
ಬೆಂಗಳೂರು (ಜು.22): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುದ್ದೆ ಮುರಿಯುತ್ತಿರುವ ಯಜಮಾನನ ಭೇಟಿಗೆ ಇಂದು ನಟ ವಿನೋದ್ ರಾಜ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಭೇಟಿಯಾಗಿ ಮಾತುಕತೆ ನಡೆಸಿದ್ರು, ದರ್ಶನ್ ಭೇಟಿಯಾಗಿ ಹೊರಬಂದ ವಿನೋದ್ ರಾಜ್ ಕಣ್ಣೀರು ಹಾಕಿದ್ರು.
ನಿಧಾನವಾಗಿ ದರ್ಶನ್ ಭೇಟಿಯಾಗಲು ಹೋಗುತ್ತಿರುವ ನಟ ವಿನೋದ್ ರಾಜ್ ಇನ್ನೊಂದಡೆ ಜೈಲು ಗೇಟ್ ಬಳಿ ಪತಿ ನೋಡಲು ಬರುವ ವಿಜಯಲಕ್ಷ್ಮಿ. ಹೌದು ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಗ್ಯಾಂಗ್ ಕಂಬಿ ಎಣಿಸುತ್ತಿದ್ದಾರೆ. ಇಂದು ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಭೇಟಿಯಾಗಲು ನಟ ವಿನೋದ್ ರಾಜ್ ಆಗಮಿಸಿದ್ದರು. ಬೆಳಿಗ್ಗೆ 12 ಗಂಟೆಗೆ ವಿನೋದ್ ರಾಜ್ ದರ್ಶನ್ ಭೇಟಿಗೆ ಆಗಮಿಸಿದರು ಆದರೆ ಅವಕಾಶ ಸಿಗದ ಹಿನ್ನೆಲೆ ಮಧ್ಯಾಹ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಜೈಲಿಗೆ ಹೋಗಿ ಮಾತುಕತೆ ನಡೆಸಿದ್ರು. ಇಂದು ಕೂಡ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಿಂದ ಬಟ್ಟೆ ತಂದಿದ್ರು.
ನಮ್ಮ ಕಲಾವಿದನ ಮಗ ದರ್ಶನ್‌ನ ಬಿಟ್ಟುಕೊಡಬೇಡ ಅಂದಿದ್ರು ನನ್ನಮ್ಮ: ನಟ ವಿನೋದ್ ರಾಜ್
ಸಹೋದರ ದಿನಕರ್ ತೂಗುದೀಪ್ ನಟ ವಿನೋದ್ ರಾಜ್ ಜೊತೆಗೆ ಬಂದಿದ್ದ ಸ್ನೇಹಿತರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿಯಾದರು.ದರ್ಶನ್ ವಿನೋದ್ ರಾಜ್ ನೋಡುತ್ತಿದ್ದಂತೆ ತಬ್ಬಿಕೊಂಡು ಕಣ್ಣೀರು ಹಾಕಿದ್ದಾನೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ಗೋಡೆಯ ಮಧ್ಯೆ ಸಿಲುಕಿರುವ ದಾಸ ಹಾಗೂ ಗ್ಯಾಂಗ್ ದಿನ ಕಳೆಯೋದು ಹೇಗೆ ಎನ್ನುವ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ. ಜೈಲಿನಲ್ಲಿ ವಿನೋದ್ ರಾಜ್ ಭೇಟಿಯಾದಾಗಲೂ ಸಹ ಭಾವುಕವಾಗಿ ಮಾತನಾಡಿದ್ದಾನೆ. ದರ್ಶನ್ ಭೇಟಿಯಾಗಿ ಹೊರ ಬಂದಾಗಲೂ ನಟ ವಿನೋದ್ ರಾಜ್ ನೋವಿನಲ್ಲಿ ಮಾತನಾಡಿದ್ದಾರೆ.
ನನ್ನ ಮನೋಭಾವದಲ್ಲಿ ದರ್ಶನ ಕಲಾವಿದರು ಬಂದ ತಕ್ಷಣ ನನ್ನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಅದೇ ಪ್ರೀತಿ ಅದೇ ಆತ್ಮೀಯತೆ ಈಗಾಗಲು ಅವರಲ್ಲಿ ಇದೆ. ಸ್ವೇಚ್ಛಾನುಸಾರವಾಗಿ ಓಡಾಡುತ್ತಿದ್ದ ಮನುಷ್ಯ ದರ್ಶನ್ ಆದರೆ ಅವರು ಇಂತಹ ಪರಿಸ್ಥಿತಿಯಲ್ಲಿ ನೋಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ಇದು ಸರಿ ಇದು ತಪ್ಪು ಎಂದು ಕ್ಷಣದಲ್ಲಿ ಹೇಳಿಬಿಡಬಹುದು ಆದರೆ ಅಲ್ಲಿ ಪ್ರಾಣ ಕಳೆದುಕೊಂಡ ತಂದೆ ತಾಯಿ ಹಾಗೂ ಗರ್ಭದಲ್ಲಿ ಮಗು ಇರುವ ಪತ್ನಿ ನೆನೆಸಿಕೊಂಡರೆ ರೇಣುಕಾ ಸ್ವಾಮಿ ಕುಟುಂಬದವರ ನೋವು ಕಣ್ಣೆದುರಿಗೆ ಬರುತ್ತದೆ.
ಆದರೆ ಇಲ್ಲಿ ಕಾರಾಗೃಹದಲ್ಲಿ ಕಾಲ ಕಳೆಯುವುದು ಅಷ್ಟು ಸುಲಭ ಅಲ್ಲ, ದರ್ಶನ್ ಗೂ ಮನೆಯವರು ಸಿನಿಮಾಗೆ ಹೂಡಿಕೆ ಮಾಡಿರುವವರು ಎನ್ನುವ ಚಿಂತೆ ಅವರಿಗೂ ಇದೆ ಎಂದು ಗದ್ಗಧಿತರಾಗಿ ಮಾತನಾಡಿದರು. ಇನ್ನು ಪರಪ್ಪನ ಅಗ್ರಹಾರ ಮಹಿಳಾ ಬ್ಯಾರಾಕ್ನಲ್ಲಿ ಇರುವ ಪವಿತ್ರ ಗೌಡ ಮನೆಯವರು ಬೆಳಗ್ಗೆ ಆಗಮಿಸಿ ಮಗಳನ್ನು ಭೇಟಿಯಾಗಿ ಮನೆಯಿಂದ ಎರಡು ಬ್ಯಾಗ್ ನಲ್ಲಿ ತಂದಿದ್ದ ಹಣ್ಣು ಹಂಪಲು ಹಾಗೂ ಬಟ್ಟೆಗಳನ್ನು ಕೊಟ್ಟು ಹೋಗಿದ್ದಾರೆ. ಪವಿತ್ರ ಗೌಡ ತಾಯಿ ಶೋಭಾ ಹಾಗೂ ನಾಲ್ಕು ಜನ ಬೆಳಗ್ಗೆ ಮಗಳನ್ನು ನೋಡಲು ಬಂದವರು ಮಧ್ಯಾಹ್ನದವರೆಗೂ ಜೈಲಿನಲ್ಲಿ ಮಗಳ ಜೊತೆ ಮಾತನಾಡಿ 3 ಘಂಟೆಗೆ ಜೈಲಿನಿಂದ ಹೊರ ಬಂದಿದ್ದಾರೆ.
5ನೇ ಬಾರಿ ದರ್ಶನ್ ಕಾಣಲು ಜೈಲಿಗೆ ಬಂದ ಮಡದಿ ವಿಜಯಲಕ್ಷ್ಮಿ, ದಿನಕರ್ ತೂಗುದೀಪ್ ಸಾಥ್!
ಪ್ರತಿದಿನ ಪ್ರೇಯಸಿಯ ಜೊತೆ ಹಾಗೂ ಪಾರ್ಟಿ ಮೋಜು ಮತ್ತಿ ಎಂದು ಕಾಲ ಕಳೆಯುತ್ತಿದ್ದ ನಾನೊಂದು ತೀರ ನೀನೊಂದು ತೀರ ಎಂಬಂತೆ ಜೈಲಿನಲ್ಲಿ ಬೇರೆ ಬೇರೆ ಕಡೆ ಇರುವ ಪರಿಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಯಜಮಾನ ತಿಂಗಳು ಕಳೆದಿದ್ದಾನೆ ಇತ್ತ ಮನೆಯವರು ಬಂದ್ರು, ಪುಸ್ತಕ ಓದಿದ್ರು ನಾಲ್ಕು ಗೋಡೆಯ ಮಧ್ಯೆ ಕಾಟೇರ ಇರಲು ಆಗದೆ ಕೈ ಕೈ ಹಿಸುಕಿ ಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇನ್ನಷ್ಟು ದಿನ ಜೈಲಿನಲ್ಲಿ ಕಳೆಯಬೇಕು ಎನ್ನುವ ಆತಂಕ ದರ್ಶನ್ ಗೆ ಪದೇಪದೇ ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.