ದರ್ಶನ್ ಹುಟ್ಟುಹಬ್ಬಕ್ಕೂ ಒಂದು ವಾರ ಮುನ್ನವೇ ಧಮಾಕಾ. ಕಾಟೇರ ಯಾರೆಲ್ಲಾ ನೋಡಿಲ್ಲ ಈಗ ಬಂಪರ್ ಆಫರ್....
ದರ್ಶನ್ ನಟನೆಯ ‘ಕಾಟೇರ’ ಚಿತ್ರ ಫೆ.9ರಿಂದ ಜೀ5 ಓಟಿಟಿಯಲ್ಲಿ ಪ್ರಸಾರವಾಗಲಿದೆ. ಫೆ.16ಕ್ಕೆ ದರ್ಶನ್ ಜನ್ಮದಿನ. ಅದಕ್ಕೂ ವಾರ ಮೊದಲೇ, ದರ್ಶನ್ ನಟನಾ ಜರ್ನಿಯಲ್ಲೇ ಅತ್ಯಧಿಕ ಗಳಿಕೆ ಮಾಡಿರುವ ಈ ಚಿತ್ರ ಓಟಿಟಿಗೆ ಬರುತ್ತಿದೆ.
ತರುಣ್ ಕಿಶೋರ್ ಸುಧೀರ್ ನಿರ್ದೇಶನದ, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದಲ್ಲಿ ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿ ಮೂರನೇ ವಾರಕ್ಕೇ 200 ಕೋಟಿ ರು. ಗೂ ಅಧಿಕ ಕಲೆಕ್ಷನ್ ಗಳಿಸುವ ಮೂಲಕ ಈ ಚಿತ್ರ ಹೊಸ ದಾಖಲೆ ಬರೆದಿದೆ. ಈಗಲೂ ಈ ಚಿತ್ರ 196 ಚಿತ್ರಮಂದಿರ ಹಾಗೂ 63 ಮಲ್ಟಿಫ್ಲೆಕ್ಸ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಿದ್ದರೂ ಒಪ್ಪಂದ ಪ್ರಕಾರ ಓಟಿಟಿಗೆ ಬರಲು ಸಜ್ಜಾಗಿದೆ.
Kaatera Collection: ರಿಲೀಸ್ ಆದ 18 ದಿನಕ್ಕೆ 200 ಕೋಟಿ ಕ್ಲಬ್ ಸೇರಲು ಸಿದ್ಧನಾದ ಕಾಟೇರ..!
'ಕತೆಯ ಸೂಕ್ಷ್ಮತೆಯನ್ನು ಮನಸ್ಸಲ್ಲಿಟ್ಟುಕೊಂಡೇ ಕೆಲವು ಸನ್ನಿವೇಶಗಳಲ್ಲಿ ದರ್ಶನ್ ಅವರ ಅಭಿಮಾನಿಗಳಿಗೆ ಖುಷಿ ಕೊಡುವ ಸಂಭಾಷಣೆಗಳನ್ನೇ ನಾನು ಬರೆಯಬೇಕಿತ್ತು. ಅದಕ್ಕೆ ಪೂರಕವಾದ ದೃಶ್ಯಗಳಲ್ಲಿ ಅದೇ ಥರದ ಡೈಲಾಗ್ ಬರೆದೆ. ಉದಾಹರಣೆಗೆ ಮೆಶಿನ್ ಮಚ್ಚು ಮಾರಾಟ ಮಾಡುವವನು ಬಂದಾಗ ಹೇಳುವ ಮಾತು, ಮಚ್ಚು ಒಡವೆ ಥರ ಕಾಣಿಸಬಾರದು, ಒಡೆಯೋ ಥರ ಕಾಣಿಸಬೇಕು. ಎಲ್ಲಾ ಹಾವುಗಳು ತಲೆ ಎತ್ತುತ್ತವೆ, ಆದರೆ ಕಾಳಿಂಗ ಸರ್ಪ ಮಾತ್ರ ಹೆಡೆ ಎತ್ತುತ್ತದೆ, ಗಂಡ್ಸಾದವನ ಬೆವರು ಸುರಿಸಬೇಕು- ಜೊಲ್ಲು ಸುರಿಸಬಾರದು. ಸೂಕ್ಷ್ಮವಾಗಿ ಬರೆದಾಗ ಎಲ್ಲರಿಗೂ ಆ ಮಾತು ಇಷ್ಟವಾಗುತ್ತದೆ. ಅದೇ ಪ್ರಕಾರ ಈ ಮಾತುಗಳು ಎಲ್ಲರಿಗೂ ತಲುಪಿವೆ' ಎಂದು ನ್ನೆಲೆಯಲ್ಲಿ ಸಂಭಾಷಣಾಕಾರ ಮಾಸ್ತಿ ಹೇಳಿದ್ದರು.