ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರ ಮತ್ತೆ ಸುದ್ದಿ ಮಾಡುತ್ತಿದೆ. ಈ ಹಿಂದೆ ಚಿತ್ರೀಕರಣಕ್ಕೆ ವಿದೇಶದಲ್ಲಿ ಲೊಕೇಷನ್ ವ್ಯವಸ್ಥೆ ಮಾಡಿದ ಮುಂಬೈ ಮೂಲದ ಕೋಆರ್ಡಿನೇಟರ್ಗಳಿಗೆ ಹಣ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂತು. ಈಗ ಅದರ ಮುಂದುವರಿದ ಭಾಗದಂತೆ ಏಕಾಏಕಿ ಚಿತ್ರದ ಟೀಸರ್ ಅನ್ನೇ ಯೂಟ್ಯೂಬ್ನಿಂದ ಡಿಲೀಟ್ ಮಾಡಿಸಲಾಗಿದೆ.
2 ಮಿಲಿಯನ್ ವೀಕ್ಷಣೆ ದಾಟಿದ ಚಿತ್ರದ ಟೀಸರ್ ಯೂಟ್ಯೂಬ್ನಿಂದ ನಾಪತ್ತೆ ಆಗಿರುವುದಕ್ಕೆ ಕಿಚ್ಚನ ಅಭಿಮಾನಿಗಳು ಗರಂ ಆಗಿದ್ದಾರೆ. ಇಷ್ಟಕೂ ಆಗಿದ್ದೇನು ಎಂಬುದರ ಬಗ್ಗೆ ನಿರ್ಮಾಪಕ ಸೂರಪ್ಪ ಬಾಬು ಮಾತುಗಳು ಇಲ್ಲಿವೆ.
ಕೋ-ಆರ್ಡಿನೇಟರ್ಗಳ ದೂರು
ಪೋಲೆಂಡ್ನಲ್ಲಿ ‘ಕೋಟಿಗೊಬ್ಬ 3’ ಚಿತ್ರಕ್ಕೆ ಶೂಟಿಂಗ್ ಮಾಡಿಕೊಳ್ಳಲು ಲೊಕೇಶನ್ಗಳನ್ನು ತೋರಿಸಿ, ಇಡೀ ಚಿತ್ರತಂಡ ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ ಮುಂಬೈ ಮೂಲದ ಸಂಜಯ್ ಪಾಲ್ ಹಾಗೂ ಅಜಯ್ ಪಾಲ್ ಸೋದರರು ನಿರ್ಮಾಪಕರು ತಮಗೆ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ ಬೆನ್ನಲ್ಲೇ ಆನಂದ್ ಆಡಿಯೋ ಯೂಟ್ಯೂಬ್ನಲ್ಲಿದ್ದ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಅನ್ನು ಎರಡು ದಿನಗಳ ಹಿಂದೆಯೇ ಯೂಟ್ಯೂಬ್ ಡಿಲೀಟ್ ಮಾಡಿದೆ. ಹಣ ನೀಡುವವರೆಗೂ ಟೀಸರ್ ಅನ್ನು ಯೂಟ್ಯೂಬ್ನಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಅವರು ದೂರು ನೀಡಿದ್ದರು.
ರಾತ್ರೋರಾತ್ರಿ ಕಣ್ಮರೆಯಾಯ್ತು ಕಿಚ್ಚನ 'ಕೋಟಿಗೊಬ್ಬ-3' ಟೀಸರ್
50 ಲಕ್ಷ ಬಾಕಿ ವ್ಯವಹಾರ
ಪೋಲೆಂಡ್ ಚಿತ್ರೀಕರಣ ಮುಗಿಸಿಕೊಂಡು ಬಂದ ಮೇಲೆ ನಾನು ಕೋ-ಆರ್ಡಿನೇಟರ್ಗಳಿಗೆ ಹಣ ನೀಡಿಲ್ಲ ಎಂದು ಆರೋಪಿಸಿ ನಮ್ಮ ಚಿತ್ರತಂಡದ ಇಬ್ಬರು ವ್ಯಕ್ತಿಗಳನ್ನು ಪೋಲೆಂಡ್ನಲ್ಲೇ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಈ ಇಬ್ಬರನ್ನು ಬಿಡಿಸಿಕೊಂಡು ಬಂದ ಮೇಲೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ನಾನು ಅವರಿಗೆ 50 ಲಕ್ಷ ರುಪಾಯಿ ಬಾಕಿ ಉಳಿಸಿಕೊಂಡಿದ್ದೀನಿ ಅನ್ನುವುದು ಕೋ-ಆರ್ಡಿನೇಟರ್ಗಳ ಆರೋಪ.
ಕಪೋಲಕಲ್ಪಿತ ಸುದ್ದಿ ಹಬ್ಬಿಸಬೇಡಿ
ನನ್ನ ಹಾಗೂ ಸಂಜಯ್ ಪಾಲ್, ಅಜಯ್ ಪಾಲ್ ಸೋದರರ ನಡುವಿನ ಹಣಕಾಸು ವ್ಯವಹಾರ ಇರುವುದು ನಿಜ. ಅದು ಕೋರ್ಟ್ನಲ್ಲಿದೆ. ಅವರು ಹೇಳುವಂತೆ ನಾನು ಯಾರಿಗೂ ಹಣ ಕೊಡುವ ಅಗತ್ಯವಿಲ್ಲ. ಆದರೆ, ಏಕಾಏಕಿ ಮತ್ತೆ ದೂರು ನೀಡಿ ಯೂಟ್ಯೂಬ್ನಿಂದ ಟೀಸರ್ ತೆಗೆಸಿದ್ದಾರೆ. ಯಾವುದೇ ದೂರು ದಾಖಲಾದ ಕೂಡಲೇ ಯೂಟ್ಯೂಬ್ ಇಂಥ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಆನಂದ್ ಆಡಿಯೋ ಸಂಸ್ಥೆ ಕಾನೂನು ಕ್ರಮಕ್ಕೆ ಮುಂದಾಗಿದೆ.
ಸದ್ಯದಲ್ಲೇ ಟೀಸರ್ ಮರು ಬಿಡುಗಡೆ ಮಾಡಲಿದ್ದೇವೆ. ಇದರ ನಡುವೆ ನನ್ನ ಮತ್ತು ಸುದೀಪ್ ಅವರ ನಡುವೆ ಭಿನ್ನಾಭಿಪ್ರಾಯ ಬರುವಂತೆ ಸುಳ್ಳು ಸುದ್ದಿ ಮಾಡಿದ್ದಕ್ಕೆ ತುಂಬಾ ಬೇಸರ ಆಯ್ತು. ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಮತ್ತೆ ಇಬ್ಬರು ಸಿನಿಮಾ ಮಾಡುತ್ತೇವೆ. ಈಗಾಗಲೇ ‘ಕೋಟಿಗೊಬ್ಬ-4’ ಚಿತ್ರಕ್ಕೆ ಕತೆ ರೆಡಿ ಮಾಡಿದ್ದೇವೆ. ಸಂಬಂಧವಿಲ್ಲದ ಪ್ರಕರಣವನ್ನು ಇಟ್ಟುಕೊಂಡು ಸುಳ್ಳು ಸುದ್ದಿ ಪ್ರಸಾರ ಮಾಡಬೇಡಿ.
ಚಿತ್ರಗಳ: ಹೊಸ ಅವಾತಾರದಲ್ಲಿ 'ದಾದಾ ಸಾಹೇಬ್ ಫಾಲ್ಕೆ' ಅವಾರ್ಡ್ ಸ್ವೀಕರಿಸಿದ ಕಿಚ್ಚ..!
ಮುಂದೇನು?
ಕೋ-ಆರ್ಡಿನೇಟರ್ಗಳಾದ ಸಂಜಯ್ ಪಾಲ್ ಹಾಗೂ ಅಜಯ್ ಪಾಲ್ ಅವರ ದೂರಿಗೆ ಸ್ಪಷ್ಟೀಕರಣ ಕೊಟ್ಟು ಮತ್ತೆ ಯೂಟ್ಯೂಬ್ನಲ್ಲಿ ಟೀಸರ್ ಬಿಡುಗಡೆ ಮಾಡುವ ಜವಾಬ್ದಾರಿ ಆನಂದ್ ಆಡಿಯೋ ಸಂಸ್ಥೆಗೆ ಸೇರಿದ್ದು. ಅವರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನಾಳೆ ಒಳಗೆ ಟೀಸರ್ ಮತ್ತೆ ಯೂಟ್ಯೂಬ್ಗೆ ಬರಲಿದೆ.
ಸುದೀಪ್ ಹೇಳಿದ್ದೇನು?
ಯೂಟ್ಯೂಬ್ನಿಂದ ಟೀಸರ್ ಡಿಲೀಟ್ ಮಾಡಿರುವ ಪ್ರಕರಣಕ್ಕೆ ನಟ ಸುದೀಪ್ ಅವರು ಪ್ರತಿಕ್ರಿಯಿಸಿ, ‘ಕೆಲ ತೊಂದರೆಗಳಿಂದ ಯೂಟ್ಯೂಬ್ನಿಂದ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಡಿಲೀಟ್ ಆಗಿರುವುದು ನಿಜ. ಸಮಸ್ಯೆ ಬಗೆಹರಿಸಿಕೊಂಡು ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುತ್ತೇವೆ’ ಎಂದು ನಟ ಸುದೀಪ್ ಅವರು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.