ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್‌ಗಳಲ್ಲೊಂದು. ಈ ಜೋಡಿ ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಖುಷಿ. ಇವರ ರೀಲ್ಸ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಏನದು ರೀಲ್ಸ್?
ಪ್ರತೀ ಚಿತ್ರರಂಗಗಳಲ್ಲೂ ಕೆಲವು ಕ್ಯೂಟ್ ಜೋಡಿಗಳಿರುತ್ತವೆ. ಆ ಜೋಡಿಗಳು ಇಂಟರ್‌ನೆಟ್‌ನಲ್ಲಿ ಆಗಾಗ ರೀಲ್ಸ್ ಮಾಡುವ ಮೂಲಕವೋ, ಜೊತೆಗಿರುವ ವಿಡಿಯೋ ಪ್ರಕಟಿಸುವ ಮೂಲಕವೋ ತಾರುಣ್ಯದ ಮನಸ್ಸುಗಳನ್ನು, ಆಸೆಯನ್ನೋ ಪ್ರೀತಿಯನ್ನೋ ಹುಟ್ಟಿಸುತ್ತವೆ. ಅಂಥಾ ಒಂದು ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ.
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಇತ್ತೀಚೆಗೆ ಥಾಯ್‌ಲ್ಯಾಂಡಿಗೆ ಪ್ರವಾಸ ಹೋಗಿದ್ದರು. ಪ್ರವಾಸ ಹೋಗಿದ್ದಾಗ ಅವರು 74ನೇ ಅಂತಸ್ತಿನ ಮಹಡಿ ಮೇಲೆ ಹೋಗಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ಆ 74 ಅಂತಸ್ತಿನ ಮೇಲೆ ಗ್ಲಾಸ್‌ನಿಂದ ರಚಿಸಿರುವ ನೆಲವಿದೆ. ಅದರ ಮೇಲೆ ನಿಂತು ನೆಲ ನೋಡಿದರೆ ಪಾತಾಳದಂತೆ ಭಾಸವಾಗುತ್ತದೆ. ಮಜಾ ಇರುವುದು ಅಲ್ಲಿ. ಡಾರ್ಲಿಂಗ್ ಕೃಷ್ಣ ಏನೋ ಧೈರ್ಯದಿಂದ ಹೋಗಿದ್ದಾರೆ. ಆದರೆ ಮಿಲನಾಗೆ ಮಾತ್ರ ಎತ್ತರ ಜಾಗವೆಂದರೆ ಎಲ್ಲಿಲ್ಲದ ಭಯ. ನೆಲ ನೋಡಿದರೆ ಕಣ್ಣು ಕತ್ತಲಾಗುತ್ತದೆ. ಆದರೆ ಹೆಂಡತಿಯನ್ನು ಬಿಟ್ಟು ಹೋಗುವುದಕ್ಕೆ ಕೃಷ್ಣಂಗೋ ಮನಸ್ಸಿಲ್ಲ. ಅದಕ್ಕೆ ಕೃಷ್ಣ ಒತ್ತಾಯದಿಂದ ಮಿಲನಾರನ್ನು ತಬ್ಬಿಕೊಂಡೇ ಗ್ಲಾಸಿನ ಮೇಲೆ ಕರೆದೊಯ್ಯುತ್ತಾರೆ. ಆದರೆ ಮಿಲನಾ ನೆಲ ನೋಡುವುದಕ್ಕೆ ಅಂಜುತ್ತಾರೆ. ಅನಂತರ ಕೃಷ್ಣ ಮಿಲನಾರಿಗೆ ತೊಂದರೆ ಕೊಡದೇ ಕಳುಹಿಸಿಕೊ ಡುತ್ತಾರೆ.
ಈ ರೀಲ್ಸ್‌ಗೆ 10 ಕೋಟಿ ವ್ಯೂಸ್ ಸಿಕ್ಕಿದೆ. ಬಹುಶಃ ಕನ್ನಡ ರೀಲ್ಸ್‌ಗೆ ಸಿಕ್ಕ ಅತಿ ಹೆಚ್ಚು ವ್ಯೂ ಅಂದ್ರೆ ಇದೇ ಇರಬಹುದೆಂದು ನೆಟ್ಟಿಗರು ಹೇಳುತ್ತಿದ್ದಾರೆ. ಹಾಗಾದರೆ ಈ ರೀಲ್ಸ್ ಇಷ್ಟೊಂದು ಜನಪ್ರಿಯತೆ ಗಳಿಸಿದ್ದು ಹೇಗೆ? ಅದಕ್ಕೂ ಒಂದು ಕಾರಣವಿದೆ.
ಇಟಲಿಯಲ್ಲಿ ಕೃಷ್ಣ ಮಿಲನಾ; ಮಂಡ್ಯ ಮೈಸೂರು ಕಡೆ ಬಾರಣ್ಣ ಎಂದ ನೆಟ್ಟಿಗರು!
ಡಾರ್ಲಿಂಗ್ ಕೃಷ್ಣಾ ಮತ್ತು ಮಿಲನಾ ನಾಗರಾಜ್ ಪತಿ-ಪತ್ನಿ ಎಂಬ ಕಾರಣಕ್ಕೆ ಜನಪ್ರಿಯರಾಗಿಲ್ಲ. ಅವರಿಬ್ಬರು ತರುಣ, ತರುಣಿಯರ ಮನಸ್ಸು ಗೆದ್ದಿದ್ದು ಲವ್ ಮಾಕ್‌ಟೇಲ್ ಸಿನಿಮಾದ ಮೂಲಕ. ಅಲ್ಲಿ ಕೃಷ್ಣ ಲವ್ ಬ್ರೇಕಪ್ ಆಗಿ, ಕೊರಗಿ ಒದ್ದಾಡುವ ತರುಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅವನನ್ನು ಅಪಾರವಾಗಿ ಪ್ರೀತಿಸುವ ನಿಧಿಮಾ ಎಂಬ ಹುಡುಗಿಯ ಪಾತ್ರದಲ್ಲಿ ಮಿಲನಾ ಕಾಣಿಸಿದ್ದರು. ಆ ಸಿನಿಮಾದಲ್ಲಿ ಆ ಜೋಡಿಯ ಅಪಾರ ಪ್ರೀತಿಯನ್ನು ನೋಡಿ ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಲವ್ (Love) ಆಗಿತ್ತು. ಅದೇ ಪ್ರೀತಿಯನ್ನೂ ಈಗಲೂ ತೋರಿಸುತ್ತಿದ್ದಾರೆ. ಇದೊಂದೇ ರೀಲ್ ಅನ್ನು ನೂರಾರು ಸಾರಿ ನೋಡಿದವರೂ ಇದ್ದಾರೆಂಬುವುದು ಕಮೆಂಟ್ಸ್ ನೋಡಿದರೆ ಗೊತ್ತಾಗುತ್ತೆ. ರೀಲ್ ಒಂದಕ್ಕೆ ಅಭಿಮಾನಿಗಳು ಈ ಪಾಟಿ ಪ್ರೀತಿ ತೋರಿದ್ದಕ್ಕೆ ಥ್ಯಾಂಕ್ಸ್ ಎಂದು ಹೇಳಿದ್ದಾರೆ ಡಾರ್ಲಿಂಗ್ ಕೃಷ್ಮ. ಅದಕ್ಕೆ ಪ್ರತಿಕ್ರಿಯೆ ತೋರಿರುವ ಮಿಲನಾ 100 ಮಿಲಿಯನ್ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಮೆಂಟ್ಸ್‌ನಲ್ಲಿ ನಿಧಿಮಾ ನನ್ನ ಎಮೋಷನ್ ಎಂದು ಹೇಳಿದ್ದಾರೆ. ಬ್ರೇಕ್ ಅಪ್ ಆದವನ ಬಾಳಲ್ಲಿ ನಿಧಿಮಾನಂಥ ಹುಡುಗಿ ಸಿಕ್ಕಬಾರದೇ ಎಂಬುವುದು ಪ್ರತಿಯೊಬ್ಬ ದೇವದಾಸನ ಆಶಯವಾಗಿರುತ್ತೆ. ಅದಕ್ಕೆ ಲವ್ ಮಾಕ್ಟೈಲ್ ಯುವ ಜನರ ಮನಸ್ಸು ಕದ್ದು ಹೆಚ್ಚು ಹತ್ತಿರವಾಗಿತ್ತು. ಅದೇ ಕಾರಣದಿಂದಲೇ ಈ ಜೋಡಿ ಕ್ಯೂಟ್ ಕಪಲ್, ಅವರು ಮಾಡೋ ರೀಲ್ಸ್ ಎಲ್ಲರಿಗೂ ಇಷ್ಟವೆಂಬುವುದು ಸ್ಪಷ್ಟವಾಗುತ್ತದೆ.
ಡಾರ್ಲಿಂಗ್ ಜೋಡಿ ಜೊತೆ ಥೈಲ್ಯಾಂಡ್‌ನಲ್ಲಿ ಅಮೃತಾ, ಸುಶ್ಮಿತಾ, ರಚೆಲ್ ಮಸ್ತ್ ಮಜಾ
ಅಲ್ಲದೇ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಯಾವಾಗಲೂ ಕಿತ್ತಾಡಿಕೊಂಡು, ಪ್ರೀತಿ ತೋರಿಸಿಕೊಂಡು ಆದರ್ಶ ದಂಪತಿ ಥರ ಸೋಷಿಯಲ್ ಮೀಡಿಯಾದಲ್ಲಿ (Social Media) ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಿಂದಾಗಿಯೇ ಪ್ರೀತಿ ಹಂಚುತ್ತಿರುತ್ತಾರೆ. ಅವರ ಪ್ರೀತಿ ಚಿರಾಯುವಾಗಲಿ.