'ಶಿವಪ್ಪ ಕಾಯೋ ತಂದೆ' ಎಂದು ಕೊಟ್ಟಿಯೂರು ಶಿವಾಲಯಕ್ಕೆ ಹೋದ ದರ್ಶನ್ ಫ್ಯಾನ್ಸ್‌ಗೆ ಆಗಿದ್ದೇನು?

Published : Jun 10, 2026, 05:48 PM IST
Darshan Thoogudeepa Kottiyoor Shiva Temple

ಸಾರಾಂಶ

‘ಇಲ್ಲಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ, ಇಲ್ಲಿಗೆ ಬರಬೇಡಿ’ ಅಂತ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹರಿಬಿಡ್ತಾ ಇದ್ದಾರೆ. ಅಷ್ಟಕ್ಕೂ ನಿಮಗ್ಯಾರು ಅಲ್ಲಿಗೆ ಹೋಗ್ಲಿಕ್ಕೆ ಹೇಳಿದ್ರು ಅಂದ್ರೆ ಇವರು ರಿಷಬ್, ದರ್ಶನ್ ರನ್ನ ನೋಡಿ ಹೋದ್ವಿ ಅಂತಾರೆ. ಎನೆಲ್ಲಾ ಪರದಾಟ ಅನುಭವಿಸಿದ್ರು ನೋಡಿ..!

'ದರ್ಶನ್' ಹೋಗಿದ್ದು ನೋಡಿ ಕೊಟ್ಟಿಯೂರು ದರ್ಶನಕ್ಕೆ ಹೊರಟ ಫ್ಯಾನ್ಸ್..!

ಕಳೆದ ವರ್ಷ ಕೇರಳಂನ ಕೊಟ್ಟಿಯೂರು ಶಿವ ದೇಗುಲಕ್ಕೆ ದರ್ಶನ್ (Darshan Thoogudeepa) ಭೇಟಿ ಕೊಟ್ಟಿದ್ರು. ರಿಷಬ್ ಶೆಟ್ಟಿ ಕೂಡ ಅಲ್ಲಿನ ವೈಶಾಖ ಮಹೋತ್ಸವದಲ್ಲಿ ಭಾಗಿಯಾಗಿದ್ರು. ದರ್ಶನ್, ರಿಷಭ್ ಭೇಟಿ ಬಳಿಕ ಕರ್ನಾಟಕದಲ್ಲಿ ಈ ದೇಗುಲದ ಬಗ್ಗೆ ಸಿಕ್ಕಾಪಟ್ಟೆ ಪ್ರಚಾರ ಆಗಿತ್ತು. ಆದ್ರೆ ಸೆಲೆಬ್ರಿಟಿಗಳು ಹೋದ ದೇಗುಲಕ್ಕೆ ಹೋದ ಭಕ್ತರು ಈಗ ಯಾಕಾದ್ರೋ ಅಲ್ಲಿಗೆ ಹೋದ್ವಿ ಅಂತಿದ್ದಾರೆ.

ದರ್ಶನ್, ರಿಷಬ್ ಭೇಟಿ ಕೊಟ್ಟ ದೇಗುಲಕ್ಕೆ ಭಕ್ತರ ದಂಡು..!

ಕೊಟ್ಟಿಯೂರು ಶಿವನ ದರ್ಶನಕ್ಕೆ ಹೋಗಿ ಪರದಾಡಿದ ಫ್ಯಾನ್ಸ್

ಯೆಸ್ ಕಳೆದ ವರ್ಷ ಜಾಮೀನಿನ ಮೇಲೆ ರಿಲೀಸ್ ಆಗಿದ್ದ ದರ್ಶನ್, ತಮ್ಮ ಪತ್ನಿ ಜೊತೆಗೆ ಕೇರಳಂನ ಕೊಟ್ಟಿಯೂರು ಶಿವ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ರು. ಕರ್ನಾಟಕದ ಜನತೆಗೆ ಇದು ಅಷ್ಟಾಗಿ ಪರಿಚಿತವಲ್ಲದ ದೇಗುಲ. ಅಷ್ಟಕ್ಕೂ ದಟ್ಟ ಅರಣ್ಯದ ನಡುವೆ ಇರೋ ದೇಗುಲ ವರ್ಷದಲ್ಲಿ ಒಂದೇ ಒಂದು ತಿಂಗಳು ಮಾತ್ರ ತೆಗೆದಿರುತ್ತೆ.

ಪೌರಾಣಿಕ ಹಿನ್ನೆಲೆಯುಳ್ಳ ಈ ದೇಗುಲಕ್ಕೆ ಒಮ್ಮೆ ಭೇಟಿ ಕೊಡಿ ಅಂತ ದರ್ಶನ್​ಗೆ ಜ್ಯೋತಿಷಿಯೊಬ್ರು ಸೂಚಿಸಿದ್ರಂತೆ. ಅವರ ಮಾತಿನಂತೆ ಪತ್ನಿ ಸಮೇತರಾಗಿ ಕೊಟ್ಟಿಯೂರಿಗೆ ಭೇಟಿ ಕೊಟ್ಟಿದ್ರು ದರ್ಶನ್.

ಇನ್ನೂ ಕಾಂತಾರ ಚಾಪ್ಟರ್ 1 ಸಿನಿಮಾದ ರಿಲೀಸ್​ಗೂ ಮುನ್ನ ರಿಷಬ್ ಶೆಟ್ಟಿ ಕೂಡ ಕುಟುಂಬ ಸಮೇತರಾಗಿ ಕೊಟ್ಟಿಯೂರಿಗೆ ಹೋಗಿದ್ರು. ಇಲ್ಲಿ ನಡೆಯೋ ವೈಶಾಖ ಮಹೋತ್ಸವದಲ್ಲಿ ಭಾಗಿಯಾಗಿದ್ರು.

ಇಷ್ಟು ದೊಡ್ಡ ಸೆಲೆಬ್ರಿಟಿಗಳು ಇಲ್ಲಿಗೆ ಹೋಗ್ತಾರೆ ಅಂದ್ರೆ, ಇಲ್ಲೇನೋ ಪವರ್ ಇರಬೇಕು ಅಂದುಕೊಂಡು ಈ ವರ್ಷ ಸಾವಿರಾರು ಫ್ಯಾನ್ಸ್ ಇಲ್ಲಿಗೆ ಭೇಟಿ ಕೊಡೋದಕ್ಕೆ ಶುರುಮಾಡಿದ್ದಾರೆ.

ಇದು ಕಾಡಿನ ಮಧ್ಯೆ ಇರೋ ದೇಗುಲ

ಅಷ್ಟಕ್ಕೂ ಇದು ಕಾಡಿನ ಮಧ್ಯೆ ಇರೋ ದೇಗುಲ. ಇಲ್ಲಿ ದೇವಸ್ಥಾನಕ್ಕೆ ಅಂತ ಕಟ್ಟಡ ಕೂಡ ಇಲ್ಲ. ಆದ್ರೆ ತಲೆ ತಲೆಮಾರುಗಳಿಂದ ಇಲ್ಲಿ ಪರಶಿವನಿಗೆ ವಿಶೇಷ ಪದ್ದತಿಗಳ ಅನುಸಾರ ಪೂಜೆ ಸಲ್ಲಿಸ್ತಾ ಬಂದಿದ್ದಾರೆ.

ಆದ್ರೆ ಸೆಲೆಬ್ರಿಟಿಗಳು ಹೋದರು ಅಂತ ಏಕಾಏಕಿ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ನುಗ್ಗಿರುವ ಭಕ್ತರು, ಈಗ ಶಿವಪ್ಪ ಕಾಯೋ ತಂದೆ ಅಂತ ಪರದಾಡ್ತಾ ಸೋಷಿಯಲ್ ಮಿಡಿಯಾಗಳನ್ನ ಹರಿಬಿಡ್ತಾ ಇದ್ದಾರೆ.

ಇಲ್ಲಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ , ಇಲ್ಲಿಗೆ ಬರಬೇಡಿ ಅಂತ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹರಿಬಿಡ್ತಾ ಇದ್ದಾರೆ. ಅಷ್ಟಕ್ಕೂ ನಿಮಗ್ಯಾರು ಅಲ್ಲಿಗೆ ಹೋಗ್ಲಿಕ್ಕೆ ಹೇಳಿದ್ರು ಅಂದ್ರೆ ಇವರು ರಿಷಬ್, ದರ್ಶನ್ ರನ್ನ ನೋಡಿ ಹೋದ್ವಿ ಅಂತಾರೆ.

ಒಟ್ಟಿನಲ್ಲಿ, ದರ್ಶನ್ ಹೋಗಿದ್ದು ನೋಡಿ ಶಿವನ ದರ್ಶನಕ್ಕೆ ಹೋದವರಿಗೆ 'ನರಕ ದರ್ಶನ' ಆಗ್ತಾ ಇದೆ ಎನ್ನುವ ಸುದ್ದಿ ಹರಿದಾಡ್ತಾ ಇದೆ!

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿಚ್ಚ ಸುದೀಪ್‌ ಮೆಚ್ಚಿದ ಅಸಲಿ ಪಚ್ಚ ಪ್ರಶಾಂತ್‌ ಹಿರೇಮಠ: ಯಾರು ಈ ಹೊಸ ಖಳನಟ?
ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್