ಜೈಲಲ್ಲಿ ದರ್ಶನ್-ಧನ್ವೀರ್ ದಿಢೀರ್ ಭೇಟಿ ಸೀಕ್ರೇಟ್ ಕೊನೆಗೂ ಹೊರಬಿತ್ತಾ? 'ಝಣ ಝಣ ಕಾಂಚಾಣ'ದ ವ್ಯವಹಾರ!?

Published : Jul 30, 2026, 10:39 PM IST
Darshan Thoogudeepa  Dhanveer Gowda

ಸಾರಾಂಶ

ಧನ್ವೀರ್​ ಹಾಗು ವಿಜಯಲಕ್ಷ್ಮೀ ಇಬ್ಬರೂ ದರ್ಶನ್​​ಅವರನ್ನ ನೋಡೋಕೆ ಪರಪ್ಪನ ಅಗ್ರಹಾರ ಜೈಲಿಗೆ ಒಟ್ಟಿಗೆ ಹೋಗುತ್ತಿದ್ರು. ದೇವಸ್ಥಾನಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ವಿಜಯಲಕ್ಷ್ಮೀ ಒಂಬೊಂಟಿಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಈಗ ಈ ಮುನಿಸಿಗೆ ಕಾರಣ ಬಹಿರಂಗವಾಗಿದೆ..!

Darshan Thoogudeepa-Dhanveer Gowda Controversy Secret Revealed: ರಾಮನ ಭಂಟ ಹನುಮಂತ ಅನ್ನೋ ಹಾಗೆ ಇದ್ದವರು ನಟ ದರ್ಶನ್ ಹಾಗು ಧನ್ವೀರ್​.. ನಟ ದರ್ಶನ್‌ಗೆ (Darshan Thoogudeeap) ನಟ ಧನ್ವೀರ್ ರಕ್ತ ಸಂಬಂಧಿ ಅಲ್ಲದೇ ಇದ್ರೂ, ಒಡಹುಟ್ಟಿದ ತಮ್ಮನಿಗಿಂತ ಹೆಚ್ಚು ಹತ್ತಿರವಾಗಿದ್ರು. ಆದ್ರೆ ಒಳಗೊಳಗೆ ಅದೇನ್ ಆಯ್ತೋ ಏನೋ..?! ನಟ ಧನ್ವೀರ್ (Dhanveer Gowda) ದರ್ಶನ್​ಅವರಿಂದ ದೂರಾದ್ರು. ಈಗ ದರ್ಶನ್​ರನ್ನ ಧನ್ವೀರ್ ದಿಢೀರ್ ಅಂತ ಜೈಲ್ಲಿ ಭೇಟಿ ಮಾಡಿದ್ದಾರೆ. ಈ ಭೇಟಿ ಹಿಂದಿನ ರಹಸ್ಯ ಏನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ..

ಜೈಲಲ್ಲಿ ದರ್ಶನ್ ಧನ್ವೀರ್ ದಿಢೀರ್ ಭೇಟಿ.. ಏನಿದು ಸೀಕ್ರೇಟ್? ಧನ್ವೀರ್ ನ ಜೈಲಿಗೆ ಕರೆಸಿಕೊಂಡಿದ್ದೇ ದರ್ಶನ್.. ಯಾಕಾಗಿ..?

ಹಳಸಿದ್ದ ಅಣ್ತಮ್ಮಂದಿರ ಸಂಬಂಧ ಮತ್ತೆ ಪ್ಯಾಚಪ್ ಆಯ್ತಾ..?

ನಟ ದರ್ಶನ್ ಜೈಲು ಪಾಲಾದ್ಮೇಲೆ ದಾಸನನ್ನ ಈ ಕೇಸ್​ನಿಂದ ಬಿಡಿಸಿಕೊಳ್ಳೋಕೆ ಶ್ರಮ ಪಟ್ಟವರಲ್ಲಿ ನಟ ಧನ್ವೀರ್ ಕೂಡ ಒಬ್ಬ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಗೆ ದೇವಸ್ಥಾನ, ವಕೀಲರ ಮನೆ, ಜೈಲು ಅಂತ ಓಡಾಡುತ್ತಿದ್ರೋ, ಅವರ ಹಿಂದೆ ಅಕ್ಕ ಪಕ್ಕ ಜೊತೆಯಾಗಿ ಇದ್ದವರು ಧನ್ವೀರ್.. ಆದ್ರೆ ಅದೇನ್ ಆಯ್ತೋ ಏನೋ, ಕಳೆದ ಆರು ತಿಂಗಳಿಂದೀಚೆಗೆ ದಾಸ ಇರೋ ಜೈಲಿಗೆ ಧನ್ವೀರ್ ಹೋಗೋದನ್ನೇ ಮರೆತ್ರು. ವಿಜಯಲಕ್ಷ್ಮಿ ಅಕ್ಕ ಪಕ್ಕ ಎಲ್ಲೂ ಕಾಣಿಸಿಕೊಳ್ಳಲಿಲ್ಲ..

ಹೌದು, ಧನ್ವೀರ್​ಹಾಗು ವಿಜಯಲಕ್ಷ್ಮೀ ದರ್ಶನ್​​ಅವರನ್ನ ನೋಡೋಕೆ ಪರಪ್ಪನ ಅಗ್ರಹಾರ ಜೈಲಿಗೆ ಒಟ್ಟಿಗೆ ಹೋಗುತ್ತಿದ್ರು. ದೇವಸ್ಥಾನಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ವಿಜಯಲಕ್ಷ್ಮೀ ಒಂಬೊಂಟಿಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಮೊನ್ನೆ ಜೈಲಿಗೆ ಹೋದಾಗ ಧನ್ವೀರ್​ರನ್ನ ಬಿಟ್ಟು ರಕ್ಷಿತಾರನ್ನ ಕರೆದುಕೊಂಡು ಹೋಗಿದ್ರು, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋದಾಗ ಒಬ್ಬರೇ ಹೋಗಿ ಬಂದಿದ್ರು.

ಧನ್ವೀರ್ ​ದಾಸ ಇರೋ ಜೈಲಿಗೆ ಹೋಗೋದನ್ನೇ ಮರೆತು ಬಿಟ್ರು. ವಿಜಯಲಕ್ಷ್ಮಿ ಅಂಗರಕ್ಷಕನಂತಿದ್ದ ಧನ್ವೀರ್ ವಿಜಿಯಕ್ಕನ ಅಕ್ಕ ಪಕ್ಕ ಸುಳಿಯೋದನ್ನ ನಿಲ್ಲಿಸಿ ಬಿಟ್ರು. ಇದಕ್ಕೆಲ್ಲಾ ಕಾರಣ ದಾಸ ಜೈಲಿನಿಂದ ಹೊರ ಬರೋದಕ್ಕೆ ಖರ್ಚು ಮಾಡುತ್ತಿದ್ದ ಹಣದಲ್ಲಿ ಅವ್ಯವಹಾರ ಆಗಿದೇ ಅನ್ನೋ ವಿಚಾರ ಗುಲ್ಲಾಗಿತ್ತು. ಇದರಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗು ಧನ್ವೀರ್ ಮಧ್ಯೆ ಮನಸ್ತಾಪ ಆಗಿದೆ ಅಂತ ಹೇಳಲಾಗಿತ್ತು.

ದರ್ಶನ್ ಬುಲಾವ್ ಮೇರೆಗೆ ಜೈಲಿಗೆ ಹೋದ್ರಾ ಧನ್ವೀರ್? ದಾಸನ ಭೇಟಿ‌ ನಂತರ ಧನ್ವೀರ್ ಟಾಂಗ್ ಕೊಟ್ಟಿದ್ಯಾರಿಗೆ..?

ದರ್ಶನ್ ಪತ್ನಿ ವಿಜಯಲಕ್ಷ್ಮೀಯಿಂದ ದೂರ ಉಳಿದಿರೋ ಧನ್ವೀರ್, ಇತ್ತೀಚೆಗೆ ವಿಜಯಲಕ್ಷ್ಮೀ ಅವರು ದರ್ಶನ್ ರನ್ನ ಜೈಲಲ್ಲಿ ಭೇಟಿ ಮಾಡಿ ಬಂದ ಒಂದೇ ವಾರಕ್ಕೆ ದರ್ಶನ್​ರನ್ನ ಭೇಟಿ ಮಾಡಿದ್ದಾರೆ. ಈ ಭೇಟಿ ದರ್ಶನ್​ಅವರ ಯೋಗ ಕ್ಷೇಮ ವಿಚಾರಿಸೋದಕ್ಕೆ ಅಲ್ಲ, ಬದಲಾಗಿ ಆಗಿರೋ ವ್ಯವಹಾರದ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳೋಕೆ ಅನ್ನೋ ವಿಚಾರ ಈಗ ದಾಸನ ಮೂಲಗಳಿಂದ ಹೊರ ಬರ್ತಾ ಇದೆ. ದರ್ಶನ್​ ಬುಲಾವ್ ಮೇರೆಗೆ ಧನ್ವೀರ್ ಜೈಲಿಗೆ ಹೋಗಿದ್ದಂತೆ. ಧನ್ವೀರ್​ಕರೆದು ದರ್ಶನ್ ಬೈದಿದ್ದಾರೆ ಅಂತ ಜೈಲಿನಿಂದ ಮಾಹಿತಿ ಹೊರ ಬಂದಿದೆ.

ಅಂದು ವಿಜಯಲಕ್ಷ್ಮೀ ಹಾಕಿದ್ದ ಪೋಸ್ಟ್​ಇಂದು ಧನ್ವೀರ್ ರಿಪೀಟ್ ಹಾಕಿದ್ದೇಕೆ..?

ಈಗ ದರ್ಶನ್ ಹಾಗೂ ಧನ್ವೀರ್ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಜಗಜ್ಜಾಹಿರಾಗಿದೆ. ಯಾಕಂದ್ರೆ ದರ್ಶನ್ ಭೇಟಿ ಮಾಡಿ ಬಂದ ಬಳಿಕ ಧನ್ವೀರ್​ ಹಾಕಿರೋ ಈ ಪೋಸ್ಟ್.. ಅಂದು ವಿಜಯಲಕ್ಷ್ಮಿ ದರ್ಶನ್ ಅವರು ಹಾಕಿದ್ದ ಪೋಸ್ಟ್ ಅನ್ನೇ ಇಂದು ನಟ ಧನ್ವೀರ್ ಹಾಕಿ ಟಾಂಗ್ ಕೊಟ್ರಾ ಅನ್ನೋ ರೀತಿ ಇದೆ ಈ ಪೋಸ್ಟ್..

'ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ..ಅದು ವಸ್ತುವಾಗಲಿ.. ವ್ಯಕ್ತಿಯಾಗಲಿ..' ಎಂದಿದ್ದು ಯಾರಿಗೆ ಧನ್ವೀರ್..?

ಅಂದ‌ಹಾಗೆ, ದರ್ಶನ್ ಕುಟುಂಬದ ಜೊತೆ ಧನ್ವೀರ್ ಗೆ ವೈಮನಸ್ಸುಂಟಾಗಿದೆ ಅನ್ನೋ ಸುದ್ದಿ ಶುರುವಾದಾಗ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಒಂದು ಪೋಸ್ಟ್ ಹಾಕಿದ್ರು. 'ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ ಅದು ವ್ಯಕ್ತಿಯಾಗಲಿ, ವಸ್ತುವಾಗಿರಲಿ..' ಅಂತ.. ಅದು ಧನ್ವಿರ್ ನಡೆ ಬಗ್ಗೆ ವಿಜಯಲಕ್ಷ್ಮೀ ಹಾಕಿರೋ ಪೋಸ್ಟ್ ಅಂತ ಅಂದು ಹೇಳಲಾಗಿತ್ತು. ಈಗ ಅದೇ ಸಾಲುಗಳನ್ನ ಧನ್ವೀರ್ ಅವರು ದರ್ಶನ್ ಭೇಟಿ ಮಾಡಿ ಬಂದ‌ ನಂತರ ಹಾಕಿದ್ದಾರೆ‌‌. ಅದು ದರ್ಶನ್ ಹಾಗೆ ವಿಜಯಲಕ್ಷ್ಮಿಗೆ ಧನ್ವೀರ್ ಟಾಂಗ್ ಕೊಟ್ಟು ಹಾಕಿರೋ ಪೋಸ್ಟ್‌ ಇರಬಹುದು ಅನ್ನೋ ಚರ್ಚೆ ಹುಟ್ಟಿದೆ.

ಸದ್ಯ ದರ್ಶನ್ ವಿಜಯಲಕ್ಷ್ಮೀ ಹಾಗು ಧನ್ವೀರ್ ಬೇರೆ ಬೇರೆ ಆಗಿರೋದಕ್ಕೆ ಹಲವು ಉದಹಾರಣೆಗಳಂತೂ ಕಣ್ಣಿಗೆ ಕಾಣುತ್ತಿವೆ. ವಿಜಯಲಕ್ಷ್ಮೀ ಜೊತೆ ಧನ್ವೀರ್ ಕಾಣಿಸಿಕೊಳ್ಳುತ್ತಿಲ್ಲ. ದರ್ಶನ್ ನೋಡೋಕೆ ಧನ್ವೀರ್ ಇಷ್ಟು ದಿನ ಜೈಲಿಗೆ ಹೋಗಿಲ್ಲ. ಇದರ ಮಧ್ಯೆ ದರ್ಶನ್ ಭೇಟಿ ಮಾಡಿ ಬಂದ ಕೇಲವೇ ಗಂಟೆಗಳಲ್ಲಿ ಧನ್ವೀರ್ ಮಾರ್ಮಿಕ ಪೋಸ್ಟ್ ಹಾಕಿದ್ದಾರೆ. ಇದೆಲ್ಲವನ್ನ ಡಿಕೋಡ್ ಮಾಡಿದ್ರೆ ಇಲ್ಲೊಂದು ಸಮಸ್ಯೆ ಇದೆ ಅನ್ನೋದು ಗೊತ್ತಾಗುತ್ತಿದೆ. ಆದರೆ ಅದೇನು..? ಗಾಸಿಪ್ ಹಬ್ಬಿರುವಂತೆ 'ಹಣದ ಹೊಳೆ'ಯ ಅವ್ಯವಹಾರವೇ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೂವಲ್ಲ, ಚಿನ್ನವಲ್ಲ... ರಾಧಿಕಾಗೆ 'ಲಂಕಾಧಿಪತಿ ರಾವಣ' ಯಶ್ ಕೊಟ್ಟ ಮೊದಲ ಗಿಫ್ಟ್ ಏನು ಗೊತ್ತಾ?
ಯಶ್ 'ಜಾನು' ಸಿನಿಮಾಗೆ ನಾಯಕನಾದ ಕಥೆ ಬಿಚ್ಚಿಟ್ಟ ನಿರ್ಮಾಪಕ ಜಯಣ್ಣ: ರಾಕಿ ಭಾಯ್ ಆಯ್ಕೆಯ ಹಿಂದಿತ್ತು ಈ ಕಾರಣ!