ಹೆಸರು ಬದಲಾಯಿಸಿಕೊಂಡ್ರು ರಂಗಿತರಂಗ ನಟಿ ರಾಧಿಕಾ!

By Web Desk  |  First Published Nov 1, 2019, 11:43 AM IST

ಕನ್ನಡ ಚಿತ್ರರಂಗದಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಕಂಡ ನಂತರ ನಟ-ನಟಿಯರು ಹೆಸರನ್ನು ಡಿಫರೆಂಟ್‌ ಆಗಿ ಬದಲಾಯಿಸಿಕೊಳ್ಳುವುದು ಸಹಜ. ಇದೀಗ ಆ ಸಾಲಿಗೆ ರಂಗಿತರಂಗ ಖ್ಯಾತಿಯ ರಾಧಿಕಾ ಸೇರಿಕೊಂಡಿದ್ದಾರೆ.....


'ರಂಗಿತರಂಗ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಾಧಿಕಾ ಚೇತನ್‌ ಮೊದಲ ಚಿತ್ರದಲ್ಲೇ ಹಿಟ್ ಕಂಡ ನಟಿ. 'U-ಟರ್ನ್', 'ಕಾಫಿತೋಟ', 'ಅಸತೋಮಾ ಸದ್ಗಮಯಾ' ಹಾಗೂ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದಲ್ಲಿ ನಟಿಸಿ ಹಿಟ್‌ ಕಂಡವರು.

ಸಧ್ಯಕ್ಕೆ 'ಮುಂದಿನ ನಿಲ್ದಾಣ' ಹಾಗೂ 'ಚೇಸ್‌' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದು, ಈ ನಡುವೆ ತಮ್ಮ ಹೆಸರಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಅವರ ಹೆಸರು ರಾಧಿಕಾ ಚೇತನ್‌ ಆಗಿತ್ತು. ಈಗ ಅದನ್ನು ರಾಧಿಕಾ ನಾರಾಯಣ್ ಮಾಡಿಕೊಂಡಿದ್ದಾರೆ. ತಮ್ಮ ಎಲ್ಲ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೆಸರನ್ನು ಬದಲಾಯಿಸಿದ್ದಾರೆ. ಆದರೆ, ಹೆಸರು ಬದಲಾಯಿಸಿಕೊಳ್ಳಲು ಕಾರಣ ಕೇಳಿದ ಪತ್ರಕರ್ತರಿಗೆ ಸ್ಮೈಲ್ ಕೊಟ್ಟಿದ್ದಾರೆ, ಬಿಟ್ಟರೆ ರಾಧಿಕಾ ಸೂಕ್ತ ಉತ್ತರವನ್ನು ಕೊಟ್ಟಿಲ್ಲ.

Tap to resize

Latest Videos

undefined

'ಮುಂದಿನ ನಿಲ್ದಾಣ'ದ ಮೂಲಕ ಮರು ಎಂಟ್ರಿಯ ನಿರೀಕ್ಷೆಯಲ್ಲಿ ರಂಗಿತರಂಗ ಬೆಡಗಿ.

ಸೌಂದರ್ಯದಲ್ಲಿ ಹಾಗೂ ಅಭಿನಯದಲ್ಲಿ ತನ್ನದೇ ವೈಶಿಷ್ಟ್ಯತೆ ಹೊಂದಿರುವ ರಾಧಿಕಾ 'ಮುಂದಿನ ನಿಲ್ದಾಣ' ತಮ್ಮ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್‌ ನೀಡಲಿದೆ ಎಂಬ ಭರವಸೆ ಇದೆ. ಈಗಾಗಲೇ ಚಿತ್ರದ ಪೊಸ್ಟರ್, ಟೀಸರ್ ಹಾಗೂ ಹಾಡುಗಳು ಗಮನ ಸಳೆದಿವೆ. 'ಮುಂದಿನ ನಿಲ್ದಾಣ'ದಲ್ಲೊಂದು ಯೂತ್‌ಫುಲ್‌ ಪಯಣದ ಕಥೆ ಹೇಳಲು ನಿರ್ದೇಶಕ ವಿನಯ್ ಭಾರದ್ವಜ್‌ ಸಜ್ಜಾಗಿದ್ದಾರೆ.

ಸ್ಯಾಂಡಲ್‌ವುಡ್ ಖ್ಯಾತ ನಟರಾದ ಡಾ.ರಾಜ್‌ಕುಮಾರ್ ಅವರು ಮೂಲ ಹೆಸರು ಮುತ್ತುರಾಜ್. ಡಾ.ವಿಷ್ಣುವರ್ಧನ್ ತಮ್ಮ ಮೊದಲ ಚಿತ್ರ ನಾಗರಹಾವು ಮಾಡುವಾಗ ಸಂಪತ್ತು ಕುಮಾರ್ ಎಂಬ ಹೆಸರನ್ನೇ ಇಟ್ಟುಕೊಂಡಿದ್ದರು. ಇವರೊಟ್ಟಿಗೆ ಅಮರನಾಥ್ ಎಂಬ ಹೆಸರನ್ನು ಅಂಬರೀಷ್ ಎಂದು ಬದಲಾಯಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ.

ರಮೇಶ್ ಅರವಿಂದ್ ಚಿತ್ರಕ್ಕೆ ಇಬ್ಬರು ನಾಯಕಿಯರು?

ಹಾಗಂತ ನಟಿಯರೇನೂ ಹೆಸರು ಬದಲಾಯಿಸಿಕೊಳ್ಳುವ ಕಾಯಕದಲ್ಲಿ ಹಿಂದೆ ಬಿದ್ದಿಲ್ಲ. ರಚಿತಾ ರಾಮ್ ಮೂಲ ಹೆಸರು ಬಿಂದಿಯಾ ರಾಮ್. ದಿವ್ಯಾ ಸ್ಪಂದನಾ ಎಂಬ ಹೆಸರನ್ನು ರಮ್ಯಾ ಎಂದು ಬದಲಾಯಿಸಿಕೊಂಡರು ಸ್ಯಾಂಡಲ್‌ವುಡ್ ಕ್ವೀನ್. ಶ್ರೀ ದುರ್ಗಾ ಎಂದು ಹೆಸರು ಬದಲಾಯಿಸಿಕೊಂಡ ಕನಸಿನ ರಾಣಿ ಮಾಲಾಶ್ರೀಯಾದರು. ಹರಿಪ್ರಿಯಾ ತಮ್ಮ ಹೆಸರಿನ ಇಂಗ್ಲಿಷ್ ಅಕ್ಷರಗಳನ್ನು ಬದಲಾಯಿಸಿಕೊಂಡಿದ್ದು, PRIYA ಇರುವುದನ್ನು PRRIYA ಎಂದು ಮಾಡಿಕೊಂಡಿದ್ದಾರೆ.

 

ಸಂಖ್ಯಾ ಶಾಸ್ತ್ರ, ಅದೃಷ್ಟ, ಹೆಸರು ಚಿತ್ರರಂಗಕ್ಕೆ ಸೂಟ್ ಆಗೋಲ್ಲ...ಹೀಗೆ ಹಲವು ಕಾರಣಗಳಿಂದ ಈ ನಟರು ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಳ್ಳುವುದು ಕಾಮನ್. ಕೆಲವರಂತೂ ತಮ್ಮ ಮೊದಲ ಚಿತ್ರದ ಪಾತ್ರದ ಹೆಸರನ್ನೇ ಮುಂದವರಿಸುತ್ತಾರೆ. ಒಟ್ಟಿನಲ್ಲಿ ಚಿತ್ರ ನಟರು ತಮ್ಮಿಷ್ಟ ಬಂದಂತೆ ಹೆಸರನ್ನು ಬದಲಾಯಿಸುವುದು ಮಾತ್ರ ಹೊಸ ವಿಷಯವಲ್ಲ ಬಿಡಿ.

click me!