
ಅದು ‘ಕುಥಾಸ್ಥ’ ಚಿತ್ರದ ಪತ್ರಿಕಾಗೋಷ್ಟಿ. ಜತೆಗೆ ಆಡಿಯೋ ಬಿಡುಗಡೆ. ಇಲ್ಲಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾಸ್ಕರ್ ರಾವ್ ಅವರಿಗೆ ಸಿನಿಮಾಗಳಲ್ಲಿ ಕ್ರೈಮ್ ಕತೆಗಳನ್ನು ವೈಭವೀಕರಣ ಮಾಡುತ್ತಿದ್ದಾರೆ. ಹೀರೋಗಳ ಕೈಗೆ ಲಾಂಗು, ಮಚ್ಚು ಕೊಡುತ್ತಿದ್ದಾರೆ. ಪೊಲೀಸರನ್ನು ಒಂದು ಹಂತದಲ್ಲಿ ಕೀಳಾಗಿ ತೋರಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ.
ಪಾರದರ್ಶಕತೆ ಜಾರಿಗೆ ತರಲು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ಸಿನಿಮಾಗಳಿಂದ ಕ್ರೈಮ್ ಘಟನೆಗಳು ಹೆಚ್ಚಾಗುತ್ತಿವೆ. ಸಿನಿಮಾ ನೋಡಿ ಹೇಗೆ ಕೊಲೆ ಮಾಡಬೇಕು, ಅಪರಾಧ ಮಾಡಿದ ಮೇಲೆ ಯಾವ ರೀತಿ ಅದರಿಂದ ತಪ್ಪಿಸಿಕೊಳ್ಳಬೇಕು ಎಂಬುದನ್ನು ಕಲಿಯುತ್ತಿದ್ದಾರೆ. ಹೀಗಾಗಿ ಹೀರೋಗಳ ಕೈಗೆ ಸಿನಿಮಾಗಳಲ್ಲಿ ಲಾಂಗ್ ಕೊಡಬೇಡಿ. ಜತೆಗೆ ಕ್ರೌರ್ಯ ಘಟನೆಗಳನ್ನೂ ವೈಭವೀಕರಣ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು ಭಾಸ್ಕರ್ ರಾವ್. ಜತೆಗೆ ‘ಕುಥಸ್ಥ’ ಹಾಡಿನಲ್ಲಿ ಸಾಧಕರೊಬ್ಬರ ಹೆಣ ತೋರಿಸಿದ್ದನ್ನು ಪ್ರಶ್ನಿಸಿ, ಸಾಧಕರ ಒಳ್ಳೆಯ ಮುಖಗಳನ್ನು ತೋರಿಸಿ, ಅವರ ಮೃತ ದೇಹಗಳನ್ನು ತೆರೆ ಮೇಲೆ ಬಿಂಬಿಸಬೇಡಿ ಎಂದರು.
ಬೆಂಗ್ಳೂರು ಟ್ರಾಫಿಕ್ ಕಿರಿಕಿರಿ: ಜಂಕ್ಷನ್ ಕ್ಲಿಯರ್‌ಗೆ ಕಮಿಷನರ್ ಸಲಹೆ ಕೇಳ್ಯಾರ್ ರೀ!
ಪೊಲೀಸ್ ಅಧಿಕಾರಿ ಈ ಕಿವಿ ಮಾತುಗಳೊಂದಿಗೆ ಆಡಿಯೋ ಬಿಡುಗಡೆ ಮಾಡಿಕೊಂಡ ‘ಕುಥಾಸ್ಥ’ ಚಿತ್ರದ ನಿರ್ದೇಶಕ ಹಾಗೂ ಪ್ರಮುಖ ಪಾತ್ರಧಾರಿ ಅರ್ಜುನ್ ಕೌಂಡಿನ್ಯ ಅವರು. ಇದು ಅವರಿಗೆ ಮೊದಲ ಸಿನಿಮಾ. ‘ಕುಥಸ್ಥ’ ಎಂದರೆ ಹಣೆಬರಹ ಎನ್ನುವ ಅರ್ಥವಿದೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಿದು. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಸಂಚಿನಿಂದ ಸರ್ಕಾರಿ ನೌಕರನ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ. ಯಾಕೆ ಹೀಗೆ ಬಿಂಬಿಸುತ್ತಾರೆ. ಅದಕ್ಕೆ ಚಿತ್ರದಲ್ಲಿ ಏನು ಹೇಳಲಾಗಿದೆ.
ಮನಸು ಕದ್ದ ಈ ನಟಿಗೆ ಹುಟ್ಟುವಾಗ ಹೃದಯದಲ್ಲಿ ಹೋಲ್ ಇತ್ತಂತೆ..!
ನಿಷೇಧಿತ ಅರಣ್ಯ ಪ್ರದೇಶಕ್ಕೆ ಹೋಗಿದ್ದು ಯಾಕೆ, ಅನೆ ಗುಡ್ಡದಲ್ಲಿ ಹೂತು ಹಾಕಿದ ದೇಹ ಯಾರದ್ದು ಹೀಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅವುಗಳಿಗೆ ಉತ್ತರ ಹುಡುಕುತ್ತ ಸಾಗುತ್ತದೆ ಈ ಸಿನಿಮಾ. ನಿರ್ದೇಶಕ ಅರ್ಜುನ್ ಕೌಂಡಿನ್ಯ ಅವರು ಕಂಡ ಕತೆಯೊಂದನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದಾರಂತೆ. ನವೀನ್, ಖುಷಿ ಚಂದ್ರಶೇಖರ್, ಪ್ರಿಯಾಪಾಂಡೆ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಕವಿರಾಜ್, ಶಂಕರಮೂರ್ತಿ ಅವರು ಗೀತೆಗಳನ್ನು ರಚಿಸಿದ್ದು, ರವಿಶಂಕರ್, ಕಿರಣ್ ವರ್ಷಿತ್, ಪ್ರಣವ್ ಅಯ್ಯಂಗಾರ್ ಸಂಗೀತ ನೀಡಿದ್ದಾರೆ. ಲಹರಿ ಆಡಿಯೋ ಮೂಲಕ ಚಿತ್ರದ ಹಾಡುಗಳನ್ನು ಮಾರುಕಟ್ಟೆಮಾಡಲಾಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.