
ದರ್ಶನ್ ಅಕ್ಕನ ಮಗ ಚಂದು ಸಿನಿಮಾ ಏನಾಯ್ತು?
DARSHAN THOOGUDEEPA-CHANDHU: ಕೊಲೆ ಅರೋಪದಲ್ಲಿ ನಟ ದರ್ಶನ್ ಜೈಲು ಸೇರಿದ ಹಿನ್ನೆಲೆ ದರ್ಶನ್ ಆಪ್ತ ಬಳಗಕ್ಕೆ ಸಾಕಷ್ಟು ಸಮಸ್ಯೆಗಳಾಗಿವೆ. ಅದರಲ್ಲೂ ದರ್ಶನ್ಅಕ್ಕನ ಮಗ ಚಂದುಗೆ ತಲೆ ನೋವಾಗಿದೆ. ಚಿತ್ರರಂಗದಲ್ಲಿ ಮಿಂಚಬೇಕೆಂಬ ಕನಸು ಕಂಡಿದ್ದ ಚಂದು ಸಿನಿ ಭವಿಷ್ಯ ಈಗ ಅತಂತ್ರವಾಗಿದೆ. ಅಷ್ಟಕ್ಕೂ ದರ್ಶನ್ಜೈಲು ಸೇರಿದ್ದಕ್ಕೂ ಚಂದು ಸಿನಿ ಭವಿಷ್ಯ ಅತಂತ್ರವಾಗೋಕೂ ಏನ್ ಸಂಬಂಧ ಅಂತೀರಾ? ಇಲ್ಲಿದೆ ನೋಡಿ ಆ ಸ್ಟೋರಿ...
ಎಲ್ಲವೂ ಸರಿಯಾಗಿ ಇದ್ದಿದ್ರೆ ಇಷ್ಟೊತ್ತಿಗೆ ದರ್ಶನ್ಅಕ್ಕನ ಮಗ ಚಂದು ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಬೇಕಿತ್ತು, ಮೆರದಾಡಬೇಕಿತ್ತು. ಅದ್ರೆ ದರ್ಶನ್ಜೈಲು ಪಾಲಾಗಿದ್ದು ಚಂದುಗೆ ಸಿನಿಮಾ ರಂಗದಲ್ಲಿ ಚಂದದ ಜೀವನ ಇಲ್ಲದಂತೆ ಮಾಡಿದೆ. ತೂಗುದೀಪ ಪ್ರೊಡಕ್ಷನ್ಮೂಲಕ ಬೆಳ್ಳಿತೆರೆಗೆ ಬರೋ ಆಸೆ ಇಟ್ಟುಕೊಂಡಿದ್ದ ಚಂದುಗೆ ಈಗ ಸಿನಿಮಾ ಸೆಟ್ಟೇರೋದು ಯಾವಾಗ ಅನ್ನೋ ಚಿಂತೆ ಶುರುವಾದಂತಿದೆ .
ದರ್ಶನ್ ಉತ್ತರಾಧಿಕಾರಿ ಆಗಬೇಕಿತ್ತು ಅಕ್ಕನ ಮಗ ಚಂದು..!
ಹೌದು.. ದರ್ಶನ್ ಸಹೋದರಿ ದಿವ್ಯಾ ತೂಗುದೀಪ ಅವರ ಪುತ್ರ ಚಂದು ಕುರಿತ ಸ್ಟೋರಿ ಇದು. ಚಂದುವನ್ನ ದರ್ಶನ್ ತಮ್ಮ ಉತ್ತರಾಧಿಕಾರಿ ಅಂತ ಹೇಳಿಕೊಳ್ತಾ ಇದ್ರು. ಕಾಟೇರ ಸಿನಿಮಾದಲ್ಲಿ ಈತನಿಗೆ ನಟನೆಯ ಅವಕಾಶ ಕೊಟ್ಟಿದ್ರು. ಜೊತೆಗೆ ತೆರೆಯ ಹಿಂದೆಯೂ ಕೆಲಸ ಮಾಡಿ ಸಿನಿಮಾದ ಒಳಗುಟ್ಟುಗಳನ್ನ ಅರಿತುಕೋ ಅಂತ ಹೇಳಿದ್ರು.
ದರ್ಶನ್ ನಿರ್ಮಾಣ, ದಿನಕರ್ ನಿರ್ದೇಶನ.. ಕನಸು ಈಡೇರೋದ್ಯಾವಾಗ..?
ಕಾಟೇರ ಸಿನಿಮಾದಲ್ಲಿ ದರ್ಶನ್ ಚಿಕ್ಕ ವಯಸ್ಸಿನ ಪಾತ್ರ ಮಾಡಿದ್ದ ಚಂದು ತಕ್ಕ ಮಟ್ಟಿಗೆ ಚೆನ್ನಾಗಿಯೇ ನಟನೆ ಮಾಡಿದ್ದ. ಈತನನ್ನ ಹೀರೋ ಮಾಡೋದಕ್ಕೆ ದರ್ಶನ್ ರೆಡಿಯಾಗಿದ್ರು. ಖುದ್ದು ದರ್ಶನ್ ಬಂಡವಾಳ ಹೂಡಿದ್ರೆ ದಿನಕರ್ ತೂಗುದೀಪ ನಿರ್ದೇಶನ ಮಾಡೋದಕ್ಕೆ ಸಜ್ಜಾಗಿದ್ರು. ಆದ್ರೆ ಈಗ ದರ್ಶನ್ ಅಕ್ಕನ ಮಗನ ಸಿನಿಮಾ ಸುದ್ದಿಯೇ ಇಲ್ಲ..
ಹೌದು, ದರ್ಶನ್ ಅಕ್ಕನ ಮಗ ಚಂದು ನಾಯಕನಾಗಿ ಪರಿಚಯಿಸಲು ದರ್ಶನ್ ಸಹೋದರರು ಸಿದ್ದರಾಗಿದ್ರು. ಚಂದು ನಾಯಕನಾಗಿ ನಟಿಸಬೇಕಿದ್ದ ಚಿತ್ರದ ಮುಹೂರ್ತ ಕಳೆದ ವರ್ಷ ಆಗಸ್ಟ್ನಲ್ಲಿ ಆಗಬೇಕಿತ್ತು. ಅಷ್ಟರಲ್ಲಿ ಕೊಲೆ ಆರೋಪ ದರ್ಶನ್ ಮೇಲೆ ಬಂದು ಬಿಡ್ತು. ಜಾಮೀನಿನ ಮೇಲೆ ಹೊರ ಬಂದಿದ್ದ ದಾಸ ಅಕ್ಕನ ಮಗನ ಭವಿಷ್ಯ ಕಟ್ಟೋಣ ಅನ್ನೋ ನಿರ್ಧಾರ ಮಾಡಿದ್ರು. ಆದ್ರೆ ಮತ್ತೆ ಜಾಮೀನು ಕ್ಯಾನ್ಸಲ್ ಆಗಿ ಜೈಲು ಪಾಲಾದ್ರು ದರ್ಶನ್. ಅಲ್ಲಿಗೆ ಸೆಟ್ಟೇರಬೇಕಿದ್ದ ಸಿನಿಮಾ ಸದ್ದಿಲ್ಲದೇ ನಿಂತು ಹೋಯ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಮೊದಲು ದರ್ಶನ್-ದಿನಕರ್ ಅಷ್ಟಾಗಿ ಮಾತನಾಡುತ್ತಿರಲಿಲ್ಲ ಅನ್ನೋ ವಿಚಾರ ಗಾಂಧಿನಗರದಲ್ಲಿತ್ತು. ಆದ್ರೆ ಅಣ್ಣ ಯಾವಾಗ ಜೈಲು ಸೇರಿದ್ರೋ, ಕೂಡಲೇ ದಿನಕರ್ ಅಣ್ಣನ ಕಷ್ಟಕ್ಕೆ ಕರಗಿದ್ರು. ಎಲ್ಲಾ ವೈಮನಸ್ಯ ಮರೆತು ಒಡಹುಟ್ಟಿದ ಅಣ್ಣನನ್ನ ಕಷ್ಟದಿಂದ ಪಾರುಮಾಡಲು ದಿನಕರ್ಪಣ ತೊಟ್ರು. ಆಗ ಈ ಅಣ್ತಮ್ಮಾಸ್ ಒಂದಾದ್ರು ಅನ್ನೋ ಮಾತಿದೆ. ಆದರೆ ಈ ವಿಷಯದಲ್ಲಿ ಸತ್ಯ ಸಂಗತಿ ಗೊತ್ತಾಗುತ್ತಿಲ್ಲ!
ತೂಗುದೀಪ ಕುಟುಂದ ಕೀರ್ತಿಯನ್ನ ಎತ್ತಿ ಹಿಡಿಯೋದ್ರಲ್ಲಿ ದರ್ಶನ್ಗಿಂತ ದಿನಕರ್ಒಂದು ಕೈ ಹೆಚ್ಚೇ ಅನ್ನಬಹುದು. ಯಾಕಂದ್ರೆ ದಿನಕರ್ಗೆ ವಿವಾದಗಳು ಇಷ್ಟವಿಲ್ಲ. ಸರಳ ಸಜ್ಜನಿಕೆಯಿಂದ ಚಿತ್ರರಂಗದಲ್ಲಿ ಲೈಫ್ಕಟ್ಟಿಕೊಂಡ ವ್ಯಕ್ತಿ.. ಹೀಗಾಗೆ ದಿನಕರ್ತನ್ನ ಅಕ್ಕನ ಮಗ ಚಂದುಗಾಗಿ ಒಂದೊಳ್ಳೆ ಕತೆ ಮಾಡ್ಕೊಂಡು ಕಾಯ್ತಾ ಇದ್ದಾರೆ.
ದರ್ಶನ್ ದಿನಕರ್ಮತ್ತೆ ಒದ್ದಾದ್ಮೇಲೆ ದರ್ಶನ್ ತನ್ನ ಅಕ್ಕನ ಮಗನ ಚಿತ್ರಕ್ಕೆ ತಮ್ಮ ದಿನಕರ್ ನಿರ್ದೇಶನ ಮಾಡಲು ಎಲ್ಲಾ ತಯಾರಿ ಆಗಿತ್ತು. ಅದ್ರೆ ದರ್ಶನ್ ಬೇಲ್ ಕ್ಯಾನ್ಸಲ್ ಆಗಿದ್ದು ಚಂದು ಮತ್ತು ದಿನಕರ್ ತೂಗುದೀಪ ಸಿನಿಮಾ ಪ್ಲಾನ್ಮತ್ತೆ ಮುಂದೆ ಹೋಗುವಂತೆ ಮಾಡಿತ್ತು. ಯಾಕಂದ್ರೆ ಆ ಸಿನಿಮಾದಲ್ಲಿ ನಟ ದರ್ಶನ್ ಕೂಡ ಅಭಿನಯಿಸಬೇಕಿದೆಯಂತೆ..
ಅಕ್ಕನ ಮಗನ ಸಿನಿಮಾದಲ್ಲಿ ವಿಲನ್ ರೋಲ್ ಮಾಡಬೇಕಿತ್ತಾ ದರ್ಶನ್..?
ಹೌದು, ಬಲ್ಲ ಮೂಲಗಳ ಮಾಹಿತಿ ಪ್ರಕಾರ ದಿನಕರ್ ನಿರ್ದೇಶನದ ಅಕ್ಕನ ಮಗ ಚಂದು ನಟನೆಯ ಸಿನಿಮಾದಲ್ಲಿ ನಟ ದರ್ಶನ್ ನೆಗೆಟೀವ್ ರೋಲ್ ಮಾಡಬೇಕಿತ್ತಂತೆ. ಅದ್ರೆ ದರ್ಶನ್ ಜೈಲು ಸೇರಿರೋ ಕಾರಣ ಆ ಕತೆ ಇಟ್ಕೊಂಡ್ ದಿನಕರ್ ದರ್ಶನ್ ಅವರಿಗಾಗಿ ಕಾಯ್ದಿದ್ದಾರೆ. ದರ್ಶನ್ ಜೈಲು ಪಾಲಾಗಿದ್ದು ಚಂದು ಸಿನಿ ಕನಸಿಗೆ ಗ್ರಹಣ ಹಿಡಿದಂತಾಗಿದೆ. ಮುಂದೆನು ಕಥೆಯೋ ಮುಂದೇನೋ ಗತಿಯೋ ಎಂಬಂತಾಗಿದೆ ಚಂದು ಸಿನಿಮಾ ಭವಿಷ್ಯ! 'ಕಾಲಾಯ ತಸ್ಮೈ ನಮಃ'..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.