ಟಾಲಿವುಡ್-ಕಾಲಿವುಡ್ ಅಂಗಳದಲ್ಲಿ ಡಾಲಿ ಅಬ್ಬರ. ಕನ್ನಡ ಸಿನಿಮಾಗಳು ತಡವಾದರೂ ಬೇರೆ ರಾಜ್ಯದ ಸಿನಿಮಾಗಳಲ್ಲಿ ಹವಾ ಜೋರಾಗಿದೆ....
ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಪ್ರತಿ ವರ್ಷ ದೀಪಾವಳಿ ಹಬ್ಬದಂದು ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದರು ಆದರೆ ಈ ವರ್ಷ ತಮ್ಮ ಲೈಫ್ ಪಾರ್ಟನರ್‌ರನ್ನು ಪರಿಚಯಿಸಿಕೊಟ್ಟಿದ್ದಾರೆ. ಹೀಗಾಗಿ ಡಾಲಿ ಎಲ್ಲೇ ಹೋದರೂ ನಿಮ್ಮ ಹುಡುಗಿ ಬಗ್ಗೆ ಮಾತನಾಡಿ ಅನ್ನೋ ಪ್ರಶ್ನೆಗಳು ಹೆಚ್ಚಾಗಿದೆ. ಸದ್ಯ ಡಾಲಿ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲ ತೆಲುಗು ಮತ್ತು ತಮಿಳು ಅಂಗಳಕ್ಕೂ ಎಂಟ್ರಿ ಕೊಟ್ಟಾಗಿದೆ. ಕನ್ನಡ ಸಿನಿಮಾಗಳು ರಿಲೀಸ್‌ಗೆ ತಡವಾಗುತ್ತಿದ್ದರೂ ಡಾಲಿ ಸುಮ್ಮನಿಲ್ಲ.
ಹೌದು! ಡಾಲಿ ತೆಲುಗಿನ 'ಜೀಬ್ರಾ' ಸಿನಿಮಾದಲ್ಲಿ ನಟಿಸಿದ್ದಾರೆ. ಮುಂದಿನ ವಾರ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಚಿತ್ರತಂಡದ ಜೊತೆ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದರು. ಇದೀಗ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿದೆ. ಈವೆಂಟ್ ಇನ್ನು ಹೆಚ್ಚು ಕಲರ್‌ಪುಲ್ ಮಾಡಲು ಮೆಗಾ ಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿರು ಜೊತೆ ಡಾಲಿ ಒಂದು ಸಿನಿಮಾದಲ್ಲಿ ನಟಿಸಬೇಕಿತ್ತು ಆದರೆ ಸಣ್ಣ ಕಾರಣದಿಂದ ಅವಕಾಶ ಕೈ ತಪ್ಪಿತ್ತು. ಈ ವಿಚಾರವನ್ನು ವೇದಿಕೆಯ ಮೇಲೆ ಹಂಚಿಕೊಂಡಿದ್ದಾರೆ.
undefined
ಕೋರ್ಟ್ ಜಾಮೀನು ಕೊಟ್ಟರೂ ಸರ್ಜರಿ ಮಾಡಿಸಿಕೊಳ್ಳದ ದರ್ಶನ್
'ಚಿರಂಜೀವಿ ಸರ್ ಜೊತೆ ವಾಲ್ತೇರು ವೀರಯ್ಯ' ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಬಾಬಿ ಸಿಂಹ ಮಾಡಿದ್ದ ಪಾತ್ರ ನಾನೇ ಮಾಡಬೇಕಿತ್ತು ಆದರೆ ಸಾಧ್ಯವಾಗಲಿಲ್ಲ. ಆ ಅವಕಾಶ ಮಿಸ್ ಆಗಿತ್ತು. ಖಂಡಿತ ನಿಮ್ಮ ಜೊತೆ ಕೆಲಸ ಮಾಡುವ ಆಸೆ ಇದೆ' ಎಂದು ಧನಂಜಯ್ ಮಾತನಾಡಿದ್ದಾರೆ. ಬಿಡುವು ಮಾಡಿಕೊಂಡು ತಮ್ಮ ಸಿನಿಮಾ ಪ್ರಚಾರ ಮಾಡುತ್ತಿರುವುದಕ್ಕೆ ಚಿರು ಸರ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೀಬ್ರಾ ಒಂದು ಕ್ರೈಂ ಥ್ರಿಲ್ಲರ್ ಸಿನಿಮಾ, ಇದು ನೈಜ ಘಟನೆಯನ್ನು ಪ್ರೇರಣೆಗೊಂಡು ಮಾಡಿರುವ ಕಥೆ. ಈಶ್ವರ್ ಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದು ಸತ್ಯದೇವ್ ಹೀರೋ ಆಗಿ ನಟಿಸಿದ್ದಾರೆ. ಬ್ಯಾಂಕ್ ಫ್ರಾಡ್ ಸುತ್ತಾ ಚಿತ್ರ ಕತೆ ಸಾಗಲಿದ್ದು ಖಡಕ್ ವಿಲನ್ ಆಗಿ ಡಾಲಿ ಧನಂಜಯ್ ಅಬ್ಬರಿಸಲಿದ್ದಾರೆ.