ರಾಕೇಶ್ ಅಡಿಗ, ಸುನೀಲ್ ರಾವ್‌ 'ಮರ್ಯಾದೆ ಪ್ರಶ್ನೆ'ಗೆ ವಿಶ್ ಮಾಡಿದ ಕಿಚ್ಚ ಸುದೀಪ!

By Sathish Kumar KH  |  First Published Nov 12, 2024, 8:22 PM IST

ಮರ್ಯಾದೆ ಪ್ರಶ್ನೆ ಸಿನಿಮಾದ ಟ್ರೇಲರ್‌ಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬಗಳ ಕಷ್ಟಗಳನ್ನು ಚಿತ್ರಿಸುವ ಈ ಚಿತ್ರ ನವೆಂಬರ್ 22 ರಂದು ಬಿಡುಗಡೆಯಾಗಲಿದೆ.


ಬೆಂಗಳೂರು (ನ.12): ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನದ ಮೂಲಕ ಮರ್ಯಾದೆ ಪ್ರಶ್ನೆ ಸಿನಿಮಾ ಮಾಡಿರುವ ಹಳಬರು ಮತ್ತು ಹೊಸಬರ ಮಿಶ್ರಣದ ತಂಡಕ್ಕೆ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶುಭಾಶಯ ಕೋರಿದ್ದಾರೆ.

ಮರ್ಯಾದೆ ಪ್ರಶ್ನೆ ಎಂಬ ಕಾನ್ಸೆಪ್ಟ್ ನನಗೆ ತುಂಬಾ ಇಷ್ಟವಾಗಿದೆ. ಈ ಸಿನಿಮಾದ ಟ್ರೇಲರ್ ಮೂಲಕ ನೀವು ಏನು ತೋರಿಸಲು ಹೊರಟಿದ್ದೀರಿ ಎಂದು ಅರ್ಥ ಮಾಡಿಕೊಮಡು ಖುಷಿಯಾಗಿದೆ. ಇನ್ನು ಟ್ರೇಲರ್‌ನಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನಿಮಾ ಬರುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ನಿಮಗೆಲ್ಲರಿಗೂ ಶುಭವಾಗಲಿ. ಮರ್ಯಾದೆ ಪ್ರಶ್ನೆ ಸಿನಿಮಾ ತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಕೋರಿದ್ದಾರೆ.

Tap to resize

Latest Videos

undefined

ಮರ್ಯಾದೆ ಪ್ರಶ್ನೆಯ ಸಾರಾಂಶ: ಮರ್ಯಾದೆ ಪ್ರಶ್ನೆ ಸಿನಿಮಾದ ಟ್ರೇಲರ್ ನೋಡಿದವರಿಗೆ ಮಧ್ಯಮ ವರ್ಗದ ಹುಡುಗರು, ಕುಟುಂಬಗಳು ಹಾಗೂ ಶ್ರೀಮಂತರ ನಡುವೆ ಸಮಾಜದಲ್ಲಿ ನಡೆಯುವ ಪೈಪೋಟಿ, ವೈಷಮ್ಯ ಹಾಗೂ ಕುತಂತ್ರಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಎಲ್ಲ ನಾಯಕರು ಮಧ್ಯಮ ವರ್ಗದ ಕುಟುಂಬವನ್ನು ಪ್ರತಿನಿಧಿಸಿದರೆ, ಉಳಿದಂತೆ ಹೊಸಬರು ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲ ಮ್ಯಾನರಿಸಂ ಉತ್ತಮವಾಗಿ ಕಂಡುಬಂದಿದ್ದು, ಸಿನಿಮಾದಲ್ಲಿ ಏನೆಲ್ಲಾ ಪರದಾಟ, ಪೀಕಲಾಟ, ಬಡಿದಾಟ, ಪ್ರೀತಿ, ಮಮತೆ ಹಾಗೂ ಮಧ್ಯಮ ವರ್ಗದ ಕುಟುಂಬ ಎದುರಿಸುವ ಕಷ್ಟ ಕಾರ್ಪಣ್ಯಗಳನ್ನು ತೋರಿಸಲಾಗುತ್ತದೆ ಎಂಬ ನಿರೀಕ್ಷೆಯಂತೂ ಹುಟ್ಟುಹಾಕಿದೆ. ಇದೇ ನ.22ರಂದು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: ಟೇಕ್ ಇಟ್ ಈಸಿ, ಏನೇ ಬಂದರೂ ನೋಡಿಕೊಳ್ಳೋಣ: ಇದು 'ಮರ್ಯಾದೆ ಪ್ರಶ್ನೆ'!

ಕನ್ನಡ ಚಿತ್ರರಂಗದಲ್ಲಿ ಬಹುದಿನಗಳ ಕಾಲ ಮತ್ತೆ ಅದೃಷ್ಟ ಪರೀಕ್ಷೆ ಮುಂದಾಗಿರುವ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ ಮತ್ತು ತೇಜು ಬೆಳವಾಡಿ ಅವರು 'ಮರ್ಯಾದೆ ಪ್ರಶ್ನೆ' ಸಿನಿಮಾದ ಮೂಲಕ ನ.22ರಂದು ವೀಕ್ಷಕರ ಮುಂದೆ ಬರಲಿದ್ದಾರೆ. ಆದರೆ, ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಇದಕ್ಕೆ ಸ್ವತಃ ಕಿಚ್ಚ ಸುದೀಪ್ ಶುಭ ಕೋರಿದ್ದು, ಇದಕ್ಕೆ ರಾಕೇಶ್ ಅಡಿಗ, ಶೈನ್ ಶೆಟ್ಟಿ ಸೇರಿ ಎಲ್ಲರೂ ತುಂಬಾ ಆತ್ಮೀಯವಾಗಿ ಸ್ವಾಗತಿಸಿ ಧನ್ಯವಾದ ತಿಳಿಸಿದ್ದಾರೆ.

Found it Simple & Strong

Loved the Trailer.

Good Luck Team✨ @nagrajsomayji pic.twitter.com/zk4xjn4buy

— Kichcha Sudeepa (@KicchaSudeep)

ಇತ್ತೀಚೆಗೆ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಸಕ್ಕತ್ ಸ್ಟುಡಿಯೊದ ಸಂಸ್ಥಾಪಕ ಆರ್.ಜೆ ಪ್ರದೀಪ್, ಚಿತ್ರದ ನಿರ್ದೇಶಕ ನಾಗರಾಜ್ ಸೋಮಯಾಜಿ ಅವರು, 'ಸಕ್ಕತ್ ಸ್ಟುಡಿಯೊ ನಮ್ಮ ಕನಸು. ಒಳ್ಳೆಯ ಸಿನಿಮಾ ಮಾಡಲು ನಾಗರಾಜ್ ಕಥೆ ಬಗ್ಗೆ ಚರ್ಚೆ ಮಾಡಿ, ಇಬ್ಬರು ಸೇರಿ ಸಿನಿಮಾಗಾಗಿ ಕೈ ಜೋಡಿಸಿದೆವು. ರಾಜ್ಯದಲ್ಲಿ ಮಾತ್ರವಲ್ಲದೇ ಹೈದರಾಬಾದ್, ಚೆನ್ನೈ ಹೀಗೆ ಬೇರೆ ರಾಜ್ಯಗಳ ಜೊತೆಗೆ ವಿದೇಶದಲ್ಲಿಯೂ 'ಮರ್ಯಾದೆ ಪ್ರಶ್ನೆ' ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಯೂರ್, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಮುಖ್ಯ ತಾರಾಗಣದಲ್ಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಥ್ರಿಲ್ಲಿಂಗ್ ಅಪ್‌ಡೇಟ್ ಕೊಟ್ಟ ಸಕ್ಕತ್ ಸ್ಟುಡಿಯೋ, ಸದ್ಯವೇ ತೆರೆಗೆ ಬರಲಿದೆ 'ಮರ್ಯಾದೆ ಪ್ರಶ್ನೆ'..!

click me!