
ಕನ್ನಡ ಭಾಷೆ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ರಾಜ್ಯೋತ್ಸವಕ್ಕೆ 'ಒಡೆಯ' ಚಿತ್ರದ ಟೀಸರ್ ರಿಲೀಸ್ ಮಾಡಬೇಕೆಂದು ನಿರ್ಧರಿಸಿದ್ದು ಅದನ್ನು ಇಂದು ಆನಂದ್ ಆಡಿಯೋ ಯೋಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ.
ಮಗುವನ್ನು ಎತ್ತಾಡಿಸಿದ 'ಒಡೆಯ'; ಪೋಸ್ಟರ್ ಲುಕ್ ವೈರಲ್!
ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ 'ನಾನು ಅಧಿಕಾರವನ್ನು ಬಯಸಿ ಪಡೆದವನಲ್ಲ. ಅಧಿಕಾರವೇ ನನ್ನ ಆಸೆ ಪಟ್ಟು ಇಲ್ಲಿಗೆ ಕರೆಸಿಕೊಂಡಿದೆ. ಇನ್ನು ಮುಂದೆ ಅಧಿಕಾರವೂ ನನ್ನದೇ. ಆಜ್ಞೆಯೂ ನನ್ನದೇ...' ಎಂದು ಒಡೆಯ ಚಿತ್ರದಲ್ಲಿ ಹೇಳಿರುವ ಡೈಲಾಗ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಅಷ್ಟೇ ಅಲ್ಲದೆ 'ನನ್ನ ಫೇಸ್ ಮಾಡ್ಬೇಕಂದ್ರೆ ಗುಂಡಿಗೆಯಲ್ಲಿ ಧಮ್ ಇರ್ಬೇಕು' ಎಂದು ಕೈಯಲ್ಲಿ ಲಾಂಗ್ ಹಿಡಿದು ಮಾಡಿರುವ ವಾಕ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡುವುದರಲ್ಲಿ ಅನುಮಾನವೇ ಇಲ್ಲ
ಸ್ವಿಸ್‌ನಲ್ಲಿ ಮಂಜುಗಡ್ಡೆ ನಡುವೆ ಡಿ ಬಾಸ್; ಇಲ್ಲಿವೆ ಫೋಟೋಸ್!
"
ಎಂ.ಡಿ. ಶ್ರೀಧರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರಕ್ಕೆ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಹೊಸಬರ ಮುಖಬೇಕೆಂದು ನಟಿಗಾಗಿ ತುಂಬಾ ದಿನಗಳ ಕಾಲ ಹುಡುಕಾಟ ನಡೆಸಿದ್ದು ಕೊನೆಗೂ ರಾಘವಿ ತಿಮ್ಮಯ್ಯ ಆಯ್ಕೆಯಾದರು. ಈಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ರಾಘವಿಗೆ ಚಿತ್ರರಂಗದಲ್ಲಿ ಒಡೆಯನಿಂದ ಬ್ರೇಕ್ ಸಿಗುವುದಂತೂ ಗ್ಯಾರಂಟಿ. ಈ ಚಿತ್ರವು ತಮಿಳಿನ 'ವೀರಂ' ಚಿತ್ರದ ರಿಮೇಕ್ ಆಗಿದ್ದು, ಸದ್ಯದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.