ಮಿಲನಾ ನಾಗರಾಜ್‌ ರಿಯಲ್ ಲೈಫ್‌ ಸ್ಟೋರಿ ತೆರೆ ಮೇಲೆ; 'ಮಿಲಿ'ಗೆ ಕೃಷ್ಣ ನಿರ್ದೇಶನ!

Suvarna News   | Asianet News
Published : Mar 28, 2021, 03:55 PM IST
ಮಿಲನಾ ನಾಗರಾಜ್‌ ರಿಯಲ್ ಲೈಫ್‌ ಸ್ಟೋರಿ ತೆರೆ ಮೇಲೆ; 'ಮಿಲಿ'ಗೆ ಕೃಷ್ಣ ನಿರ್ದೇಶನ!

ಸಾರಾಂಶ

ಈಜು ಪಟು ಪಾತ್ರದಲ್ಲಿ ಮಿಲನಾ ನಾಗರಾಜ್. ಮಡದಿಯ ರಿಯಲ್ ಲೈಫ್‌ ಸ್ಟೋರಿಗೆ ಕೃಷ್ಣನೇ ಡೈರೆಕ್ಟರ್....

ಅದ್ಧೂರಿಯಾಗಿ ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ಫೇವರೆಟ್‌ ಕಪಲ್ ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್ ಕೃಷ್ಣ ಇದೀಗ ಹೊಸ ಚಿತ್ರಕತೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇಂಗ್ಲಿಷ್ ದೈನಿಕವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಿಲನಾ ಚಿತ್ರದ ಟೈಟಲ್ ಹಾಗೂ ಕತೆ ಆಯ್ಕೆ ಆಗಿದ್ದು ಹೇಗೆ ಎಂದು ರಿವೀಲ್ ಮಾಡಿದ್ದಾರೆ.

ಕೃಷ್ಣ - ಮಿಲನ ಹೊಸ ಗಾಸಿಪ್ : ಏನದು..?

ಲವ್ ಮಾಕ್ಟೇಲ್‌ನಲ್ಲಿ ಕಂಡ ನಿಧಿಮಾ ಪಾತ್ರಕ್ಕೆ 80% ಮಿಲನಾ ನಾಗರಾಜ್‌ ಪ್ರೇರಣೆ  ಎಂಬುದರ ಬಗ್ಗೆ ಬಹುತೇಕ ಸಂದರ್ಶನದಲ್ಲಿ ಕೃಷ್ಣ ಹೇಳಿದ್ದರು. ಮಿಲನಾ ರಿಯಲ್ ವ್ಯಕ್ತಿತ್ವಕ್ಕೆ ಫಿದಾ ಆದ ಜನರಿಗೆ ಮಿಲನಾ ರಿಯಲ್ ಲೈಫ್ ಪರಿಚಯ ಮಾಡಿಕೊಡಬೇಕೆಂದು ಇದೀಗ 'ಮಿಲಿ' ಶೀರ್ಷಿಕೆಯಲ್ಲಿ ಟೈಟಲ್ ಸಿದ್ಧವಾಗುತ್ತಿದೆ.

ಮಿಲನಾ ನಿಜ ಜೀವನದಲ್ಲಿ ಅತ್ಯುತ್ತಮ ಈಜುಗಾರ್ತಿಯಂತೆ.  ರಾಷ್ಟ್ರಮಟ್ಟದಲ್ಲಿ ಗೋಲ್ಡ್‌ ಮೆಡಲ್  ಗಿಟ್ಟಿಸಿಕೊಂಡಿದ್ದಾರೆ. ಇದೇ ವಿಚಾರವನ್ನು ಹೈಲೈಟ್ ಮಾಡಿ ಚಿತ್ರಕತೆ ತಯಾರಿ ಮಾಡಲಾಗುತ್ತಿದೆ. ಲವ್‌ ಮಾಕ್ಟೀಲ್ 2 ಬಿಡುಗಡೆಯಾದ ನಂತರ 'ಮಿಲಿ' ಚಿತ್ರಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ.

ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೃಷ್ಣ-ಮಿಲನಾ; ಮದುವೆ ಹೇಗಿತ್ತು! 

'ನನ್ನ ತಂದೆ ಬೆಳಗ್ಗೆ 4 ಗಂಟೆಗೆ ಎದ್ದು ನನ್ನನ್ನು ರನ್ನಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಈ ಬಗ್ಗೆ ನಾನು ಕೃಷ್ಣ ಜೊತೆ ಮಾತನಾಡಿದ್ದೇ ಮತ್ತು ಸಿನಿಮಾ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ವರ್ಕೌಟ್ ಮುಗಿಸಿ ಇಬ್ಬರೂ ಈಗಲೂ ಈಜುತ್ತೇವೆ.  ನಾನು ಸ್ವಿಮ್ಮಿಂಗ್‌ನಲ್ಲಿ ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತೆ ಎಂದು ಕೃಷ್ಣಗೂ ಗೊತ್ತಿದೆ. ಹಾಗಾಗಿ ಈ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದೇವೆ,' ಎಂದು ಮಿಲನಾ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?