
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿ ಗಮನ ಸೆಳೆಯುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು. ಅದರಲ್ಲೂ ದಿನೇ ದಿನೇ ವಿಶೇಷ ವಿಚಾರಗಳ ಮೂಲಕ ಸುದ್ದಿಯಾಗುತ್ತಿರುವುದು 'ರಾಬರ್ಟ್' .
ತರುಣ್ ಸುಧೀರ್ ನಿರ್ದೇಶನದ, ಉಮಾಪತಿ ನಿರ್ಮಾಣದ 'ರಾಬರ್ಟ್' ಚಿತ್ರದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಆಶಾ ಭಟ್. ಡಿಸೆಂಬರ್ 25 ರಂದು ರಿವೀಲ್ ಆದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಡಿ-ಬಾಸ್ ಕೈಯಲ್ಲಿ ಗನ್ ಹಿಡಿದು ನಿಂತಿದ್ದಾರೆ. ವೈರಲ್ ಪೋಸ್ಟರ್‌ನಲ್ಲಿ ಒಂದು ರಹಸ್ಯ ಅಡಗಿದೆ.
ಇದರ ಬಗ್ಗೆ ಶ್ಯಾಮ್ ಪ್ರಸಾದ್ ಎಂಬ ವ್ಯಕ್ತಿಯೊಬ್ಬ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಸಣ್ಣದಾಗಿ ಇಂಗ್ಲಿಷ್ ಸಾಲುಗಳನ್ನು ಹೊಂದಿದೆ. ಆ ಸಾಲುಗಳನ್ನು ಚಾರ್ಲ್ಸ್ ಎ ಜಾನ್ಸನ್ (Charles A johnson) ಬರೆದಿರುವುದು ಎನ್ನಲಾಗಿದೆ.
ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಚಿತ್ರ ಏಪ್ರಿಲ್ 9 ರಂದು ತೆರೆ ಕಾಣಲು ಸಜ್ಜಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.