ಚಿರು ಸರ್ಜಾ ರಣಂ ಚಿತ್ರ ವಿಮರ್ಶೆ: ಕತೆ ಅಸಾಧಾರಣಂ ಹೋರಾಟ ಸಕಾರಣಂ

By Suvarna NewsFirst Published Mar 27, 2021, 3:02 PM IST
Highlights

ಕತೆ ಅಸಾಧಾರಣಂ ಹೋರಾಟ ಸಕಾರಣಂ | ಚಿರು ಸರ್ಜಾ ಅಭಿನಯದ ರಣಂ ಸಿನಿಮಾ ವಿಮರ್ಶೆ

- ಆರ್ ಕೇಶವಮೂರ್ತಿ

ಚಿತ್ರ: ರಣಂ, ತಾರಾಗಣ: ಚಿರಂಜೀವಿ ಸರ್ಜಾ, ಚೇತನ್, ವರಲಕ್ಷ್ಮೀ ಶರತ್‌ಕುಮಾರ್, ದೇವ್ ಗಿಲ್, ಸಾ‘ು ಕೋಕಿಲ, ಬುಲೆಟ್ ಪ್ರಕಾಶ್, ಮ‘ುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್, ಬೆಸೆಂಟ್ ರವಿ

ನಿರ್ದೇಶನ: ವಿ ಸಮುದ್ರ, ನಿರ್ಮಾಣ: ಆರ್ ಶ್ರೀನಿವಾಸ್, ಛಾಯಾಗ್ರಾಹಣ: ನಿರಂಜನ್ ಬಾಬು , ಸಂಗೀತ: ರವಿಶಂಕರ್ ಎಸ್. ಚಿನ್ನ

‘ಪೊರಕೆ ಹಿಡಿದು ಕಸ ಗುಡಿಸಿ ಪೋಸು ಕೊಟ್ಟ ಸ್ವಚ್ಛ ಭಾರತ್ ಎಂದರೆ ದೇಶ ಸೇವೆ ಆಗಲ್ಲ ಸಾರ್. ಕಸದಂತೆ ನೋಡುತ್ತಿರುವ ರೈತನನ್ನು ಮೇಲೆತ್ತಬೇಕಿದೆ. ಅನ್ನ ಕೊಡುವ ರೈತನ ಬದುಕಿಗೆ ನೆಮ್ಮದಿ ಸಿಗಬೇಕಿದೆ’ ಇದು ‘ರಣಂ’ ಚಿತ್ರದ ಡೈಲಾಗ್.

- ಹೀಗೆ ಚಿತ್ರದ ನಾಯಕ ಪ್ರಧಾನಿ ಮುಂದೆ ಕೂತು ಹೇಳುವ ಹೊತ್ತಿಗೆ ಚಿತ್ರದ ಕತೆ ಮತ್ತು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಲು ಹೊರಟಿರುವ ವಿಚಾರ ಸ್ಪಷ್ಟವಾಗುತ್ತದೆ.

 

ಹಾಗೆ ಈ ಸಂಭಾಷಣೆ ಬರುವ ಮುನ್ನ ಸಾಕಷ್ಟು ಘಟನೆಗಳು ನಡೆದಿರುತ್ತವೆ. ಇಂಜಿನಿಯರಿಂಗ್ ಓದುವ ಹುಡುಗರು ರಾಜಕಾರಣಿಯ ಅಕೌಂಟ್ ಹ್ಯಾಕ್ ಮಾಡಿ 200 ಕೋಟಿ ಲೂಟಿ ಮಾಡಿರುತ್ತಾರೆ, ಸರ್ಕಾರ ಕಟ್ಟಿಸಬೇಕಿದ್ದ ನೀರಾವರಿ ಪ್ರಾಜೆಕ್ಟ್ ಅನ್ನು ರೈತರೇ ಕಟ್ಟಿಸುವುದಕ್ಕೆ ಮುಂದಾಗುತ್ತಾರೆ, ದುಡ್ಡು ಲೂಟಿ ಮಾಡಿದ ಹುಡುಗರನ್ನು ಬೆನ್ನಟ್ಟಿ ಖಡಕ್ ಪೊಲೀಸ್ ಅಧಿಕಾರಿ ಬರುತ್ತಾರೆ. ಕಾಲೇಜು ಕಾರಿಡಾರ್‌ನಲ್ಲಿ ಲವ್ವು ಡವ್ವು ನಡೆಯುತ್ತದೆ. ರೈತರ ಆತ್ಮಹತ್ಯೆಯೂ ಸಂಭವಿಸುತ್ತದೆ. ಈ ಎಲ್ಲದರ ನಡುವೆ ಒಬ್ಬ ರೈತ ಹೋರಾಟಗಾರನೂ ಹುಟ್ಟಿಕೊಳ್ಳುತ್ತಾನೆ.

ಈ ಮೇಲಿನ ಇಷ್ಟೂ ಅಂಶಗಳ ಪೈಕಿ ರೈತ ಹೋರಾಟಗಾರ, ರಾಜಕಾರಣಿ, ಪೊಲೀಸ್ ಮತ್ತು ಆ ನಾಲ್ಕು ಮಂದಿ ವಿದ್ಯಾರ್ಥಿಗಳ ಸುತ್ತ ‘ರಣಂ’ ಚಿತ್ರದ ಕತೆ ಸಾಗುತ್ತದೆ. ಸಿನಿಮಾ ತಡವಾಗಿ ತೆರೆ ಮೇಲೆ ಬಂದರೂ ಕತೆ ಹಳೆಯದು ಅನಿಸಲ್ಲ ಎಂಬುದಕ್ಕೆ ನಿರ್ದೇಶಕ ಸಮುದ್ರ ಆಯ್ಕೆ ಮಾಡಿಕೊಂಡಿರುವ ವಿಚಾರಗಳೇ ಸಾಕ್ಷಿ. ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಮುಖಾಮುಖಿ ಆಗುವಂತೆ ಇಡೀ ಚಿತ್ರವನ್ನು ರೂಪಿಸುವ ನಿಟ್ಟಿನಲ್ಲಿ ನಿರ್ದೇಶಕರು ಸಾಕಷ್ಟು ಶ್ರಮಪಟ್ಟಿದ್ದಾರೆ.

 

ಇವರ ಶ್ರಮಕ್ಕೆ ಅಲ್ಲಲ್ಲಿ ಬ್ರೇಕ್ ಬಿದ್ದು, ಹಳಿ ತಪ್ಪಿದಂತೆ ಅನಿಸಿದರೂ ಸಿನಿಮಾ ನೋಡಲು ಅಡ್ಡಿ ಆಗಲ್ಲ. ಕಾಲೇಜು ಕಾರಿಡಾರ್‌ನಲ್ಲಿ ನಡೆಯುವ ಹಾಸ್ಯ ಮತ್ತು ಪ್ರೇಮ ಕತೆಯನ್ನು ಬದಿಗಿಟ್ಟು ಮುಖ್ಯ ಕತೆಗೇ ಹೆಚ್ಚು ಗಮನ ಕೊಟ್ಟಿದ್ದರೆ ಸಿನಿಮಾ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬರುವ ಸಾಧ್ಯತೆಗಳು ಇದ್ದವು.

ಚೇತನ್ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೆ ನಟಿಸಿರುವ ಚಿತ್ರ ಇದಾಗಿದ್ದರೂ ಇಬ್ಬರ ಕಾಂಬಿನೇಷನ್‌ನ ದೃಶ್ಯಗಳು ಹೆಚ್ಚು ಇಲ್ಲ. ಒಬ್ಬರು ರೈತ ಹೋರಾಟಗಾರ, ಮತ್ತೊಬ್ಬರು ಎನ್‌ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಪಾತ್ರ. ಇಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕಮರ್ಷಿಯಲ್ ಚಿತ್ರದಲ್ಲೂ ಇಂಥದ್ದೊಂದು ಕತೆಯನ್ನು ಹೇಳುವುದಕ್ಕೆ ಸಾಧ್ಯ, ಕಮರ್ಷಿಯಲ್ ಹೀರೋಗಳ ಚಿತ್ರಗಳಲ್ಲಿ ಸಾಮಾಜಿಕ ಜವಾಬ್ದಾರಿ ತೋರಬಹುದು ಎಂದು ತೋರಿಸಿಕೊಡುವಲ್ಲಿ ‘ರಣಂ’ ಒಂದು ಮಟ್ಟಿಗಾದರೂ ಯಶಸ್ಸು ಕಂಡಿದೆ ಎನ್ನಬಹುದು. ನಿರ್ಮಾಪಕ ಆರ್ ಶ್ರೀನಿವಾಸ್ ಅದ್ದೂರಿತನವನ್ನು ಛಾಯಾಗ್ರಾಹಕ ನಿರಂಜನ್ ಬಾಬು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅವರ ಕ್ಯಾಮೆರಾ ಕಣ್ಣಲ್ಲಿ ಸಾಹಸ ದೃಶ್ಯಗಳು ಚಿತ್ರದ ವೈ‘ವ ಹೆಚ್ಚಿಸುತ್ತವೆ.

 

ಹಾಗೆ ಒಂದೆರಡು ಹಾಡು ಕೂಡ ಕೇಳಲು ಚೆನ್ನಾಗಿವೆ. ಆದರೆ, ಇಬ್ಬರು ನಾಯಕರ ಹೊರತಾಗಿ ಹೆಚ್ಚಿನ ಕಲಾವಿದರು ಪರ‘ಾಷಿಕರೇ ಆಗಿರುವುದರಿಂದ ಅವರ ಪಾತ್ರಗಳು ಅಷ್ಟಾಗಿ ಕಾಡಲ್ಲ ಎಂಬುದು ಸತ್ಯ. ಜತೆಗೆ ದೊಡ್ಡ ದೊಡ್ಡ ಕಲಾವಿದರು ಇದ್ದರೂ ಅವರಿಗೂ ಪಾತ್ರದ ವ್ಯಾಪ್ತಿಗೆ ಚೌಕಟ್ಟು ಹಾಕಲಾಗಿದೆ. ಒಂದು ಸಾ‘ಾರಣ ಚಿತ್ರದಲ್ಲಿ ಮಹತ್ವ ಎನಿಸುವ ಕತೆಯನ್ನು ನೋಡಬೇಕು ಎಂದುಕೊಳ್ಳುವವರು ‘ರಣಂ’ ದರ್ಶನ ಮಾಡಿಕೊಳ್ಳಬಹುದು.

click me!