ್ದಾರೆ. ಆಗ ಆ ಹುಡುಗ ಹಂಚಿಕೊಂಡ ಕಥೆಯನ್ನು ಬರೆದುಕೊಂಡಿದ್ದಾರೆ.
ಧರ್ಮಣ್ಣ ಪೋಸ್ಟ್:
'ಈ ಹುಡುಗನ ಕಥೆ ಕೇಳಿದೆ. ಕೇಳಿದ ಮೇಲೆ ತುಂಬಾ ದುಃಖ ಮತ್ತು ಹೆಮ್ಮೆ ಎರಡೂ ಆದ್ವು.
ಇವತ್ತು ಕಾಮಾಕ್ಯ ಥಿಯೇಟರ್ ಹತ್ತಿರ ಟೀ ಮಾರ‌್ತ ಇದ್ದ. ನನ್ನ ಗಾಡಿಗೆ ಕೈ ಹೊಡೆದು ಚಂದ್ರೋದಯ ಥಿಯೇಟರ್ ತನಕ ಸ್ವಲ್ವ ಬಿಡಿ ಅಣ್ಣ ಅಂದ. ಅಯ್ತು ಬಾ ಅಂತ ಹತ್ತಿಸಿಕೊಂಡೆ. ಆಮೇಲೆ ಹಾಗೇ ವಿಚಾರಿಸಿದೆ, 'ಸ್ಕೂಲ್ ಇವತ್ತು ರಜಾ ಅಂತ ಟೀ ಮಾರ‌್ತ ಇದೀಯಾ ಗುಡ್' ಅಂದೆ. ಅದಕ್ಕೆ ಅವನು ಇಲ್ಲ ಅಣ್ಣ ನಾನು ಸ್ಕೂಲಿಗೆ ಹೋಗಲ್ಲ ಅಂದ. ನಾನು ಯಾಕೋ ಅಂತ ಕೇಳಿದೆ, ಆಗ ಅವನ ಕಥೆ ಹೇಳಿದ.
ನಟ ಜೈ ಜಗದೀಶ್ ಪುತ್ರಿ ಕೈಯಲ್ಲಿರುವ ಟ್ಯಾಟೂ ವೈರಲ್; ದೃಷ್ಠಿ ಆಗುತ್ತೆ ಎಂದ ನೆಟ್ಟಿಗರು!
ಅಪ್ಪ ಆಟೋ ಓಡಿಸುತ್ತಿದ್ದರು, ತೀರಿಹೋದರು. ಈಗ ಅಮ್ಮ, ನಾನು ಮತ್ತೆ ಎರಡು ವರ್ಷದ ತಮ್ಮ ಇದ್ದೇವೆ. ನಾನು ಓದೋಕೆ ಹೋದ್ರೆ ಮನೆ ಮತ್ತೆ ಖರ್ಚು ಯಾರು ನೊಡ್ಕೊತಾರೆ ಅಣ್ಣ ಕಷ್ಟ ಅಗುತ್ತೆ, ಅದಕ್ಕೆ ಅಮ್ಮ ಟೀ ಮಾಡಿಕೊಡ್ತಾರೆ, ನಾನು ಮಾರಿಕೊಂಡು ಬರ್ತಿನಿ. ಹೇಗೋ ನಡೀತಾ ಇದೆ ಅಂದ. ಏನು ಮಾತಾಡಬೇಕು ಗೊತ್ತಾಗಲೇ ಇಲ್ಲ. ನನಗನಿಸಿದ ಒಂದೆರಡು ಸಲಹೆಗಳನ್ನು ಕೊಟ್ಟು, ತುಂಬಾ ಕಾಡಿದ ಅವನ ಜೊತೆ ಒಂದು ಪೋಟೋ ತಗೊಂಡೆ. ನೋವೇ ಇರದವನಂತೆ ನಕ್ಕ, ಕೂಸಿನ ಹಾಗೆ.
ಮೈಸೂರ್ ಸಿಲ್ಕ್ ಸೀರೆ ಧರಿಸಿ ಸೊಂಟ ಬಳುಕಿಸಿದ ನಟಿ; ಕಾರೂ ನೀನೇ ಸೂಪರ್ ಎಂದ ನೆಟ್ಟಿಗರು!
ಜೀವನ ಕೆಲವರಿಗೆ ಎಷ್ಟು ಸುಲಭವೋ ಕೆಲವರಿಗೆ ಅಷ್ಟೇ ಕಠಿಣ ಕೂಡ. ಮಂದಿಗೆ ಸಹಾಯ ಮಾಡುವ ಸರ್ಕಾರ, ಸಂಘಸಂಸ್ಥೆಗಳ ಕಣ್ಣಿಗೆ ಇಂತಹವರು ಬಿದ್ದು, ಇವರ ಬದುಕು ಸ್ವಲ್ಪ ಸುಲಭವಾದರೆ ಅವರ ಉದ್ದೇಶ ಸಾರ್ಥಕ. ದುಡಿಮೆಗೆ ಹತ್ತುವ ಮಂದಿ, ತಲೆ ಎತ್ತಿ ಬದುಕುತ್ತಾರೆ ನಗು ನಗುತ್ತಾ ಎಂದು ಮತ್ತೊಮ್ಮೆ ಮನವರಿಕೆ ಮಾಡಿದ ಹುಡುಗನಿಗೆ ಕೋಟಿ ಧನ್ಯವಾದ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.